Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕಳೆದ 2024 ರ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ ಬಡವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಹೇಳಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರತಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ, ಸ್ವಿಸ್ ಬ್ಯಾಂಕ್ ನ ಕಪ್ಪು ಹಣ ತಂದು ಬಡವರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಆದರೆ ನುಡಿದಂತೆ ನಡೆಯದೇ ದೇವರು, ಧರ್ಮದ ಮೊರೆ ಹೋಗಿದೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗಳಿಂದ ಜನರ ಆದಾಯ ದ್ವಿಗುಣಗೊಂಡಿದೆ ಎಂದರು.ಜಾತ್ಯತೀತವಾಗಿ, ಪಕ್ಷಾತೀತವಾಗಿ ಎಲ್ಲರಿಗೂ ಈ ಯೋಜನೆಗಳು ಅನುಕೂಲವಾಗಿವೆ. ರಾಜ್ಯದ ಸುಮಾರು ಏಳೂವರೆ ಕೋಟಿ ಜನಸಂಖ್ಯೆಯ ಪೈಕಿ ಅಂದಾಜು 3.5 ಕೋಟಿ ಜನ ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಬಡವರಿಗೆ ಹತ್ತು ಕೆಜಿ ಅಕ್ಕಿ ನೀಡಲಾಗುತ್ತಿದೆ. ಐದು ಕೆಜಿ ಅಕ್ಕಿ ಜೊತೆಗೆ…
“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ ಅದೊಂದು ದೊಡ್ಡ ಕಾಡು. ನವಿಲು, ಕೋಗಿಲೆ, ಹಂದಿ, ಕುರಿ, ಕಾಗೆ, ಗೂಬೆ, ಕೋತಿ, ನರಿ ಹೀಗೆ ಹತ್ತು-ಹಲವು ಪ್ರಾಣಿಗಳು ವಾಸವಾಗಿದ್ದವು.ಆ ಕಾಡಿನ ರಾಜನಾಗಿದ್ದ ಸಿಂಹ ಅಕಾಲಿಕ ಮರಣಕ್ಕೆ ತುತ್ತಾಗಿ ಇಡೀ ಅರಣ್ಯವೇ ರಾಜನಿಲ್ಲದೆ ಅನಾಥವಾಗಿತ್ತು.ರಾಜನಿಲ್ಲದೇ ಕಾಡುಪ್ರಾಣಿಗಳು ಬೇಸರಗೊಂಡಿದ್ದವು. ಅವುಗಳು ಸಭೆ ಸೇರಿ ಹೊಸರಾಜನ ಆಯ್ಕೆಗೆ ಚರ್ಚೆನಡೆಸಿದ್ದವು. ಯಾರು ತಮ್ಮನೆಲ್ಲ ರಂಜಿಸ್ತಾರೋ ಅವರನ್ನೇ ಹೊಸ ರಾಜನ ಮಾಡುವ ನಿರ್ಧಾರ ಮಾಡಿ ಅದಕ್ಕೊಂದು ದಿನ ಗೊತ್ತು ಮಾಡಿದವು. ಆ ದಿನ ಬಂದೇ ಬಿಟ್ಟಿತು.ರಾಜನ ಆಯ್ಕೆಗೆ ದೊಡ್ಡದಾದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಮೊದಲಿಗೆ ಕೋಗಿಲೆ ಬಂದು ಸುಸ್ವರದಿಂದ ಹಾಡಿತು. ನವಿಲೊಂದು ಬಂದು ನೃತ್ಯ ಮಾಡಿತು. ಹೀಗೆ ವಿವಿಧ ಪ್ರಾಣಿಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿದವು. ಕೋತಿಯೊಂದು ತನ್ನ ಆಂಗಿಕ ಚೇಷ್ಟೆಗಳಿಂದ ಪ್ರಾಣಿಗಳ ಮನಸೂರೆಗೊಂಡಿತ್ತು.ಹೆಚ್ಚಿನ ಪ್ರಾಣಿಗಳು ಮಂಗನನ್ನೇ ಆರಿಸಿದ್ದರಿಂದ ಮಂಗವೇ ವನರಾಜನಾಗಿ ಸರ್ವಾನುಮತದ ಆಯ್ಕೆಯಾಯಿತು. ಮಂಗ ಸಂತೋಷದಿಂದ ಉಬ್ಬಿಹೋಯಿತು.ಆದರೆ ಮಂಗನ ಆಯ್ಕೆ ಠಕ್ಕ ನರಿಗೆ ಖುಷಿ ತರಲಿಲ್ಲ. ಆದರೂ…
