ಚಡಚಣ: ಗ್ರಾಮೀಣ ಭಾಗದ ಜಾತ್ರೆ ಸಮಾರಂಭಗಳಲ್ಲಿ ಕುಸ್ತಿ ಕಲೆಗಳು ಇನ್ನೂ ಜರಗುತ್ತೀವೆ, ಇತ್ತಿತ್ತಲಾಗಿ ಇದು ನಶಿಸಿ ಹೋಗುತ್ತಿದ್ದು ಇದರ ಉಳಿವಿಗಾಗಿ ಯುವಕರು ಮುಂದಾಗಬೇಕು. ಶಕ್ತಿ ಪ್ರದರ್ಶನಕ್ಕಿಟ್ಟು ಆಡುವ ಕಲೆ ಕುಸ್ತಿ ಬಹಳ ಮಹತ್ವ ಪಡೆದಿದೆ ಎಂದು ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಸಮೀಪದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆಯಲ್ಲಿ ಹಮ್ಮಿಕೊಂಡ ಜಂಗಿನಿಕಾಲಿ ಕುಸ್ತಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಎಂ.ಆರ್.ಪಾಟೀಲ ಮಾತನಾಡಿ. ಗ್ರಾಮಗಳಿಗೆ ಗರಡಿ ಮನೆಗಳು ತೆರೆಯಬೇಕು ಮತ್ತು ಉತ್ತಮ ಮಾರ್ಗದರ್ಶನ ನೀಡುವ ಗುರು ದೊರೆಯಬೇಕು. ಅಂದಾಗ ನೀವು ರಾಜ್ಯ ರಾಷ್ಟç ಮಟ್ಟದಲ್ಲಿ ಪ್ರಸಿದ್ಧರಾಗಿ ಪ್ರಶಸ್ತಿಗಳನ್ನು ಪಡೆಯುವಿರಿ ಎಂದರು.
ಭೈರವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವ ಸಾಹುಕಾರ ಭೈರಗೊಂಡ ಮಾತನಾಡಿದರು.
ಸುಮಾರೂ ನೂರಾರು ಕುಸ್ತಿ ಪಟುಗಳು ಬಾಗಿಯಾಗಿ ತಮ್ಮ ಶಕ್ತಿ ಪ್ರದರ್ಶಿಸಿದರು, ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆಗಳು ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದವು.
೫೧೦೦೦/- ಬಹುಮಾನದ ರಮ್ಜಾನ ಇಂಡಿ ಪೈಲ್ವಾನ ಹಾಗೂ ಮುಹೋಳದ ವಿಕ್ರಮ ಗಾಯಕವಾಡ ಇವರ ಜೋಡಿ ಕುಸ್ತಿಗಳು ಪ್ರೇಕ್ಷಕರಿಗೆ ಆನಂದ ತಂದವು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ, ಘೂಳೇಶ್ವರ ಮಹಾರಾಜರು, ಉಮರಜ ಗ್ರಾ.ಪಂ. ಅಧ್ಯಕ್ಷ ಕೌಂಶೇನ್ ಸಾವಳೆ, ಪಿ.ಡಿ.ಓ. ಎಲ್.ಎಫ್.ನದಾಫ, ಪಿಕೆಪಿಎಸ್ ಅಧ್ಯಕ್ಷ ಆರ್.ಆರ್.ರುದ್ರಾಕ್ಷಿ, ಮಾಜಿ ಗ್ರಾ.ಪಂ.ಸ. ಭೀಮಾಶಂಕರ ರುದ್ರಾಕ್ಷಿ, ಅಮಸಿದ್ಧ ಬಿಜ್ಜರಗಿ, ಕಾಮೇಶ ಪಾಟೀಲ, ಸುರೇಶ ಬಗಲಿ, ಮಲ್ಲು ಪೂಜಾರಿ, ನಾಗನಾಥ ಜೀಗಜೇವಣಿ, ಬೀರಪ್ಪ ಖತಾಳೆ, ನೂರೋಂದಯ್ಯು ಪಠಪತಿ ಎಲ್ಲ ಗ್ರಾ.ಪಂ. ಸದಸ್ಯರು ಗ್ರಾಮಸ್ಥರು, ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

