Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಮಾನವ ವಿಶ್ವ ಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ನೀಡಿದ್ದಾನೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಮಂಗಳವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ವಜ್ಞ ಎಂದರೆ ನಾನು ಎಲ್ಲವನ್ನು ತಿಳಿದವನು ಎಂದರ್ಥವಲ್ಲ. ಸರ್ವರಲ್ಲೂ ಬೆರೆತು ಸರ್ವರಿಂದಲೂ ಒಂದೊಂದು ನುಡಿ ಕಲಿತವನು ಎಂದು ಅರ್ಥವಾಗುತ್ತದೆ. ಎಲ್ಲರನ್ನೂ ಹಿರಿಯರಾಗಿ ಕಂಡು ಎಲ್ಲರನ್ನೂ ಗುರುವಾಗಿ ಕಂಡು ಎಲ್ಲರಲ್ಲಿರುವ ವಿದ್ಯೆಯನ್ನು ಗ್ರಹಿಸಿದವನೆ ನಿಜವಾದ ನಾನು ಜ್ಞಾನಿ ಎನಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಸರ್ವಜ್ಞ ಮಹಾಕವಿಯ ವಚನಗಳು ಇಂದಿಗೂ ಕೂಡ ಜನಮಾನಸದಲ್ಲಿ ಹಾಸುಹೊಕ್ಕಾಗಿವೆ. ವಿಶ್ವ ಬಾಂಧವ್ಯದ ತತ್ವವನ್ನು ಅಳವಡಿಸಿಕೊಂಡು ಸಮಾಜದ ಹುಳುಕುಗಳನ್ನು ನಿರ್ಭೀತಿಯಿಂದ ಟೀಕಿಸಿ ಮನಕುಲವನ್ನು ತಿದ್ದಿದ ಸರಳತೆಯ ದೈವ ಸರ್ವಜ್ಞರು. ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಇಡೀ ಸಾರ ಹಿಡಿದಿಟ್ಟು ಅಮೂಲ್ಯ…
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಾಲೂಕಾಡಳಿತದಿಂದ ಸರ್ವಜ್ಞ ಜಯಂತಿ ಆಚರಿಸಲಾಯಿತು. ತಾಲೂಕಾಡಳಿತ ಪರವಾಗಿ ಸರ್ವಜ್ಞ ಭಾವಚಿತ್ರಕ್ಕೆ ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ಮಲ್ಲೇಶಿ ಕುಂಬಾರ ಅವರು ಪೂಜೆ ಸಲ್ಲಿಸಿದರು.ಶಿಕ್ಷಕ ಸಿ.ಜಿ.ಕುಂಬಾರ ಮಾತನಾಡಿ, ಸರ್ವಜ್ಞ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಎಲ್ಲ ಸಮುದಾಯಕ್ಕೆ ಆದರ್ಶಪ್ರಾಯವಾಗಿದ್ದಾರೆ. ಸರ್ವಜ್ಞರು ಮನುಕುಲಕ್ಕೆ ಶ್ರೇಷ್ಠ eನವನ್ನು ನೀಡಿದ್ದಾರೆ. ಇದನ್ನು ಇಂದಿನ ಯುವಜನಾಂಗ ತಿಳಿದುಕೊಳ್ಳಬೇಕಿದೆ. ಸರ್ವಜ್ಞರ ವಿಚಾರಗಳನ್ನು ಅಳವಡಿಸಿಕೊಂಡರೆ ಜೀವನ ಮೌಲ್ಯ ವೃದ್ಧಿಯಾಗುತ್ತದೆ ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಮಂಜು ಹಳ್ಳೂರ, ಆರ್.ವಿ.ಘಾಟಗೆ, ನಿರ್ಮಲಾ ಪೂಜಾರಿ, ಕುಂಬಾರ ಸಮಾಜದ ಮುಖಂಡರಾದ ಸುಭಾಸ ಚಕ್ರಮನಿ, ಮಲ್ಲಪ್ಪ ಕುಂಬಾರ, ಅಪ್ಪು ಕುಂಬಾರ, ಶ್ರೀಧರ ಕುಂಬಾರ, ಶ್ರೀಶೈಲ ಕುಂಬಾರ,ಚಿದಾನಂದ ಕುಂಬಾರ, ಸಿದ್ದಲಿಂಗ ಕುಂಬಾರ, ಕಾಶೀನಾಥ ಕುಂಬಾರ ಇತರರು ಇದ್ದರು.
ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರ ಬಡಾವಣೆಯ ಸಿಟಿಎಸ್ ನಂ. ೨೧೪೨/೩ ಹಾಗೂ ೨೧೪೨/೪ ಇವುಗಳಲ್ಲಿ ವಸತಿ ಶಾಲೆ ಪ್ರಾರಂಬಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.ಈ ನಿವೇಶನಗಳನ್ನು ಕೇವಲ ಗ್ರಹಬಳಕೆಗೆ ಅಂತಾ ವಿನ್ಯಾಸ ಮಾಡಿ ಮಾರಾಟ ಮಾಡಿದ್ದು ಖರೀದಿ ಪತ್ರದಲ್ಲಿ ಸ್ಪಷ್ಟವಾಗಿ ಗ್ರಹ ಬಳಕೆಗೆ ಮೀಸಲಾದ ನಿವೇಶನಗಳು ಅಂತಾ ನಮೂದಿಸಲಾಗಿದೆ. ಆದರೆ ನಿವೇಶನಗಳ ಮಾಲೀಕರು ರಸ್ತೆಗಳನ್ನು ಅತಿಕ್ರಮಣ ಮಾಡಿ ನೆಲಮಹಡಿ ಕಟ್ಟಲು ಭೂಮಿಯನ್ನು ಅಗೆದಿರುತ್ತಾರೆ. ಇಲ್ಲಿ ವಸತಿ ಶಾಲೆ ಅಥವಾ ಶಾಲೆಗಾಗಿ ಕಟ್ಟಡ ಕಟ್ಟಲಾಗುತ್ತಿದೆ. ವಸತಿ ಪ್ರದೇಶದ ಮಧ್ಯೆ ಶಾಲೆ ಪ್ರಾರಂಭಿಸಲು ನಮ್ಮದು ಸಂಪೂರ್ಣ ತಕರಾರು ಇದೆ. ಈ ಕುರಿತು ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ತಕರಾರು ಸಲ್ಲಿಸಿದ್ದು ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುತ್ತಾರೆ. ಈ ವಿಷಯ ಮಾಧ್ಯಮದಲ್ಲಿ ಪ್ರಕಟವಾಗಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯೊಬ್ಬರು ಜಾಗೆಯನ್ನು ಜಿಪಿಎಸ್ ಮಾಡಿಕೊಂಡು ಹೋಗಿದ್ದನ್ನು ನಾವು ಬಲವಾಗಿ ವಿರೋಧಿಸುತ್ತೇವೆ.ಇಲ್ಲಿ ಶಾಲೆ ಪ್ರಾರಂಭಿಸುವದರಿಂದ ಸುತ್ತ ಮನೆಗಳಲ್ಲಿ ಯಾವುದೇ ಶುಭ…
ಇಂಡಿ: ಪಟ್ಟಣದ ವಿಜಯಪೂರ ರಸ್ತೆಯ ಕ್ರೀಡಾಂಗಣ ಪಕ್ಕದಲ್ಲಿ ಫೆ. ೨೪ ರಂದು ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸಭಾ ಭವನ ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಸರ್ವ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗಾಣಿಗ ಸಮಾಜದ ಅಧ್ಯಕ್ಷ ಎ.ಎಸ್. ಗಾಣೀಗೇರ, ಮುಖಂಡ ಸಿದ್ದಲಿಂಗ ಹಂಜಗಿ ಮನವಿ ಮಾಡಿದರು.ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗಾಣಿಗ ಸಮಾಜದ ಗುರು ಪೀಠಾಧ್ಯಕ್ಷ ಡಾ. ಜಯ ಬಸವಕುಮಾರ ಸ್ವಾಮೀಜಿ ಅವರ ಪ್ರೇರಣಾ ಶಕ್ತಿಯಿಂದ ಇಂಡಿಯಲ್ಲಿ ೨೦೨೧ ರ ಫೆ.೭ ರಂದು ನಡೆದ ಗಾಣಿಗ ಸಮಾಜ ಜನ ಜಾಗೃತಿ ಸಭೆಯಲ್ಲಿ ಸಮಾಜದ ಹಿರಿಯರು ಕೈಕೊಂಡ ನಿರ್ಧಾರದಂತೆ ೨ ಎಕರೆ ನಿವೇಶನ ಖರೀದಿಸಿದ್ದರ ಪ್ರತಿಫಲ ಈಗ ಸಭಾಭವನ ಭೂಮಿಪೂಜೆ ನಡೆಯುತ್ತಿದೆ ಎಂದರು.ಗಾಣಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸರಕಾರದಿಂದ ೫ ಕೋಟಿ ರೂ ಅನುದಾನ ನೀಡುವ ಭರವಸೆ ನೀಡಿದ್ದರು. ಈ…