ವಿಜಯಪುರ: ನಗರದ ಲೇಖಕಿ ಹಾಗೂ ಸಮಾಜ ಸೇವಕಿ ಡಾ.ಸುರೇಖಾ ರಾಠೋಡ ಅವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ೨೦೨೨ ನೇ ಸಾಲಿನ ಪುಸ್ತಕ ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಮಂದಿರದಲ್ಲಿ ನಡೆದ ವಿವಿಧ ಪುಸ್ತಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಸುರೇಖಾ ರಾಠೋಡ ಅವರಿಗೆ ಕರ್ನಾಟಕ ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹಾಗೂ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.ಮಾನವೀಯ ಕಳಕಳಿಯ ಡಾ.ಸುರೇಖಾ ರಾಠೋಡ ಅವರಿಗೆ ’ಉದಯರಶ್ಮಿ” ಪತ್ರಿಕಾ ಬಳಗ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.
ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ವಿಜಯಪುರ: ಜಿಲ್ಲೆಯ ಸಿಂದಗಿ ಮದೀನಾ ನಗರ (ಮಡ್ಡಿ)ಕೊಳಚೆ ಪ್ರದೇಶದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಎ.ಆರ್ .ಆಸ್ಪತ್ರೆ. ಫಹದ್ ಇನ್ನಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ ಕಾಲೇಜ ಹಾಗೂ ಅಬು ಆಸ್ಪತ್ರೆ ಸಿಂದಗಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣೆ ನಡೆಯಿತು.ಈ ಶಿಬಿರದಲ್ಲಿ ನೂರಕ್ಕಿಂತ ಹೆಚ್ಚು ರೋಗಿಗಳಿಗೆ ತಪಾಸಣೆಯ ಜೊತೆಗೆ ಉಚಿತ ಔಷಧಿಯು ಕೂಡ ನೀಡಲಾಯಿತು.ಈ ಸಂದರ್ಭದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯ ಅಧ್ಯಕ್ಷ ಮೌಲಾನಾ ದಾವೂದ್ ನದ್ವಿ ಮಾತನಾಡಿ, ಈ ವೇದಿಕೆ ದಣಿವರಿಯದೆ, ನಿಲ್ಲದೆ ಕಳೆದ ಏಳು ವರ್ಷಗಳಿಂದ ಆರೋಗ್ಯವಂತ ಸಮಾಜದ ಸಲುವಾಗಿ ಸೇವೆ ಸಲ್ಲಿಸುತ್ತಿದೆ. ಪರಸ್ಪರ ಸಹಕಾರದಿಂದ ಮಾನವೀಯತೆ ಸಮಾಜ ಬಲಗೊಳ್ಳುತ್ತಿದೆ. ತಮ್ಮ ಸಹಕಾರ ಮಾನವ ಸಮಾಜಕ್ಕೆ ಸದಾ ಇರಲೆಂದು ಕೋರಿದರು.ಹಾಫೀಜ ಫಜಲೆ ಹಕ್ಕ ಸಾಹೇಬ ಮಾತನಾಡಿ, ಸಮಾಜವು ಪ್ರೀತಿ-ಪ್ರೇಮ, ದಾನ-ಧರ್ಮ ಆರೋಗ್ಯದಿಂದ ಅಭಿವೃದ್ಧಿಪಡೆಯುತ್ತದೆ. ತಾವುಗಳು ಹಗಲಿರುಳು ಜನರ ಆರೋಗ್ಯದ ಕುರಿತು…
