ಇಂಡಿ: ಪಟ್ಟಣದ ಸಿಂದಗಿ ರಸ್ತೆಯ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ಇಂಡಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಶತಮಾನೋತ್ಸವ ಕಟ್ಟಡ ಫೆ,೨೮ ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ, ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಪರಮಾನಂದ ಚಾಂದಕವಟೆ ಹೇಳಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಕರ ಸಹಕಾರಿ ಪತ್ತಿನ ಸಂಘಕ್ಕೆ ೧೯೯೪ ರಲ್ಲಿ ನಡೆದಾಡುವ ದೇವರಾದ ಸಿದ್ದೇಶ್ವರ ಮಹಾಸ್ವಾಮಿಜೀಗಳು ಅಡಿಗಲ್ಲು ಹಾಕಿದ್ದಾರೆ. ಅವರ ಪಾದಸ್ಪರ್ಶದಿಂದ ಇಂದು ಸಂಘ ಇಷ್ಟೊಂದು ಹೆಮ್ಮರವಾಗಿ ಬೆಳೆದಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಾತ್ರಾಳ-ಬಾಲಗಾಂವ್ ಮಠದ ಅಮೃತಾನಂದ ಮಹಾಸ್ವಾಮಿಗಳು ವಹಿಸಲಿದ್ದು, ನೈತೃತ್ವವನ್ನು ಶಾಸಕ ಯಶವಂತರಾಯಗೌಡ ಪಾಟೀಲವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಹಕಾರಿ ಸಚಿವ ರಾಜಣ್ಣಾ, ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಹಾಗೂ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಆದ್ದರಿಂದ ಶಿಕ್ಷಕ ಬಂಧುಗಳು, ಗುರುಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ ಮಾತನಾಡಿದರು.
ಪಿ.ಎ ಎಲಗಾರ, ಅಲ್ಲಾಭಕ್ಷ ವಾಲೀಕಾರ ಮಾತನಾಡಿದರು.
ಶಿಕ್ಷಕರಾದ ಎಂ.ಎಂ ನೇದಲಗಿ, ವಾಯ್.ಟಿ ಪಾಟೀಲ, ಶಾರದಾ ಗಿರಣಿ, ಟಿ.ಕೆ. ಜಂಬಗಿ, ಡಿ.ಜಿ ರಾಠೊಡ, ಜೆ.ಎ. ಚವಡಿಹಾಳ, ಬಂಗಾರೆಪ್ಪ ಜಮಾದಾರ, ಎ.ಎಂ. ಶೇಖ, ಶ್ರೀದೇವಿ ಮುಗಳಿ, ಜಯರಾಮ ಚವ್ಹಾಣ, ಸಿ.ಎಸ್ ಝಳಕಿ, ಆನಂದ ಕೆಂಬಾವಿ, ಅನಿತಾ ರಾಠೋಡ, ವಿಜಯಲಕ್ಷ್ಮೀ ಡಿಸ್ಲೇ, ಜಯಶ್ರೀ ತೇಲಗ,ಅಂಬರೀಶ ರಾಠೋಡ, ಸುರೇಶ ಚವ್ಹಾಣ, ಕೆ.ಎಸ್ ಕಾಂಬಳೆ, ಜಟ್ಟೆಪ್ಪ ಮಾದರ, ಕೆ.ಎಂ. ಇಂಡಿ, ಸಿ.ಆರ್ ಮ್ಯಾಕೇರಿ ಸೇರಿದಂತೆ ಅನೇಕ ಶಿಕ್ಷಕ ಸಂಘದ ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

