ಬಬಲೇಶ್ವರ: ತಾಲ್ಲೂಕಿನ ಸಾರವಾಡ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮ ಜರುಗಿತು.
ಮಕ್ಕಳು ದೇಶಭಕ್ತಿಗೀತೆಗಳಿಗೆ ಹೆಜ್ಜೆಹಾಕಿದ್ದು ಎಲ್ಲರ ಗಮನ ಸೆಳೆಯಿತು. ಯಾವ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ ಎಂಬುವಂತೆ ಶಾಲೆಯಲ್ಲಿ ವರ್ಷಪೂರ್ತಿ ನಡೆದ ಕಾರ್ಯಕ್ರಮಗಳನ್ನು ವಾರ್ಷಿಕ ವರದಿಯಲ್ಲಿ ತಿಳಿಸಲಾಯಿತು.
ಶಾಲೆಯ ಮುಖ್ಯಗುರುಮಾತೆ ಶ್ರೀಮತಿ ಶಮುಸುನ್ನಿಸಾ ದ್ರಾಕ್ಷಿ ಅವರು ಶಾಲೆಯಲ್ಲಿರುವ ಆರ್. ಎ. ಬಿರಾದಾರ, ಪಟೇಲಮೇಡಂ, ಚೌದರಿ ಮೇಡಂ, ಹಾಗೂ ಖರ್ಜಗಿ ಮೇಡಂ ರವರ ಸಹಾಯದಿಂದ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಎಲ್ಲ ಗುರುಬಳಗದ ಶ್ರಮ ನಿಜಕ್ಕೂ ಶ್ಲಾಘನೀಯವಾದುದು.
ಸ್ವಂತ ಖರ್ಚಿನಲ್ಲಿ ಎಲ್.ಕೆ.ಜಿ ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಶಾಲೆಯಲ್ಲಿ ಕಲಿತ ಇಬ್ಬರು ವಿದ್ಯಾರ್ಥಿನೀಯರು ಮಹಿಳಾ ವಿಶ್ವ ವಿದ್ಯಾಲಯಯದಲ್ಲಿ ಪ್ರಥಮ ಮತ್ತು ತೃತಿಯ ಸ್ಥಾನ ಪಡೆದಿದ್ದಾರೆ. ಶಾಲೆಯ ಅಭಿವೃದ್ಧಿಯನ್ನು ನೋಡಿ ಶಾಲೆಯ ದಾಖಲಾತಿ ಗಣನೀಯವಾಗಿ ಹೆಚ್ಚಳವಾಗಿದೆ. ಕಾರ್ಯಕ್ರಮದಲ್ಲಿ ರೂ 20 ಸಾವಿರ ಕ್ಕೂ ಅಧಿಕ ದೇಣಿಗೆ ಸಂಗ್ರಹವಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ಉಗಾರ ಮಾತನಾಡಿ ಶಿಕ್ಷಕರ ಪರಿಶ್ರಮವನ್ನು ಶ್ಲಾಗಿಸಿದರು. ಕಾರ್ಯಕ್ರಮದಲ್ಲಿ ಸಿ. ಆರ್. ಪಿ ಗಳಾದ ಚೌದರಿ, ಗರಡಿಮನಿ, ರೂಗಿ ಹಾಗೂ ಎಂ. ಸಿ. ಮುಲ್ಲಾ , ಎನ್. ಎಸ್. ಪಟೇಲ, ಬಾಲಸಿಂಗ, ರೋಜಿನ್ದಾರ ಹಾಗೂ ಬಸೀರಾಹ್ಮದ ಕುಡಚಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

