ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಾಲೂಕಾಡಳಿತದಿಂದ ಸರ್ವಜ್ಞ ಜಯಂತಿ ಆಚರಿಸಲಾಯಿತು. ತಾಲೂಕಾಡಳಿತ ಪರವಾಗಿ ಸರ್ವಜ್ಞ ಭಾವಚಿತ್ರಕ್ಕೆ ಕುಂಬಾರ ಸಮಾಜದ ತಾಲೂಕು ಅಧ್ಯಕ್ಷ ಮಲ್ಲೇಶಿ ಕುಂಬಾರ ಅವರು ಪೂಜೆ ಸಲ್ಲಿಸಿದರು.
ಶಿಕ್ಷಕ ಸಿ.ಜಿ.ಕುಂಬಾರ ಮಾತನಾಡಿ, ಸರ್ವಜ್ಞ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಎಲ್ಲ ಸಮುದಾಯಕ್ಕೆ ಆದರ್ಶಪ್ರಾಯವಾಗಿದ್ದಾರೆ. ಸರ್ವಜ್ಞರು ಮನುಕುಲಕ್ಕೆ ಶ್ರೇಷ್ಠ eನವನ್ನು ನೀಡಿದ್ದಾರೆ. ಇದನ್ನು ಇಂದಿನ ಯುವಜನಾಂಗ ತಿಳಿದುಕೊಳ್ಳಬೇಕಿದೆ. ಸರ್ವಜ್ಞರ ವಿಚಾರಗಳನ್ನು ಅಳವಡಿಸಿಕೊಂಡರೆ ಜೀವನ ಮೌಲ್ಯ ವೃದ್ಧಿಯಾಗುತ್ತದೆ ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಮಂಜು ಹಳ್ಳೂರ, ಆರ್.ವಿ.ಘಾಟಗೆ, ನಿರ್ಮಲಾ ಪೂಜಾರಿ, ಕುಂಬಾರ ಸಮಾಜದ ಮುಖಂಡರಾದ ಸುಭಾಸ ಚಕ್ರಮನಿ, ಮಲ್ಲಪ್ಪ ಕುಂಬಾರ, ಅಪ್ಪು ಕುಂಬಾರ, ಶ್ರೀಧರ ಕುಂಬಾರ, ಶ್ರೀಶೈಲ ಕುಂಬಾರ,ಚಿದಾನಂದ ಕುಂಬಾರ, ಸಿದ್ದಲಿಂಗ ಕುಂಬಾರ, ಕಾಶೀನಾಥ ಕುಂಬಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

