ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರ ಬಡಾವಣೆಯ ಸಿಟಿಎಸ್ ನಂ. ೨೧೪೨/೩ ಹಾಗೂ ೨೧೪೨/೪ ಇವುಗಳಲ್ಲಿ ವಸತಿ ಶಾಲೆ ಪ್ರಾರಂಬಿಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ನಿವೇಶನಗಳನ್ನು ಕೇವಲ ಗ್ರಹಬಳಕೆಗೆ ಅಂತಾ ವಿನ್ಯಾಸ ಮಾಡಿ ಮಾರಾಟ ಮಾಡಿದ್ದು ಖರೀದಿ ಪತ್ರದಲ್ಲಿ ಸ್ಪಷ್ಟವಾಗಿ ಗ್ರಹ ಬಳಕೆಗೆ ಮೀಸಲಾದ ನಿವೇಶನಗಳು ಅಂತಾ ನಮೂದಿಸಲಾಗಿದೆ. ಆದರೆ ನಿವೇಶನಗಳ ಮಾಲೀಕರು ರಸ್ತೆಗಳನ್ನು ಅತಿಕ್ರಮಣ ಮಾಡಿ ನೆಲಮಹಡಿ ಕಟ್ಟಲು ಭೂಮಿಯನ್ನು ಅಗೆದಿರುತ್ತಾರೆ. ಇಲ್ಲಿ ವಸತಿ ಶಾಲೆ ಅಥವಾ ಶಾಲೆಗಾಗಿ ಕಟ್ಟಡ ಕಟ್ಟಲಾಗುತ್ತಿದೆ. ವಸತಿ ಪ್ರದೇಶದ ಮಧ್ಯೆ ಶಾಲೆ ಪ್ರಾರಂಭಿಸಲು ನಮ್ಮದು ಸಂಪೂರ್ಣ ತಕರಾರು ಇದೆ. ಈ ಕುರಿತು ಈಗಾಗಲೇ ಪುರಸಭೆ ಮುಖ್ಯಾಧಿಕಾರಿಗಳಿಗೆ ತಕರಾರು ಸಲ್ಲಿಸಿದ್ದು ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುತ್ತಾರೆ. ಈ ವಿಷಯ ಮಾಧ್ಯಮದಲ್ಲಿ ಪ್ರಕಟವಾಗಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯೊಬ್ಬರು ಜಾಗೆಯನ್ನು ಜಿಪಿಎಸ್ ಮಾಡಿಕೊಂಡು ಹೋಗಿದ್ದನ್ನು ನಾವು ಬಲವಾಗಿ ವಿರೋಧಿಸುತ್ತೇವೆ.
ಇಲ್ಲಿ ಶಾಲೆ ಪ್ರಾರಂಭಿಸುವದರಿಂದ ಸುತ್ತ ಮನೆಗಳಲ್ಲಿ ಯಾವುದೇ ಶುಭ ಸಮಾರಂಭ ಇನ್ನೀತರ ಕಾರಣಗಳಿಗೆ ಧ್ವನಿವರ್ಧಕ ಬಳಸಿ, ಸಂತೋಷಕೂಟಗಳು, ಮೆರವಣಿಗೆಗಳನ್ನು ಮಾಡಲು ಅಡಚಣೆ ಉಂಟಾಗುತ್ತದೆ. ನಮ್ಮ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೇ ಉದ್ದೇಶಿತ ಶಾಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಂದ ಸಾರ್ವಜನಿಕ ಉಪದ್ರವ ಉಂಟಾಗಿ ನಮಗೆಲ್ಲ ನೆಮ್ಮದಿ ಹಾಳಾಗುತ್ತದೆ. ಕಾರಣ ಇಲ್ಲಿ ಶಾಲಾ ಕಟ್ಟಡ ಕಟ್ಟಲು ಅನುಮತಿ ನೀಡಬಾರದು ಅಂತಾ ಮನವಿ ಪತ್ರದಲ್ಲಿ ನಮೂದಿಸಲಾಗಿದೆ. ಕೆ.ಜಿ.ಬಡಿಗೇರ, ಗೌರಮ್ಮ ಹುನಗುಂದ, ಮಲ್ಲಯ್ಯ ಬಿರಾದಾರ, ಚನ್ನಬಸಪ್ಪ ಗೌಡರ, ಮಲ್ಲಮ್ಮ ಮುರಾಳ, ಎನ್.ಜಿ.ಕುಲಕರ್ಣಿ ವಕೀಲರು, ಚಂದು ಪಟ್ಟಣಶೆಟ್ಟಿ, ರಾಘವೇಂದ್ರ ನೆರಬೆಂಚಿ ಸೇರಿದಂತೆ ಒಟ್ಟು ೩೯ ಜನರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
