Author: editor.udayarashmi@gmail.com

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನವೆಂಬರ್ ೩೦ ರಂದು ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ ೯-೩೦ಕ್ಕೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹಾಗೂ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಜಯಂತಿ ಕಾರ್ಯಕ್ರಮವನ್ನು ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ವಿಜಯಪುರ ನಗರ ಶಾಸಕರಾದ ಬಸನಗೌಡ ಆರ್.ಪಾಟೀಲ(ಯತ್ನಾಳ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-೨ ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಶಾಸಕರುಗಳಾದ ಯಶವಂತರಾಯಗೌಡ ಪಾಟೀಲ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಬಿ.ಪಾಟೀಲ, ಪಿ.ಎಚ್.ಪೂಜಾರ, ಅಪ್ಪಾಜಿ ಸಿ.ಎಸ್.ನಾಡಗೌಡ, ವಿಠ್ಠಲ ಕಟಕದೊಂಡ,…

Read More

ವಿಜಯಪುರ: ಬೆನ್ನುಹುರಿ ಅಪಘಾತ ವಿಕಲಚೇತನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಸೂಕ್ತ ಚಿಕಿತ್ಸೆ ಪಡೆದು, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅಲ್‌ಅಮಿನ್ ಮೆಡಿಕಲ್ ಕಾಲೇಜ್‌ನ ಡಾ.ಜಿಲಾನಿ ಅವಟಿ ಕರೆ ನೀಡಿದರು.ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಎಪಿಸಿ ಸಂಸ್ಥೆ ವಿಜಯಪುರ ಎಚ್ ಸಿ ಎಲ್ ಫೌಂಡೇಶನ್ ಅಲ್ ಅಮಿನ್ ಮೆಡಿಕಲ್ ಕಾಲೇಜ್, ಬೆನ್ನು ಹುರು ಅಪಘಾತ ವಿಕಲಚೇತನರ ಸಂಘ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ೩ ದಿನಗಳ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ವ್ಯಾಯಾಮ ಮತ್ತು ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸರ್ಕಾರದೊಂದಿಗೆ ಕೈ ಜೋಡಿಸಿ ಸಂಘ ಸಂಸ್ಥೆಗಳು ವಿಕಲಚೇತನರ ಶ್ರೇಯೋಭಿವೃಧಿಗೆ ಶ್ರಮಿಸುತ್ತಿರುವದು ಸ್ತುತ್ತ್ಯಾರ್ಹ. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಇಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ…

Read More

ಮೋರಟಗಿ: ಸುಪ್ರಸಿದ್ದ ಘತ್ತರಗಿ ಗ್ರಾಮಕ್ಕೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಪ್ರತಿ ಶುಕ್ರವಾರ ಸಹಸ್ರಾರು ಭಕ್ತಾದಿಗಳು ಹಾಗೂ ವ್ಯಾಪಾರ ವಹಿವಾಟು ಮಾಡುವ ಸಾರ್ವಜನಿಕರು ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ಟ್ರಾಕ್ಟರ್ ಚಾಲಕರು ದ್ವಿಚಕ್ರ ಸವಾರರು ಹಾರ್ನ ಹಾಕಿದರೂ ಕೇಳದ ನಿಟ್ಟಿನಲ್ಲಿ ಮನಬಂದಂತೆ ಟೇಪಿನ ಸೌಂಡ್ ಹೆಚ್ಚಿಸಿ ಸುಮಾರು ವರ್ಷಗಳಿಂದ ಚಾಲನೆ ಮಾಡುತ್ತ ಬರುತಿದ್ದು ಇದರಿಂದ ಆಗಾಗ ಅಪಘಾತ ಆಗುತ್ತಲೇ ಬಂದಿವೆ. ಕೂಡಲೇ ಅಧಿಕಾರಿಗಳು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ಸೂಚಿಸಿ ಶಬ್ದ ಮಾಲಿನ್ಯ ಕ್ಕೆ ಬ್ರೇಕ್ ಹಾಕಿ ಸಾರ್ವಜನಿಕರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ದಸಸ ಸಂಚಾಲಕ ಧರ್ಮರಾಜ ಯಂಟಮಾನ ಆಕ್ರೋಶ ವ್ಯಕ್ತಪಡಿಸಿದರು.ಮಂಗಳವಾರ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ್ ತಾಲೂಕಿನ ಹಾವಳಗಾ ಶ್ರೀ ರೇಣುಕಾ ಶುಗರ್ ಖಾರ್ಖಾನೆ ಹಾಗೂ ಆಲಮೇಲ್ ತಾಲೂಕಿನ ಮನಾಲಿ ಶುಗರ್ ಖಾರ್ಖಾನೆ ಗೆ ಕಬ್ಬು ಸಾಗಿಸುವ ವಾಹನಗಳಿಂದ ಆಗುತ್ತಿರುವ ಅಪಘಾತ ಖಂಡಿಸಿ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಹಾಗೂ ರೈತರ ಹಲವಾರು ಬೇಡಿಕೆಗಳ ಕುರಿತು ಅಗ್ರಹಿಸಿ ದಲಿತ ಸಂಘರ್ಷ ಸಮೀತಿ…

