Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 26, 2026

ಅಥಣಿ: ಮತ್ತಷ್ಟು 4 ಎಐ ಕ್ಯಾಮೆರಾಗಳ ಕಾರ್ಯಾರಂಭ

ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗಬಾರದು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಫೆ.೨೪ ರಂದು ಗಾಣಿಗ ಸಮಾಜದ ಬೃಹತ್ ಸಮಾವೇಶ
(ರಾಜ್ಯ ) ಜಿಲ್ಲೆ

ಫೆ.೨೪ ರಂದು ಗಾಣಿಗ ಸಮಾಜದ ಬೃಹತ್ ಸಮಾವೇಶ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಪಟ್ಟಣದ ವಿಜಯಪೂರ ರಸ್ತೆಯ ಕ್ರೀಡಾಂಗಣ ಪಕ್ಕದಲ್ಲಿ ಫೆ. ೨೪ ರಂದು ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸಭಾ ಭವನ ಭೂಮಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಸರ್ವ ಸಮುದಾಯದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗಾಣಿಗ ಸಮಾಜದ ಅಧ್ಯಕ್ಷ ಎ.ಎಸ್. ಗಾಣೀಗೇರ, ಮುಖಂಡ ಸಿದ್ದಲಿಂಗ ಹಂಜಗಿ ಮನವಿ ಮಾಡಿದರು.
ಅವರು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗಾಣಿಗ ಸಮಾಜದ ಗುರು ಪೀಠಾಧ್ಯಕ್ಷ ಡಾ. ಜಯ ಬಸವಕುಮಾರ ಸ್ವಾಮೀಜಿ ಅವರ ಪ್ರೇರಣಾ ಶಕ್ತಿಯಿಂದ ಇಂಡಿಯಲ್ಲಿ ೨೦೨೧ ರ ಫೆ.೭ ರಂದು ನಡೆದ ಗಾಣಿಗ ಸಮಾಜ ಜನ ಜಾಗೃತಿ ಸಭೆಯಲ್ಲಿ ಸಮಾಜದ ಹಿರಿಯರು ಕೈಕೊಂಡ ನಿರ್ಧಾರದಂತೆ ೨ ಎಕರೆ ನಿವೇಶನ ಖರೀದಿಸಿದ್ದರ ಪ್ರತಿಫಲ ಈಗ ಸಭಾಭವನ ಭೂಮಿಪೂಜೆ ನಡೆಯುತ್ತಿದೆ ಎಂದರು.
ಗಾಣಿಗ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸರಕಾರದಿಂದ ೫ ಕೋಟಿ ರೂ ಅನುದಾನ ನೀಡುವ ಭರವಸೆ ನೀಡಿದ್ದರು. ಈ ಪೈಕಿ ಈಗಾಗಲೇ ಎರಡು ಕೋಟಿ ಮಂಜೂರು ಮಾಡಿದ್ದಾರೆ. ಶಾಸಕರ ಅಪೇಕ್ಷೆಯ ಮೇರೆಗೆ ಆ ನಿವೇಶನದಲ್ಲಿ ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ಅಂದಾಜು ೫ ಕೋಟಿ ರೂ ವೆಚ್ಚದಲ್ಲಿ ಸಭಾಭವನ ನಿರ್ಮಿಸಲು ನಿರ್ಧರಿಸಿದ್ದು ಬಾಕಿ ೩ ಕೋಟಿ ರೂ ಹಣವನ್ನು ಸರಕಾರದಿಂದ ಶಾಸಕರೇ ಕೊಡಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಸಮಾರಂಭದ ದಿವ್ಯ ಸಾನಿದ್ಯ ಡಾ. ಜಯಕುಮಾರ ಜಗದ್ಗುರುಗಳು ಗಾಣಿಗ ಪೀಠ, ವಿಜಯಪುರದ ಸಿದ್ಧ ಮುತ್ಯಾ, ಅಡವಿಲಿಂಗ ಮಹಾಸ್ವಾಮಿಗಳು ತಿಂಥಿಣಿ, ಶಂಕರಾನಂದ ಶ್ರೀಗಳು ಚಳಕಾಪುರ, ಮಾತೋಶ್ರೀ ಸುಗಲಮ್ಮ ತಾಯಿ ಮುಕ್ತಿ ಮಂದಿರ ಹಿರೇರೂಗಿ, ವಹಿಸಲಿದ್ದು
ಗಣ್ಯರಾದ ಅಥಣಿ ಶಾಸಕ ಲಕ್ಷ್ಮಣ ಸವದಿ, ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಗಿಗೌಡರ, ಭದ್ರಾಮತಿ ಶಾಸಕ ಬಿ.ಕೆ. ಸಂಗಮೇಶ್ವರ, ವಿಜಯಪುರದ ಶಾಸಕ ಬಸನಗೌಡ ಪಾಟೀಲ, ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿಯ ಶಾಸಕ ಅಶೋಕ ಮನಗೂಳಿ, ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ,ಮಾಜಿ ಶಾಸಕರಾದ ರಮೇಶ ಭೂಸನೂರ, ಎಸ್.ಕೆ.ಬೆಳ್ಳುಬ್ಬಿ, ಶಿವರಾಜ ಸಜ್ಜನರ, ಆನಂದ ನ್ಯಾಮಗೌಡ, ಚಿತ್ರನಟ ದೊಡ್ಡಣ್ಣ ಸೇರಿದಂತೆ ಅನೇಕ ಗಣ್ಯರು ಆಗಮಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬತ್ತು ಸಾವಕಾರ ಬಸಗೊಂಡ, ರಾಮು ಯಂಕಂಚಿ, ಬಾಬು ಯಳಸಂಗಿ, ಡಾ|| ಎಂ.ಎಚ್.ಅಂಕಲಗಿ, ಭೀಮನಗೌಡ ಪಾಟೀಲ ಮತ್ತಿತರರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 26, 2026

