ಕೊಲ್ಹಾರ: ನೂತನ ತಾಲೂಕು ಕೇಂದ್ರ ಕೊಲ್ಹಾರ ಪಟ್ಟಣದಲ್ಲಿ ಹಿರಿಯ ಹಾಗೂ ಕಿರಿಯ ನ್ಯಾಯಾಲಯಗಳ ಕಚೇರಿಗಳನ್ನು ನ್ಯಾಯಾಧೀಶರ ಮತ್ತು ಸಿಬ್ಬಂದಿ ವರ್ಗದ ಸಹಿತವಾಗಿ ಮಂಜೂರು ಮಾಡಬೇಕೆಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರಿಗೆ ತಾಲೂಕು ರಚನಾ ಹೋರಾಟ ಸಮೀತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಸಚಿವರನ್ನು ಸಮೀತಿಯವರು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಈಗಾಗಲೇ ಹೊಸ ತಾಲೂಕು ಕೇಂದ್ರಗಳಲ್ಲಿ ಎಲ್ಲಿ ನ್ಯಾಯಾಲಯಗಳು ಇಲ್ಲವೋ ಆ ತಾಲೂಕು ಕೇಂದ್ರಗಳಲ್ಲಿ ನ್ಯಾಯಾಲಯಗಳನ್ನು ತ್ವರಿತವಾಗಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಪ್ರಸ್ತಾವಣೆಯು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಆದಷ್ಟು ಬೇಗನೆ ಕೊಲ್ಹಾರ ಪಟ್ಟಣದಲ್ಲಿ ನ್ಯಾಯಾಲಯ ಕಾರ್ಯಾಲಯವನ್ನು ಪ್ರಾರಂಭಿಸಲಾಗುವದು ಎಂದು ಸಚಿವರು ಭರವಸೆಯನ್ನು ನೀಡಿದರು.
ನ್ಯಾಯಾಲಯ ಕಚೇರಿಗಳು ಪ್ರಾರಂಭವಾಗದೇ ಹೊಸ ತಾಲೂಕಿನ ಜನತೆಯು ಮೂಲ ತಾಲೂಕು ಕೇಂದ್ರದ ನ್ಯಾಯಾಲಯಗಳಿಗೆ ತೆರಳಿ ತಮ್ಮ ವ್ಯಾಜ್ಯಗಳನ್ನು ದಾವಾಗಳನ್ನು ಬಗೆಹರಿಸಿಕೊಳ್ಳಲು ತೆರಳುತ್ತಿರುವದು ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ. ಇದರಿಂದ ಸಾರ್ವಜನಿಕರಿಗೆ ಸಮಯದ ಹಾಗೂ ಆರ್ಥಿಕ ಹೊರೆಯಾಗುತ್ತಿದ್ದು ಜನರ ಬಳಿಗೆ ಆಡಳಿತ ತರಬೇಕೆಂಬ ಸದುದ್ದೇಶದಿಂದ ಸರಕಾರವು ಹೊಸ ತಾಲೂಕು ಕೇಂದ್ರಗಳನ್ನು ರಚನೆ ಮಾಡಿದ್ದು ಆದ್ದರಿಂದ ತಾವುಗಳು ನಮ್ಮ ಮನವಿಗೆ ಸ್ಪಂದಿಸಿ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಬೇಕೆಂದು ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಸಚಿವರಲ್ಲಿ ಮನವಿ ಮಾಡಿಕೊಂಡರು.
ಈ ವೇಳೆ ಭಿಮಪ್ಪ ಸಂಗಪ್ಪ ಬೀಳಗಿ, ಹಾಸಿಂ ಪಟೇಲ, ನಾಮದೇವ ಪವಾರ, ರಮೇಶ ಗಣಿ, ಮಲ್ಲು ದೇಸಾಯಿ ರೋಣಿಹಾಳ, ಮಂಜುನಾಥ ಪೂಜಾರಿ, ಪರಶುರಾಮ ಬ ಗಣಿ, ಅನೇಕ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