Read More

ಸಿಂದಗಿ: ತಂದೆಯವರಾದ ಮಾಜಿ ಸಚಿವ ದಿ, ಎಂ,ಸಿ,ಮನಗೂಳಿ ಅವರ ದಾರಿಯಲ್ಲಿ ನಡೆದು ಉಪಚುನಾವಣೆಯಲ್ಲಿ ಸೋತರೂ ಕೂಡಾ ಎದೆಗುಂದದೆ ತಾಲೂಕಿನ ಸಮಗ್ರ ಅಭಿವೃದ್ದಿಯ ಸಂಕಲ್ಪವನ್ನು ಇಟ್ಟುಕೊಂಡು ಪಕ್ಷ ಸಂಘಟನೆ ಮಾಡಿ ಕೇವಲ ಒಂದು ಗ್ರಾಮ ಪಂಚಾಯತಿಯ ಸದಸ್ಯರಾಗದೆ ನೇರವಾಗಿ ಸಿಂದಗಿಯ ಶಾಸಕರಾಗಿ ಆಯ್ಕೆಯಾಗಿ ಜನಸೇವೆಯೇ ಜನಾರ್ಧನ ಸೇವೆ ಎಂದು ಅಭಿವೃದ್ದಿಯತ್ತ ಧಾಪುಗಾಲು ಹಾಕುತ್ತಿರುವ ಶಾಸಕ ಅಶೋಕ ಮನಗೂಳಿ ಮುಂಬರುವ ದಿನಗಳಲ್ಲಿ ಸಚಿವರಾಗಿ ಹೊರಹೊಮ್ಮಲಿ ಎಂದು ಕಾಂಗ್ರೆಸ್ ಮುಖಂಡ ಸಲೀಮ್ ಕಣ್ಣಿ ಹೇಳಿದರು.ಶಾಸಕ ಅಶೋಕ್ ಮನಗೂಳಿ ಅವರ ೫೫ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟಬುಕ್ ಪೆನ್ ವಿತರಿಸಿ ಅವರು ಮಾತನಾಡಿದರು.ತಮ್ಮ ಇಡೀ ಜೀವನವನ್ನೆ ರಾಜಕೀಯಕ್ಕೆ ಮುಡುಪಾಗಿಟ್ಟಿದ್ದ ದಿ,ಎಂ,ಸಿ,ಮನಗೂಳಿ ಅವರು ರೈತರ ಪಾಲಿಗೆ ಆಶಾ ಕಿರಣರಾಗಿ ನಿಂತು ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಯ ಮುಖಾಂತರ ನೀರು ಹರಿಸಿ ರೈತರ ಪಾಲಿಗೆ ಮತ್ತು ಸಿಂದಗಿ ಪಟ್ಟಣದ ಜನತೆಯ ಪಾಲಿಗೆ ನೀರಾವರಿ ಹರಿಕಾರ ಎಂಬ ಬಿರುದನ್ನು ಪಡೆದು ಅಸು ನೀಗಿದ್ದಾರೆ. ಅವರು…