ಇಂಡಿ: ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯ ಕೊಡುಗೆಯಾಗಿದೆ. ತ್ರಿಪದಿಗಳು ಸಾರುವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ. ಇವುಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ ಎಂದು ಸರ್ವಜ್ಞ ಕರಿಯರ್ ಅಕಾಡೆಮಿಯ ಅಧ್ಯಕ್ಷ ನಾಗೇಶ ಹೆಗಡ್ಯಾಳ ಹೇಳಿದರು.ಅವರು ಮಂಗಳವಾರ ಪಟ್ಟಣದ ಸರ್ವಜ್ಞ ಕರಿಯರ್ ಅಕಾಡೆಮಿಯಲ್ಲಿ ಹಮ್ಮಕೊಂಡಿದ್ದ ಸರ್ವಜ್ಞ ಜಯಂತಿ ಅಂಗವಾಗಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಮಾನವ ವಿಶ್ವ ಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ನೀಡಿದ್ದಾನೆ. ಇದಿನ ಯುವ ಜನಾಂಗ ತ್ರಿಪದಿಗಳನ್ನು ಓದಿ ಅರ್ಥೈಸಿಕೊಂಡು ಜೀವನ ಸಾಗಿಸಿದರೆ ಜೀವನ ಪಾವನವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಈರನಗೌಡ ಪಾಟೀಲ್, ಲಕ್ಷ್ಮಣ ಪಾರೆ, ರಮೇಶ ಮಂಗೂಣಿ ಹಾಗೂ ಸ್ಪರ್ಧಾರ್ಥಿಗಳು ಇದ್ದರು.
ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಇಂಡಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಕಟ್ಟಡ ಫೆ,೨೮ ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ, ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಪರಮಾನಂದ ಚಾಂದಕವಟೆ ಹೇಳಿದರು.ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘಕ್ಕೆ ೧೯೯೪ ರಲ್ಲಿ ನಡೆದಾಡುವ ದೇವರಾದ ಸಿದ್ದೇಶ್ವರ ಮಹಾಸ್ವಾಮಿಜೀಗಳು ಅಡಿಗಲ್ಲು ಹಾಕಿದ್ದಾರೆ. ಅವರ ಪಾದಸ್ಪರ್ಶದಿಂದ ಇಂದು ಸಂಘ ಇಷ್ಟೊಂದು ಹೆಮ್ಮರವಾಗಿ ಬೆಳೆದಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಕಾತ್ರಾಳ-ಬಾಲಗಾಂವ್ ಮಠದ ಅಮೃತಾನಂದ ಮಹಾಸ್ವಾಮಿಗಳು ವಹಿಸಲಿದ್ದು, ನೈತೃತ್ವವನ್ನು ಶಾಸಕ ಯಶವಂತರಾಯಗೌಡ ಪಾಟೀಲವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಹಕಾರಿ ಸಚಿವ ರಾಜಣ್ಣಾ, ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಹಾಗೂ ಜವಳಿ ಖಾತೆ…
