ಚಡಚಣ: ಈ ಸಲ ಮುಂಗಾರು ಹಿಂಗಾರು ಮಳೆಗಳು ಸಂಪೂರ್ಣ ರೈತರು ಎಚ್ಚರ. ರೈತರಿಗೆ ಸುಕಾಲ, ಸಂತೋಷವೋ ಸಂತೋಷ. ಎಂದು ಮುಂತಾಗಿ ಘೂಳೇಶ್ವರರಿಂದ ನುಡಿಮುತ್ತುಗಳು ಜರುಗಿದವು. ಸಮೀಪದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆಯ ನಿಮಿತ್ಯ ದಿ. ೨೪ ರಂದು ಶನಿವಾರ ನಸುಕಿನ ೪ ರಿಂದ ೫ ಗಂಟೆಯವರೆಗೆ ರುದ್ರಾವತಾರಿ ಘೂಳೇಶ್ವರ ಮಹಾರಾಜರು ನುಡಿಮುತ್ತುಗಳು ಹೇಳಿದರು, ಇದನ್ನು ಕೇಳುತ್ತಲೆ ನೇರೆದ ಭಕ್ತಾಧಿಗಳು ಸಂತಸ ಚಪ್ಪಾಳೆ ಹೊಡೆದು ಆನಂದ ಪಟ್ಟರು.
ಶುಕ್ರವಾರ ಮುಂಜಾನೆ ನಸುಕಿನಲ್ಲಿ ವೇದಮೂರ್ತಿ ನೂರಂದಯ್ಯ ಸ್ವಾಮಿಗಳವರಿಂದ ದೇವರಿಗೆ ಮಹಾ ರುದ್ರಾಭಿಷೇಕ, ಮಹಾಪೂಜೆ ಜರುಗಿತು. ನಂತರ ಭಾವಿಕ ಭಕ್ತರಿಂದ ದೀರ್ಘದಂಡ ನಮಸ್ಕಾರಗಳು, ದೇವರಿಗೆ ಹರಕೆಗಳನ್ನು ಮುಟ್ಟಿಸಿ ಧನ್ಯರಾದರು.
ರಾತ್ರಿ ೧೨:೩೦ ಗಂಟೆಗೆ ಗ್ರಾಮದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಮದ್ದು ಸುಡುವುದರೊಂದಿಗೆ ಪಲ್ಲಕ್ಕಿ, ನಂದಿ ಧ್ವಜ ಭವ್ಯ ಮೆರವಣಿಗೆಯು ದೇವಸ್ಥಾನಕ್ಕೆ ತಲುಪಿತು ನಂತರ ನುಡಿಮುತ್ತುಗಳು ಜರುಗಿದವು. ಇದನ್ನು ಆಲಿಸಲು ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟçದಿಂದ ಸುಮಾರು ೩೦ ರಿಂದ ೪೦ ಸಾವಿರ ಭಕ್ತಾಧಿಗಳು ಶಾಂತ ರೀತಿಯಿಂದ ಆಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