Read More

ಬಸವನಬಾಗೇವಾಡಿ: ತಾಲೂಕಿನ ಸ್ವಾತಂತ್ರ್ಯಯೋಧರ ಗ್ರಾಮ ಮಸಬಿನಾಳ ಗ್ರಾಮದ ಗೌರಿಶಂಕರ ಜಾತ್ರಾಮಹೋತ್ಸವದಂಗವಾಗಿ ನ. ೨೭ ರಿಂದ ಡಿ.೨ ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಗ್ರಾಮದ ವಿಷ್ಣು ಬಡಿಗೇರ ಅವರ ಮನೆಯಿಂದ ಸೋಮವಾರ ಬೆಳಗ್ಗೆ ಸಕಲ ವಾದ್ಯಮೇಳದೊಂದಿಗೆ ಗೌರಿಶಂಕರ ಮೂರ್ತಿಗಳು ಮೆರವಣಿಗೆ ಮೂಲಕ ಗೌರಿಶಂಕರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡವು. ನ.೩೦ ರಂದು ಸಂಜೆ ೬ ಗಂಟೆಗೆ ಸ್ವಾಮಿ ವಿವೇಕಾನಂದ ಸ್ವ ಸಹಾಯ ಸಂಘದ ಗೆಳೆಯರ ಬಳಗ ಹಾಗೂ ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆಯ ಸಹಯೋಗದಲ್ಲಿ ಸಾಂಸ್ಕ್ರತಿಕ ಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನಿಧ್ಯವನ್ನು ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ನೇತೃತ್ವವನ್ನು ಸೊನ್ನದ ಶಿವಾನಂದ ಸ್ವಾಮೀಜಿ, ಸಮ್ಮುಖವನ್ನು ನೆಲೋಗಿಯ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಸಬಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಿಜಾ ಬಾಬುಲಾಲ ಮೈರಾ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕನ್ನಡ ಮತ್ತು ಸಂಸ್ಕ್ರತ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಆಗಮಿಸುವರು. ವಿಜಯಪುರದ ಸನ್ಶೈನ ನೃತ್ಯ ಕಲಾ ಸಂಸ್ಥೆಯಿಂದ…

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಸರ್ಕಾರ ಮುಲ್ಲಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಹಸೀಲ್ದಾರ ಯಮನಪ್ಪ ಸೋಮನಕಟ್ಟಿ ಅವರಿಗೆ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ರಾಜ್ಯದ ೧೦೫ ವಿಧಾನಸಭಾ ಮತಕ್ಷೇತ್ರದಲ್ಲಿ ಮುಲ್ಲಾ ಸಮುದಾಯ ಬಾಂಧವರು ಇದ್ದಾರೆ. ಪ್ರತಿ ಕ್ಷೇತ್ರದಲ್ಲಿ ೫ ಸಾವಿರದಿಂದ ೮ ಸಾವಿರ ಮತದಾರರಿದ್ದಾರೆ. ರಾಜ್ಯ ಮುಸ್ಲಿಂ ಸಮುದಾಯದಲ್ಲಿ ೧೩ ಲಕ್ಷಕ್ಕಿಂತ ಹೆಚ್ಚು ಮುಲ್ಲಾ ಸಮುದಾಯವಿದೆ. ಮುಲ್ಲಾ ಎಂಬ ವ್ಯಕ್ತಿಯು ಇತಿಹಾಸ ಪರಂಪರೆಯಲ್ಲಿ ಪ್ರಮುಖ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿರುವುದನ್ನು ನೋಡುತ್ತೇವೆ. ಇಂದು ಈ ಹಕ್ಕನ್ನು ಕಳೆದುಕೊಳ್ಳುವ ಸ್ಥಿತಿ ಉಂಟಾಗಿರುವುದು ವಿಷಾದಕರ ಸಂಗತಿ. ಮುಲ್ಲಾ ಸಮುದಾಯ ಬಾಂಧವರು ಬೇರೆ ಸಮುದಾಯ ಬಾಂಧವರೊಂದಿಗೆ ಸೌಹಾರ್ದತೆಯಿಂದ ಇದ್ದಾರೆ. ನಮ್ಮ ಸಮುದಾಯವು ಕಡುಬಡತನದಿಂದ ಹಿಂದುಳಿದಿದೆ. ಪ್ರತಿ ವರ್ಷ ನಡೆಯುವ ಮೊಹರಂ ಹಬ್ಬದಲ್ಲಿ ಮುಲ್ಲಾ ಸಮುದಾಯ ಬಾಂಧವರು ಸೇವೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಹಿಂದೆ ನಮ್ಮ ಸಮುದಾಯವರಿಗೆ ಇನಾಮಿ ಜಮೀನು ನೀಡಿ…