ಕೊಲ್ಹಾರ: ಪಟ್ಟಣದ ಆರಾಧ್ಯ ಶಕ್ತಿ ದೇವತೆ ತೆರಪಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವವು ಭಾರತ ಹುಣ್ಣಿಮೆಯ ದಿನವಾದ ಫೆ.೨೩ ಶುಕ್ರವಾರದಿಂದ ೨೭ ಮಂಗಳವಾರದವರೆಗೆ ಐದು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಜರಗುವುದು ಎಂದು ಯಲ್ಲಮ್ಮದೇವಿ ಜಾತ್ರಾ ಉತ್ಸವ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.೨೩ ಶುಕ್ರವಾರ ಸಂಜೆ ೪ ಗಂಟೆಗೆ ಎತ್ತಿನ ಬಂಡಿಯಲ್ಲಿ ರೈತರು ತರುವ ಹಂದರ ತಪ್ಪಲದ ಮೆರವಣಿಗೆ, ಅನ್ನ ಸಂತರ್ಪಣೆ, ರಾತ್ರಿ ೧೦ಗಂಟೆಗೆ ಶ್ರೀ ರೇಣುಕಾಯಲ್ಲಮ್ಮ ಬಯಲಾಟ ಇರುವದು. ೨೪ ಶನಿವಾರ ಮುಂಜಾನೆ ೧೦ ಗಂಟೆಗೆ ಕುಂಭ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಕಳಸದ ಮೆರವಣಿಗೆ ಹಾಗೂ ಜೋಗುತಿ ನೃತ್ಯ ಬಂಡಾರಜಾತ್ರೆ ಜರಗುವದು. ರಾತ್ರಿ ೧೦:೩೦ಕ್ಕೆ ಯಲ್ಲಮ್ಮದೇವಿ ನಾಟ್ಯ ಸಂಘ ಕೊಲ್ಹಾರ ಇವರ ವತಿಯಿಂದ ‘ತಂಗಿ ತಂದ ಸೌಭಾಗ್ಯ’ ಎಂಬ ಸಾಮಾಜಿಕ ನಾಟಕ ಇರುವದು.೨೫ ರವಿವಾರ ಮುಂಜಾನೆ ೧೧ ಗಂಟೆಗೆ ರಂಗೋಲಿ ಸ್ಪರ್ಧೆ, ಉಡಿತುಂಬುವ ಕಾರ್ಯಕ್ರಮ, ಮಧ್ಯಾಹ್ನ ೩ ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನದಿಂದ ಹಾಲು ತುಪ್ಪದ ಮೆರವಣಿಗೆ, ಸಂಜೆ ೪ ಗಂಟೆಗೆ…
ಸಿಂದಗಿ: ತಾಲೂಕು ಬಿಜೆಪಿ ಮಂಡಲದ ನೂತನ ತಾಲೂಕಾಧ್ಯಕ್ಷರನ್ನಾಗಿ ಗೋಲಗೇರಿ ಗ್ರಾಮದ ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ತಿಳಿಸಿದ್ದಾರೆ.ಅವರ ಆಯ್ಕೆಗೆ ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ರವಿಕಾಂತ ನಾಯ್ಕೋಡಿ, ಶರಣು ಮನಗೂಳಿ ಬ್ರಹ್ಮದೇವನಮಡು ಸೇರಿದಂತೆ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದ್ದಾರೆ.ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಸಂತೋಷ ಪಾಟೀಲ, “ಪಕ್ಷದ ಹಿರಿಯರು, ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಭರವಸೆಯನ್ನಿಟ್ಟು ತಾಲೂಕಾಧ್ಯಕ್ಷನ ಜವಾಬ್ದಾರಿಯನ್ನು ನೀಡಿದ್ದಾರೆ. ಅದಕ್ಕೆ ಯಾವುದೇ ರೀತಿಯ ಕಪ್ಪು ಚುಕ್ಕೆ ಭಾರದಂತೆ ಜವಾಬ್ದಾರಿಯಿಂದ ಮುನ್ನಡೆಸಿಕೊಂಡು ಹೋಗುತ್ತೇನೆ” ಎಂದಿದ್ದಾರೆ.
