ಬಸವನಬಾಗೇವಾಡಿ: ಮಾನವ ವಿಶ್ವ ಮಾನವನಾಗಲು ಬೇಕಾದ ಜೀವನ ಮೌಲ್ಯಗಳನ್ನು ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ನೀಡಿದ್ದಾನೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಮಂಗಳವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸರ್ವಜ್ಞ ಎಂದರೆ ನಾನು ಎಲ್ಲವನ್ನು ತಿಳಿದವನು ಎಂದರ್ಥವಲ್ಲ. ಸರ್ವರಲ್ಲೂ ಬೆರೆತು ಸರ್ವರಿಂದಲೂ ಒಂದೊಂದು ನುಡಿ ಕಲಿತವನು ಎಂದು ಅರ್ಥವಾಗುತ್ತದೆ. ಎಲ್ಲರನ್ನೂ ಹಿರಿಯರಾಗಿ ಕಂಡು ಎಲ್ಲರನ್ನೂ ಗುರುವಾಗಿ ಕಂಡು ಎಲ್ಲರಲ್ಲಿರುವ ವಿದ್ಯೆಯನ್ನು ಗ್ರಹಿಸಿದವನೆ ನಿಜವಾದ ನಾನು ಜ್ಞಾನಿ ಎನಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಸರ್ವಜ್ಞ ಮಹಾಕವಿಯ ವಚನಗಳು ಇಂದಿಗೂ ಕೂಡ ಜನಮಾನಸದಲ್ಲಿ ಹಾಸುಹೊಕ್ಕಾಗಿವೆ. ವಿಶ್ವ ಬಾಂಧವ್ಯದ ತತ್ವವನ್ನು ಅಳವಡಿಸಿಕೊಂಡು ಸಮಾಜದ ಹುಳುಕುಗಳನ್ನು ನಿರ್ಭೀತಿಯಿಂದ ಟೀಕಿಸಿ ಮನಕುಲವನ್ನು ತಿದ್ದಿದ ಸರಳತೆಯ ದೈವ ಸರ್ವಜ್ಞರು. ಸರ್ವಜ್ಞ ರಚಿಸಿದ ಸಾವಿರಾರು ತ್ರಿಪದಿಗಳಲ್ಲಿ ಇಡೀ ಸಾರ ಹಿಡಿದಿಟ್ಟು ಅಮೂಲ್ಯ ಸಾಹಿತ್ಯವನ್ನು ನೀಡಿ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ ಕವಿ. ಅವರ ಆದರ್ಶ ನಮ್ಮೆಲ್ಲರಿಗೂ ಕೂಡ ದಾರಿದೀಪವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ಮುಖಂಡರಾದ ಶ್ರೀಕಾಂತ್ ಕೊಟ್ರಶೆಟ್ಟಿ, ಸುನಿಲಗೌಡ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ಕುಂಬಾರ್ ಸಮಾಜದ ಅಧ್ಯಕ್ಷ ಮಲ್ಲೇಶಿ ಕಡಕೋಳ, ಸುಭಾಷ ಚಕ್ರಮನಿ, ಶ್ರೀಧರ್ ಕುಂಬಾರ, ಅಪ್ಪು ಕುಂಬಾರ, ಶಂಕರ ರಜಪುತ, ಮಾರುತಿ ಗಾಯಕವಾಡ, ಬಸವರಾಜ ಸಂಗಮ, ಅಣ್ಣು ಪತಂಗಿ ,ವೆಂಕಟೇಶ್ ಕರಾಡೆ, ಶ್ರೀಶೈಲ ಕುಂಬಾರ ,ಮಲ್ಲು ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಈರಣ್ಣ ಕುಂಬಾರ, ಮೀರಸಾ ಕೋರುಬು, ಧನಸಿಂಗ ರಾಥೋಡ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