Read More

ವಿಜಯಪುರ: ಪರಿಸರ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಜಾಗೃತಿಗಾಗಿ ನಗರದಲ್ಲಿ ಡಿಸೆಂಬರ್ 24 ರಂದು ಆಯೋಜಿಸಲಾಗಿರುವ ವೃಕ್ಷಥಾನ್ ಹೆರಿಟೇಜ್ ರನ್- 2003 ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಓಟದಲ್ಲಿ ಪ್ರತಿಷ್ಠಿತ ಸೈನಿಕ ಶಾಲೆಯ 450 ವಿದ್ಯಾರ್ಥಿ ಮತ್ತು ಸಿಬ್ಬಂದಿ ಪಾಲ್ಗೋಳ್ಳಲಿದ್ದಾರೆ.ಮ್ಯಾರಾಥಾನ್ ಕೋರ್ ಕಮಿಟಿಯ ಸಂಚಾಲಕ ಮುರಗೇಶ ಪಟ್ಟಣಶೆಟ್ಟಿ ನೇತೃತ್ವದಲ್ಲಿ ವಿರೇಂದ್ರ ಗುಚ್ಚಟ್ಟಿ, ಡಾ. ದೀಪಕ ಚವ್ಹಾಣ ಹಾಗೂ ಡಾ. ರಾಜು ಯಲಗೊಂಡ ಸೋಮವಾರ ಸೈನಿಕ ಶಾಲೆಯ ಪ್ರಾಚಾರ್ಯೆ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಸ್ಟ್ ಅವರನ್ನು ಬೇಟಿ ಮಾಡಿ ಹೆರಿಟೇಜ್ ರನ್ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಪ್ರಾಂಶುಪಾಲರು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಶಾಲೆಯ 450 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಇದೇ ವೇಳೆ ಕೋರ್ ಕಮಿಟಿ ಸದಸ್ಯರು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬೇಟಿ ಮಾಡಿ ವೃಕ್ಷಥಾನ್‌ನಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು. ಇದಕ್ಕೆ ಸ್ಪಂದಿಸಿದ ಡಿವೈಎಸ್ಪಿ. ಸಿಪಿಐ, ಪಿಎಸ್‌ಐ ಮತ್ತಿತರ ಅಧಿಕಾರಿಗಳು…

Read More

ಇದು ಜನತಾ ದರ್ಶನ ಅಲ್ಲ, ಜನಸ್ಪಂದನ ಎಂದ ಸಿಎಂ | ಅರ್ಜಿಗಳ ಇತ್ಯರ್ಥಕ್ಕೆ 15 ದಿನ ಗಡುವು | ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಸತತ ಏಳು ಗಂಟೆಗಳ ಕಾಲ ಜನತಾದರ್ಶನ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿದರು.ಇಡೀ ದಿನ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಇವುಗಳ ಇತ್ಯರ್ಥಕ್ಕೆ ಸಿಎಂ ಸಿದ್ದರಾಮಯ್ಯ ಅವರು 15 ದಿನ ಗಡುವು ನೀಡಿದ್ದಾರೆ.ಜನಸ್ಪಂದನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇದು ಜನತಾ ದರ್ಶನ ಅಲ್ಲ. ಜನಸ್ಪಂದನ ಕಾರ್ಯಕ್ರಮ. ಇಂದು 3,500 ಅರ್ಜಿಗಳು ಬಂದಿವೆ. ಇನ್ನೂ ಜನರು ಬರುತ್ತಿದ್ದಾರೆ. ಎಲ್ಲಾ ಅರ್ಜಿಗಳನ್ನು ಸ್ವೀಕರಿಸಿ ತಕ್ಷಣ ಪರಿಹಾರ ಕೊಡಬೇಕು. ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಅರ್ಜಿಗಳ ಇತ್ಯರ್ಥ ಆಗಬೇಕು. ಮತ್ತೆ ಜನಸ್ಪಂದನ ಮಾಡಿದಾಗ ಇಷ್ಟು ಅರ್ಜಿ ಬರಬಾರದು ಎಂದರು.ನಾನು ಬೆಳಗ್ಗೆಯಿಂದಲೇ ಜನರ ಬಳಿಗೆ ತೆರಳಿ ಅವರ ಕುಂದುಕೊರತೆಗಳನ್ನು ಖುದ್ದು ಆಲಿಸಿದ್ದೇನೆ. ಸ್ವೀಕೃತವಾಗಿರುವ…