ಪತ್ರಕರ್ತ ದಿ.ರಾಮ ಮನಗೂಳಿಗೆ ಯಲಗೂರೇಶ್ವರ ಅನುಗ್ರಹ ಪ್ರಶಸ್ತಿ ಆಲಮಟ್ಟಿ: ಯಲಗೂರೇಶ್ವರ ದೇವಸ್ಥಾನ ಸಮಿತಿ ಪ್ರತಿವರ್ಷ ನೀಡುವ ಪ್ರತಿಷ್ಠಿತ “ಯಲಗೂರೇಶ ಅನುಗ್ರಹ ಪ್ರಶಸ್ತಿ’ ಈ ಬಾರಿ ಖ್ಯಾತ ಪತ್ರಕರ್ತ ದಿ. ರಾಮ ಮನಗೂಳಿ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.ಜಾತ್ರೆಯ ಎರಡನೇ ದಿನ ಭಾನುವಾರ ತೆಂಗಿನ ತೋಟದಲ್ಲಿ ನಡೆದ ಮಹಾನ್ ಕಲಾವಿದರ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸಮಿತಿಯ ಅಧ್ಯಕ್ಷ ಅನಂತ ಓಂಕಾರ ಘೋಷಿಸಿದಾಗ, ಸೇರಿದ್ದ ಸಹಸ್ರಾರು ಜನರು ರಾಮ ಅವರ ಕೊಡುಗೆಯನ್ನು ತಮ್ಮಲ್ಲಿ ಮೆಲುಕು ಹಾಕುತ್ತಾ, ಕಣ್ಣಂಚಿನಲ್ಲಿ ನೀರು ಬಂದಿದ್ದು ಕಂಡು ಬಂತು.ಅಲ್ಲಿ ಮಾತನಾಡಿದ, ದೇವಾಲಯ ಸಮಿತಿಯ ಸದಸ್ಯ ಗೋಪಾಲ ಗದ್ದನಕೇರಿ, ಯಲಗೂರ ಕ್ಷೇತ್ರದ ಅಭಿವೃದ್ಧಿಗೆ ಪರೋಕ್ಷವಾಗಿ ಸಾಕಷ್ಟು ಶ್ರಮಿಸಿದ್ದಾರೆ, ರಾ.ಹೆ.50 ರಿಂದ ಯಲಗೂರದವರೆಗೆ ರಸ್ತೆ ನಿರ್ಮಾಣಕ್ಕೆ, ನದಿ ದಂಡೆಯಿಂದ ಗ್ರಾಮದವರೆಗೆ ರಸ್ತೆ ನಿರ್ಮಾಣ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಸಚಿವರ ಮೇಲೆ ಒತ್ತಡ ಹಾಕಿ ಆ ಕಾರ್ಯ ಆಗುವ ನಿಟ್ಟಿನಲ್ಲಿ ಅವರ ಕೊಡುಗೆ ಸಾಕಷ್ಟಿದೆ ಎಂದು ಸ್ಮರಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ…
ಆಲಮಟ್ಟಿ: ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ, ಅತ್ಯಂತ ಶಿಸ್ತುಬದ್ಧವಾಗಿ, ದೇಶಿ ಹಾಗೂ ಆಧುನಿಕ ಶೈಲಿಗಳನ್ನು ಅಳವಡಿಸಿಕೊಂಡು, ಅದ್ಭುತ ವೇದಿಕೆಯಲ್ಲಿ ಸಮೀಪದ ಬೇನಾಳ ಆರ್.ಎಸ್. ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಸಂಭ್ರಮ “ದಿಶಾ-2024-ಪ್ರಗತಿಯಿಂದ ಪರಿವರ್ತನೆಯೆಡೆಗೆ’ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.ಶಳೆದ 15 ದಿನಗಳಿಂದ ಶಾಲೆಯ ಪ್ರತಿ ಶಿಕ್ಷಕರು ಸತತ ಪರಿಶ್ರಮ, ಅರ್ಪಣಾ ಮನೋಭಾವನೆ ಹಾಗೂ ಸೃಜನಾತ್ಮಕ ಮನೋಭಾವನೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ, ಶಾಲೆಯ ಪ್ರತಿ ಮಗುವನ್ನು ಯಾವುದಾದರೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ, ಹೊಸ ಹೊಸ ಮನೋರಂಜನಾ ಪ್ರಯೋಗ ಮಾಡಿದ್ದು ಪ್ರಶಂಸೆಗೆ ಪಾತ್ರವಾಯಿತು. ಹಗ್ಗದ (ರೋಪ್ ಡಾನ್ಸ್ ) ನೃತ್ಯ ಗಮನಸೆಳೆಯಿತು.