ಆಲಮಟ್ಟಿ: ಜಿಲ್ಲೆಯ ೯೯ ಕೆರೆಗಳ ಭರ್ತಿಗಾಗಿ ಸೋಮವಾರದಿಂದ ಆಲಮಟ್ಟಿ ಎಡದಂಡೆ ಕಾಲುವೆಯ ಮೂಲಕ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾಗೂ ಬಳೂತಿ ಜಾಕವೆಲ್ ಮೂಲಕ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಲಾಯಿತು.
ಆ ಕೆರೆಗಳ ಸಾಮರ್ಥ್ಯದ ಶೇ ೫೦ ರಷ್ಟು ಕೆರೆಗಳನ್ನು ಭರ್ತಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ:
ಕಾಲುವೆಗೆ ಹರಿಸುತ್ತಿರುವ ನೀರನ್ನು ಕಟ್ಟುನಿಟ್ಟಾಗಿ ಕೆರೆಗಳ ಭರ್ತಿಗೆ ನಾನಾ ಇಲಾಖೆಯವರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು, ನಿತ್ಯವೂ ಕೆರೆಗಳ ಭರ್ತಿಯ ಬಗ್ಗೆ ಚಿತ್ರ ಸಮೇತ ವರದಿ ಸಲ್ಲಿಸಬೇಕು, ನೀರು ಯಾವುದೇ ಕಾರಣಕ್ಕೂ ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಬಿಸಲಿನ ಪ್ರಖರತೆ ಹೆಚ್ಚುತ್ತಿದ್ದು, ನೀರಿನ ಸಂಗ್ರಹ, ಬಳಕೆಯ ಬಗ್ಗೆ ಎಚ್ಚರದಿಂದ ಹೆಜ್ಜೆ ಇಡಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
೯೯ ಕೆರೆಗಳು:
ಕೆಲ ತಾಂತ್ರಿಕ ತೊಂದರೆ ಹಾಗೂ ಕೆರೆಗಳಿಗೆ ಸಂಪರ್ಕಿಸುವ ಕಾಲುವೆಯ ಜಾಲ ಇಲ್ಲದ್ದರಿಂದ ಮುಳವಾಡ ಏತ ನೀರಾವರಿ ಯೋಜನೆಯಡಿ ಒಂದು, ಚಿಮ್ಮಲಗಿ ಯೋಜನೆಯಡಿ ಏಳು ಕೆರೆಗಳನ್ನು ಭರ್ತಿ ಮಾಡುತ್ತಿಲ್ಲ, ಹೀಗಾಗಿ ೧೦೭ ಕೆರೆಗಳಲ್ಲಿ ಕೇವಲ ೯೯ ಕೆರೆಗಳ ಭರ್ತಿ ಮಾಡಲಾಗುತ್ತಿದೆ.
೧.೮ ಟಿಎಂಸಿ ಅಡಿ ನೀರು:
ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಿಡಲಾದ ೫.೫ ಟಿಎಂಸಿ ಅಡಿ ನೀರಿನ ಪೈಕಿ ಸದ್ಯ ೧.೮ ಟಿಎಂಸಿ ಅಡಿ ನೀರು ಬಳಕೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದಾರೆ.
ಆ ಪ್ರಕಾರ ನೀರು ಬಿಡಲು ಸಿದ್ದತೆ ಮಾಡಿಕೊಳ್ಳಲಾಗಿದೆ, ಮೊದಲು ಕಾಲುವೆಯ ಕೊನೆ ಹಂತದ ಕೆರೆಗಳ ಭತರ್uಟಿಜeಜಿiಟಿeಜ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ, ಆದರೆ ಯಾವುದೇ ಕಾರಣಕ್ಕೂ ಕೃಷಿ ಬಳಕೆಗೆ ಈ ನೀರು ಬಳಸುವಂತಿಲ್ಲ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ತಿಳಿಸಿದರು.
ನೀರು ಸದ್ಬಳಕೆಯ ಬಗ್ಗೆ ಪ್ರತಿನಿತ್ಯವೂ ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಫೆ.೧೯ ರಿಂದ ಮಾ.೧೦ ರವರೆಗೆ ನಾನಾ ಹಂತಗಳಲ್ಲಿ ನೀರು ಹರಿಯಲಿದೆ.
ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಮತ್ತು ಪಶ್ಚಿಮ ವ್ಯಾಪ್ತಿಯ ೩೪ ಕೆರೆಗಳ ಪೈಕಿ ೨೭ ಹಾಗೂ ಮುಳವಾಡ ಪೂರ್ವ , ಪಶ್ಚಿಮ ಕಾಲುವೆ ಹಾಗೂ ಮುಳವಾಡ ಮೂರನೇ ಹಂತದ ಕಾಲುವೆ ವ್ಯಾಪ್ತಿಯ ೭೩ ಕೆರೆಗಳ ಪೈಕಿ ೭೨ ಕೆರೆಗಳಿಗೆ ನೀರು ಹರಿಸಲಾಗುತ್ತದೆ.
Subscribe to Updates
Get the latest creative news from FooBar about art, design and business.
Related Posts
Add A Comment