Read More

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಶ್ರೀಗಳಿಗೆ “ಗುರುನಮನ” ವಿಜಯಪುರ: ಶತಮಾನದ ಸಂತ, ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಭೌತಿಕ ದೇಹವನ್ನು ತ್ಯಜಿಸಿ ಬಯಲಲ್ಲಿ ಬಯಲಾಗಿ ಒಂದು ವರ್ಷವಾಗುವ ಹಿನ್ನೆಲೆಯಲ್ಲಿ ಮುಂಬರುವ ಜನೇವರಿ 1 ಮತ್ತು 2 ರಂದು ನಗರದ ಜ್ಞಾನಯೋಗಾಶ್ರಮದಲ್ಲಿ “ಗುರುನಮನಮಹೋತ್ಸವ” ವನ್ನು ಹಮ್ಮಿಕೊಳ್ಳಲಾಗಿದೆ.ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ರವಿವಾರ ಜ್ಞಾನಯೋಗಾಶ್ರಮದಲ್ಲಿ ಕರೆದಿದ್ದ ಮಾಧ್ಯಮ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ವಿವರಣೆ ನೀಡಿದರು.ಹಲವು ದಶಕಗಳವರೆಗೆ ಆಧ್ಯಾತ್ಮಿಕ ಜ್ಞಾನದಾಸೋಹ ಮಾಡಿ ಎಲ್ಲ ಜನಾಂಗದ ಪ್ರೀತಿಯನ್ನು ಗಳಿಸಿದ ಪೂಜ್ಯ ಸಿದ್ಧೇಶ್ವರ ಶ್ರೀಗಳು 2023 ರ ಜನೇವರಿ 2 ರಂದು ದೇಹತ್ಯಾಗ ಮಾಡಿ ಬಯಲಲ್ಲಿ ಬಯಲಾದರು. ತನ್ನಿಮಿತ್ಯ ಆ ದಿನದಂದು ಪೂಜ್ಯರಿಗೆ ಭಕ್ತರೆಲ್ಲ ಸೇರಿ ಹೃದಯಾಂತರಾಳದ ನಮನಗಳನ್ನು ಅರ್ಪಿಸಲು ನಿರ್ಧರಿಸಿದ್ದು, ಗುರುನಮನ ಮಹೋತ್ಸವದ ಅಂಗವಾಗಿ ಜ್ಞಾನದಾಸೋಹ ಸತ್ಸಂಗ ಕಾರ್ಯಕ್ರಮ, ವಿಶೇಷ ಗೋಷ್ಠಿಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.ಜ.1 ರಂದು ದೀಪೋತ್ಸವ ನಡೆಯುವುದು. ಅಂದು ಸಂಜೆಜ್ಞಾನಯೋಗಾಶ್ರಮದಲ್ಲಿ ಪ್ರತಿಯೊಬ್ಬರು ದೀಪಗಳನ್ನು ಬೆಳಗಿಸುವ ಮೂಲಕ ಜ್ಞಾನಯೋಗಿಗಳಿಗೆ…

Read More