ಸಿಂದಗಿ: ಪ್ರತಿಯೊಂದು ಇಲಾಖೆಯ ಕಛೇರಿಗಳಲ್ಲಿ ವಿಕಲಚೇತನರ ಪ್ರತ್ಯೇಕ ಕೌಂಟರ್ ನಿರ್ಮಾಣವಾಗಬೇಕು. ತಾಲೂಕಿನಲ್ಲಿ ಅನೇಕರ ಪಿಂಚಣಿ ರದ್ದಾಗಿದ್ದು, ಅದು ಬೇಗ ಮರುಚಾಲನೆಯಾಗಬೇಕು. ಮತ್ತು ವಿಕಲಚೇತನರ ಕುಂದು-ಕೊರತೆ ಸಭೆ ತಿಂಗಳಿಗೊಮ್ಮೆಯಾದರು ಸಭೆ ಕರೆಯಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿಠ್ಠಲ ಕರ್ಜಗಿ ತಹಶೀಲ್ದಾರ್ ಅವರಿಗೆ ಆಗ್ರಹಿಸಿದರು.ಪಟ್ಟಣಡ ಆಡಳಿತ ಸೌಧದಲ್ಲಿ ವಿಕಲಚೇತನರ ೨೦೧೬ರ ಅಧಿನಿಯಮದನ್ವಯ ಸರಕಾರದ ವಿವಿಧ ಇಲಾಖೆಗಳಲ್ಲಿ ಮುಕ್ತವಾದ ವಾತಾವರಣ ನಿರ್ಮಾಣ ನಿರ್ಮಿಸುವಂತೆ ಮನವಿ ಸಲ್ಲಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಮುತ್ತುರಾಜ ಸಾತಿಹಾಳ, ಬಿ.ಎನ್.ಕಲ್ಲೂರ ಯಲ್ಲಪ್ಪ ಪೂಜಾರಿ, ಸುಧೀರ ಬಜಂತ್ರಿ, ಸುರೇಶ ಜವಳಗಿ, ವಿಜಯಕುಮಾರ ಬಜಂತ್ರಿ, ಮಲ್ಲು ಕರನಾಳ,sಶಿವಾನಂದ ಆನಗೊಂಡ, ಪುಂಡಲೀಕ ಪೂಜಾರಿ, ಶಬ್ಬೀರ ಅತ್ನನೂರ ಸೇರಿದಂತೆ ಎಂ.ಆರ್.ಡಬ್ಲೂö್ಯ, ವಿ.ಆರ್.ಡಬ್ಲೂö್ಯ ಮತ್ತು ಯು.ಆರ್.ಡಬ್ಲೂö್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಸಿಂದಗಿ: ಕವಿ ಸರ್ವಜ್ಞ ತ್ರಿಪದಿಗಳ ಮೂಲಕ ಪದ್ಯವನ್ನು ರಚನೆ ಮಾಡುವುದರ ಮುಖಾಂತರ ತ್ರಪದಿ ಕವಿ ಎಂದು ಕರೆಯಲ್ಪಡುತ್ತಾರೆ ಎಂದು ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ತ್ರಿಪದಿ ಕವಿ ಸರ್ವಜ್ಞರ ಜಯಂತಿಯಲ್ಲಿ ಗ್ರೇಡ್೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಸರ್ವಜ್ಞನವರು ಹಲವಾರು ಅಂಶಗಳ ಕುರಿತು ವಚನಗಳನ್ನು ರಚಿಸಿ ಒಬ್ಬ ಮೇಧಾವಿ ವಚನಕಾರರಾಗಿದ್ದಾರೆ. ಸಮಾಜದಲ್ಲಿರುವ ಅಂಕು, ಡೊಂಕು ಮೂಡನಂಬಿಕೆಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದರು.ಈ ವೇಳೆ ಸಿ.ಎಂ.ಮನಗೂಳಿ ಕಾಲೇಜಿನ ನಿವೃತ್ತ ಗ್ರಂಥಪಾಲಕ ಸಿದ್ದಬಸವ ಕುಂಬಾರ ಮಾತನಾಡಿ, ಸರ್ವಜ್ಞ ಎಂದರೆ ಎಲ್ಲವನು ತಿಳಿದವರು. ಸಮಾಜದ ಜ್ಞಾನವನ್ನು ಅರಿತವರು. ಅವರ ತ್ರಿಪದಿಗಳಲ್ಲಿ ಒಳ ಅರಿವು ಹೆಚ್ಚಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವಂತೆ ಇರುತ್ತವೆ. ಸರ್ವಜ್ಞರ ತತ್ವಾದರ್ಶಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಮಾಜಿ ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಕಂದಾಯ ನಿರೀಕ್ಷಕ ಐ.ಎ.ಮಕಾಂದಾರ, ಶೀರಸ್ತೇದಾರ ಜಿ.ಎಸ್.ರೋಡಗಿ, ಚೇತನ ಭಾಸಗಿ, ಕುಂಬಾರ ಸಮಾಜದ ತಾಲೂಕು ಗೌರವಾಧ್ಯಕ್ಷ ಸಿದ್ದಪ್ಪ…
