ವಿಜಯಪುರ: ನಗರದ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ಭಾನುವಾರ ಸಂಜೆ ದಿನಾಂಕ : ೨೫.೨.೨೦೨೪ ರಂದು ಸಂಜೆ ೬.೩೦ಕ್ಕೆ ಕಂದಗಲ್ಲ ಶ್ರೀ ಹನುಮಂತ ರಾಯ ರಂಗಮಂದಿರದಲ್ಲಿ ದಿ. ಶ್ರೀ ಭೋಜನ ಬಿಳಗಿಯವರ ಸ್ಮರಣಾರ್ಥ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ದೆಹಲಿಯ ಪ್ರಸಿದ್ಧ ಹಿಂದುಸ್ಥಾನಿ ಗಾಯಕರಾದ ಪಂ. ಹರೀಶ ತಿವಾರಿಯವರು ಗಾಯನ ಪ್ರಸ್ತುತ ಪಡಿಸಲಿದ್ದಾರೆ ಪಂ. ಸಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ ಮತ್ತು ಪಂ. ರವಿಕಿರಣ ನಾಕೋಡರವರು ತಬಲಾ ಸಾತ್ ನೀಡಲಿದ್ದಾರೆ.
ಈ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದ್ದು ವಿಜಯಪುರದ ಎಲ್ಲ ಸಮಗೀತ ಆಸಕ್ತರು ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸುರಸಿಂಗಾರ ಸಂಸ್ಥೆಯ ಕಾರ್ಯದರ್ಶಿ ಸಂಗಣ್ಣ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

