ಮುದ್ದೇಬಿಹಾಳ: ಸಧ್ಯದ ಪರಿಸ್ಥಿಯಲ್ಲಿ ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದು ಸಮಾಜಕ್ಕೆಮಾತ್ರ ಸೀಮಿತವಾಗುತ್ತಿವೆ. ಸರ್ಕಾರ ಕೂಡಲೇ ಮಹಾನ್ ವ್ಯಕ್ತಿಗಳನ್ನು ರಾಷ್ಟ್ರೀಯ ನಾಯಕರು ಅಂತಾ ಘೋಷಿಸಬೇಕು ಎಂದು ಹಿಂದೂ ಪರ ಸಂಘಟನೆಗಳ ಮುಖಂಡ ಉದಯ ರಾಯಚೂರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಜಯಂತ್ಯೋತ್ಸವಗಳು ನೆಪಮಾತ್ರಕ್ಕೆ ಒಂದು ದಿನದ ಸಂಭ್ರಮಕ್ಕೆ ಸೀಮಿತಗೊಳಿಸದೇ ರಾಷ್ಟ್ರೀಯ ಪರಿಕಲ್ಪನೆಯನ್ನು ಕೊಟ್ಟಲ್ಲಿ ಜಯಂತಿಗಳ ಆಚರಣೆಗಳಿಗೆ ನಿಜವಾದ ಮೌಲ್ಯ ಬರುತ್ತದೆ ಎಂದರು.
ಕ್ಷತ್ರೀಯ ಸಮಾಜದ ಮುಖಂಡ ನೇತಾಜಿ ನಲವಡೆ ಮಾತನಾಡಿ, ಕರ್ನಾಟಕದಲ್ಲಿ ನಮ್ಮ ಸಮಾಜದ ಒಳಪಂಗಡಗಳ ಬಾಂಧವರು ೬೦ ಲಕ್ಷದಷ್ಟು ಇದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ೧೩ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಸಮಾಜದಲ್ಲಿರದ ಒಗ್ಗಟ್ಟು. ನಮ್ಮಲ್ಲಿಯ ಅಸಮಾಧನಗಳನ್ನು ಹೊರತರದೇ ಎಲ್ಲ ಬಾಂಧವರೂ ಒಂದಾಗಿ ಸಂಘಟನೆಯನ್ನು ಮುಂದುವರೆಸುವಂತಾಗಬೇಕು ಎಂದರು.
ಪ್ರೊ.ಪ್ರಕಾಶ ನರಗುಂದ ವಿಶೇಷ ಉಪನ್ಯಾಸ ನೀಡಿದರು.
ಸಮಾಜದ ಮುಖಂಡ ರಾಜೇಂದ್ರ ನಲವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿರಸ್ತೇದಾರರಾದ ಎಂ.ಎ.ಬಾಗೇವಾಡಿ, ಎಸ್.ಎಂ.ಸಜ್ಜನ, ಭರತ ಭೋಸಲೆ, ನಿಂಗರಾಜ ಮಹೇಂದ್ರಕರ, ರವಿ ಭೋಸಲೆ, ಅಜಯ ಭೋಸಲೆ, ಮಾರುತಿ ನಲವಡೆ, ಗಜಾನನ ನಲವಡೆ, ಚಂದ್ರು ಕಲಾಲ, ಯಶವಂತ ಕಲಾಲ, ರಾಜ ನಾರಾಯಣ ನಲವಡೆ, ಸಂತೋಷ ಚೌವ್ಹಾಣ, ಕಿರಣ ದುದಾನೆ, ಹಣಮಂತ ನಾಲವಡೆ, ವಿಶ್ವನಾಥ ಸಿಂಧೆ, ರಾಜು ಜಾಧವ, ಹರೀಶ ಬೆವೂರ, ವಿಠ್ಠಲ ಜಾಧವ, ಅನಿಲ ಜಾಧವ, ಸಚೀನ ಸಾಳುಂಕೆ, ಶಂಕರ ಪವಾರ, ಬಸವರಾಜ ಸೂರ್ಯವಂಶಿ, ರಾಹುಲ ಕನಸೆ ಸೇರಿದಂತೆ ಮತ್ತೀತರರು ಇದ್ದರು.
ಕಾರ್ಯಕ್ರಮಕ್ಕೂ ಮೊದಲು ಶಿವಾಜಿ ಮಹಾರಾಜರ ಭಾವಚಿತ್ರವನ್ನು ಪಟ್ಟಣದ ಬಜಾರ ಹನುಮಾನ ದೇವಸ್ಥಾನದಿಂದ ಗ್ರಾಮದೇವತೆ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯ ವರೆಗೆ ಡಿ.ಜೆ ಮೂಲಕ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ ಚಾಲನೆ ನೀಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ಎಂ.ಎಸ್.ನಾವದಗಿ ವಕೀಲರು, ಗಣ್ಯ ಉದ್ಯಮಿ ಸಂಗಣ್ಣ ಬಿರಾದಾರ (ಜಿಟಿಸಿ) ಸೇರಿದಂತೆ ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗಿಯಾಗಿ ಮೆರಗು ಹೆಚ್ಚಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