ಅಥಣಿ: ಮತ್ತಷ್ಟು 4 ಎಐ ಕ್ಯಾಮೆರಾಗಳ ಕಾರ್ಯಾರಂಭ

ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗಬಾರದು

ಜು.೨೭ರಂದು ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆ ಉದ್ಘಾಟನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 26, 2026
    In ದಿನಪತ್ರಿಕೆ
  • ಅಥಣಿ: ಮತ್ತಷ್ಟು 4 ಎಐ ಕ್ಯಾಮೆರಾಗಳ ಕಾರ್ಯಾರಂಭ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ಒಳಗಾಗಬಾರದು
    In (ರಾಜ್ಯ ) ಜಿಲ್ಲೆ
  • ಜು.೨೭ರಂದು ಬಿ.ಎಲ್.ಡಿ.ಇ–ರಘುಕುಲ ಸಮನ್ವಯ ಶಾಲೆ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ ಬಿ ಪಾಟೀಲ ಜಿಲ್ಲಾ ಪ್ರವಾಸ ಇಂದು
    In (ರಾಜ್ಯ ) ಜಿಲ್ಲೆ
  • ನೀಟ್ ಪರೀಕ್ಷೆಯಲ್ಲಿ ಮಹಮ್ಮದ್ ಯಾಸೀನ್ 3226ನೇ ರ‍್ಯಾಂಕ್
    In (ರಾಜ್ಯ ) ಜಿಲ್ಲೆ
  • ಮತದಾರರ ಪಟ್ಟಿ ಪರಿಷ್ಕರಣೆ: 15.24 ಲಕ್ಷ ಗಣತಿ ಫಾರಂ ಡಿಜಿಟಲೀಕರಣ
    In (ರಾಜ್ಯ ) ಜಿಲ್ಲೆ
  • ಇಂಡಿಯಲ್ಲಿ ಸಂಚಲನ: ಎರಡೂವರೆ ತಿಂಗಳ ಬಳಿಕ ಕೊಲೆ ಆರೋಪದ ತಿರುವು
    In (ರಾಜ್ಯ ) ಜಿಲ್ಲೆ
  • ಸಿಂದಗಿಯಲ್ಲಿ ಜು.೨೭ ರಂದು ಪತ್ರಿಕಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಶ್ರೀ ಖಾಸ್ಗತರ ಗದ್ದುಗೆ ದರ್ಶನ ಪಡೆದ ಶಾಸಕ ರಾಜುಗೌಡ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.