ವಿಜಯಪುರ: ನಮ್ಮ ಹಿರಿಯರು ಹಾಕಿಕೊಟ್ಟ ಆಚಾರ-ವಿಚಾರ, ನಡೆ-ನುಡಿ, ಸಂಪ್ರದಾಯ-ನಂಬಿಕೆಗಳು ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿವೆ.
ಜಾತ್ರೆ – ಉತ್ಸವಗಳು ನಮಗೆ ಸಂಸ್ಕಾರ ಕಲಿಸುವ ಪಾಠ ಶಾಲೆಗಳಾಗಬೇಕು. ಅಂದಾಗ ಮಾನವನ ಜೀವನ ಮೌಲ್ಯಗೊಂಡು ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ ಎಸ್ ನಾಡಗೌಡ್ರ (ಅಪ್ಪಾಜಿ) ಹೇಳಿದರು.
ಮುದ್ದೇಬಿಹಾಳ ತಾಲ್ಲೂಕಿನ ಅಯ್ಯನಗುಡಿಯಲ್ಲಿ ಗಂಗಾಧರೇಶ್ವರ ಜಾತ್ರೆ ಪ್ರಯುಕ್ತ ಹಮ್ಮಿಕೊಂಡ “ಅಯ್ಯನಗುಡಿ ಉತ್ಸವ ೨೦೨೪ ” ಉದ್ಘಾಟಿಸಿ ಮಾತನಾಡುತ್ತಾ, ಇಂದು ಯುವಕರು ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವೆಸಗುತ್ತಾ ನಮ್ಮ ಸನಾತನ ಸಂಪ್ರದಾಯ ದಿಕ್ಕರಿಸುತ್ತಿದ್ದಾರೆ. ಪಾಲಕರು ಮಕ್ಕಳ ನಡುವಳಿಕೆಯ ಮೇಲೆ ನಿಗಾ ಇರಿಸಿ, ಅವರ ಬದುಕು ಸುಂದರವಾಗಿಸಲು ಕಾರಣಿಭೂತರಾಗಲು ಕರೆ ನೀಡಿದರು.
ಜಾತ್ರೆ – ಉತ್ಸವಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದ ಜನಪದ ಸಾಹಿತಿ ಶಂಕರ ಬೈಚಬಾಳ, ಪ್ರತಿಯೊಬ್ಬ ಮನುಷ್ಯ ಸಾಮಾಜಿಕ ಹೊಣೆಗಾರಿಕೆಯಿಂದ ಬದುಕಬೇಕು. ನನ್ನ ಪಾಲಿನ ಕರ್ತವ್ಯ ನಾನು ಮೌಲ್ಯಯುತವಾಗಿ ನಡೆಸಿಕೊಂಡು ಹೋಗಬೇಕು. ಹಿರಿಯರ ಅನುಭವದ ಕುಲುಮೆಯಲ್ಲಿ ಹುಟ್ಟಿಕೊಂಡ ಜಾತ್ರೆ, ಉತ್ಸವ, ಆಚರಣೆ, ಸಂಪ್ರದಾಯ, ನಂಬಿಕೆಗಳು ಮನುಷ್ಯನಲ್ಲಿ ಶ್ರೇಷ್ಠ ಸಂಸ್ಕೃತಿ ತುಂಬುವಂತೆ ನಾವು ಜವಾಬ್ದಾರಿ ಹೊರಬೇಕು. ಸಂಸ್ಕೃತಿ ಕಲಿಯದಿದ್ದರೆ ಮನೆ ಕೆಟ್ಟು ದೇಶ ಕೆಟ್ಟೀತು ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಡಾ.ಬಲವಂತ ಪೋಲಿಸ್ ಪಾಟೀಲ (ಉಣ್ಣಿಬಾವಿ) ಮಾತನಾಡಿದರು.
ವೇದಿಕೆಯಲ್ಲಿ ರಾಯನಗೌಡ ತಾತರಡ್ಡಿ, ನ್ಯಾಯವಾದಿ ಹಣಮಂತ ಲ ಸರೂರ, ಟಿಡಿಬಿ ಸದಸ್ಯ ಸಿದ್ದಣ್ಣ ಆಲಕೊಪ್ಪರ, ಪಿಎಚ್ಡಿ ಬ್ಯಾಂಕ್ ನಿರ್ದೇಶಕ ದಾವಲಸಾಬ ಸುಲ್ತಾನಪೂರ, ಬಿಜ್ಜೂರ ಗ್ರಾಂ ಪಂ ಅಧ್ಯಕ್ಷೆ ಯಲ್ಲವ್ವ ದು ಮಾದರ, ಉಪಾಧ್ಯಕ್ಷ ಲಕ್ಷಣ ಹು ರಬ್ಲರ, ಸದಸ್ಯೆ ಶರಣಮ್ಮ ಹೊಸಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜೂ ವಿಷ್ಣುವರ್ಧನ್, ಚಲನ ಚಿತ್ರ ನಿರ್ಮಾಪಕ ವಿಶಾಲ ನಾಗಬೇನಾಳ, ಮತ್ತಿತರ ಕಲಾವಿದರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಎಂ ಬಿ ಧನಗೊಂಡ ಪ್ರಾರ್ಥನೆ, ಟಿ ಎಲ್ ಚವ್ಹಾಣ ಸ್ವಾಗತ, ಬಿ ಕೆ ರುದ್ರಗಂಟಿ ನಿರೂಪಣೆ ಮತ್ತು ಎಂ ಆಯ್ ಮುಜಾವರ ವಂದನಾರ್ಪಣೆ ಸಲ್ಲಿಸಿದರು.
ಇಡಿರಾತ್ರಿ ರಸಮಂಜರಿ, ಜಾನಪದ ಕಲಾ ಪ್ರದರ್ಶನ ಮತ್ತು ನಾಟಕ ಪ್ರದರ್ಶನ ನಡೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

