ವಿಜಯಪುರ: ನಗರದ ಹೃದಯಭಾಗದಲ್ಲಿರುವ ಶ್ರೀ ಲಾಲಬಹುದ್ದೂರ ಶಾಸ್ತ್ರಿ ಮಾರುಕಟ್ಟೆ ಅಥವಾ ಮಿನಾಕ್ಷಿ ಚೌಕನ ಮದ್ಯ ಭಾಗದಲ್ಲಿರುವ ವಿವಿಧ ಕೋಚಿಂಗ್ ಸೆಂಟರ್‌ಗಳಲ್ಲಿ ಕಡು ಬಡತನದಿಂದ ಬರುವ ಸಾವಿರಾರು ವಿದ್ಯಾರ್ಥಿ ಯುವಜನರು ಅಧ್ಯಯನ ಮಾಡುತ್ತಿದ್ದು, ಇವರಿಗೆ ಮೂರು ಹೊತ್ತು ಊಟ ಸಿಗದೇ ಪರದಾಡುವ ಸ್ಥಿತಿ ಉಂಟಾಗಿದ್ದು, ಇಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ, ನಾಡಿನ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಐಎಎಸ್, ಕೆಎಎಸ್ ಮತ್ತು ಪಿ ಸಿ, ಪಿಎಸ್‌ಐ, ಎಸಡಿಎ, ಎಫ್‌ಡಿಎ ಮತ್ತು ಹತ್ತು ಹಲವಾರು ಹುದ್ದೆಗಳ ಕನಸು ಹೊತ್ತು ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬರುತ್ತಿರುತ್ತಾರೆ. ಇಲ್ಲಿ ಸುಮಾರು ಬಡ ವಿದ್ಯಾರ್ಥಿ ಮತ್ತು ಯುವಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವದು ಕಂಡು ಬರುತ್ತಿದೆ. ಈ ಬಡ ವಿದ್ಯಾರ್ಥಿಗಳ ಹಸಿವು ನಿಗಿಸಲು ಇಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದು ಸೂಕ್ತವಾಗಿದೆ ಎಂದರು.
ಈ ವೇಳೆ ಮುಖಂಡರಾದ ಅಮೃತ್, ಯುವರಾಜ, ಸಚಿನ, ಆನಂದ, ಪ್ರಕಾಶ, ಸಂಜು, ಮಾದೇಶ್, ಸತೀಶ ಸೇರಿದಂತೆ ನೂರಾರು ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