ಶಿಕ್ಷಕರು, ಮಕ್ಕಳ ಕಲೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ಬೇನಾಳ ಗ್ರಾಮದ ಹಳೆ ವಿದ್ಯಾರ್ಥಿಗಳು ಕೈಜೋಡಿಸಿದ್ದು ವಿಶೇಷ. ವೇದಿಕೆಯಲ್ಲಿ ಲೈವ್ ಸ್ಕ್ರೀನ್ ಡಿಸ್ ಪ್ಲೇ ಪ್ರದರ್ಶನವೂ ನಡೆಯಿತು. ಸುಮಾರು ಆರು ಗಂಟೆಗಳ ಕಾಲ ನಡೆದ ದೀರ್ಘಾವಧಿ ಕಾರ್ಯಕ್ರಮದಲ್ಲಿ ಸಹಸ್ರಾರು ಗ್ರಾಮಸ್ಥರು ಭಾಗವಹಿಸಿ, ಸರ್ಕಾರಿ ಶಾಲೆಯ ಸಾಧನೆಯ ಬಗ್ಗೆ ಹೊಗಳಿದ್ದು ಕಂಡು ಬಂತು.ಗ್ರಾಮ…
ಬಿ.ಆರ್.ಬನಸೋಡೆ ರಚಿತ “ವಿಜಯಪುರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಹೆಜ್ಜೆಗಳು” ಕೃತಿ ಬಿಡುಗಡೆ ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಸರಕಾರ ನಾನಾ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ನಗರದ ಕಂದಗಲ ಹನುಮಂತರಾಯ ರಂಗಮಂದಿರಲ್ಲಿ ರವಿವಾರ ನಡೆದ ಬಿ. ಆರ್. ಬನಸೋಡೆ ಅವರು ರಚಿಸಿರುವ ವಿಜಯಪುರದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ ಹೆಜ್ಜೆಗಳು(ಬೀಳಗಿ ಸೋಮನಗೌಡರ ಕೋರ್ಟ್ ಕೇಸ್) ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂಬೇಡ್ಕರ ಅವರು ದೇಶಕ್ಕೆ ವಿಶ್ವಶ್ರೇಷ್ಠ ಸಂವಿಧಾನವನ್ನು ನೀಡುವ ಮೂಲಕ ದೇಶದಲ್ಲಿ ಜಗತ್ತಿನ ಅಗ್ರಗಣ್ಯ ನಾಯಕರಾಗಿದ್ದಾರೆ. ಅವರು ಕೇವಲ ದಲಿತರಿಗೆ ಶಕ್ತಿಯನ್ನು ಕೊಡಲಿಲ್ಲ. ಬದಲಾಗಿ ತುಳಿತಕ್ಕೊಳಗಾದ, ಶೋಷಣೆಗೀಡಾದ ಮತ್ತು ಅಸಮಾನತೆಯನ್ನು ಎದುರಿಸುತ್ತಿರುವ ಎಲ್ಲ ಸಮುದಾಯಗಳು ಹಾಗೂ ಭಾರತದ ಎಲ್ಲ 130 ಜನರಿಗೆ ಶಕ್ತಿಯನು ತುಂಬಿದ್ದಾರೆ. ಎಲ್ಲ ವಿವಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಡಾ. ಅಂಬೇಡ್ಕರ ಅವರ ಚಿಂತನೆಗಳ…
Udayarashmi kannada daily newspaper
ವಿಜಯಪುರ ಜಿಲ್ಲೆ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ | ತಿಕೋಟಾ ಆಡಳಿತ ಸೌಧ ಉದ್ಘಾಟನೆ | ಸಚಿವ ಡಾ.ಎಂ.ಬಿ.ಪಾಟೀಲ ಭರವಸೆ ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಆಹಾರ ಸಂಸ್ಕೃರಣ ಘಟಕಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಬೆಳೆಯಲಾದ ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಳಿಗೆ ಉತ್ತಮ ಬೆಲೆ ದೊರಕಿ ಆರ್ಥಿಕತೆ ವೃದ್ದಿಯಾಗಿ, ಸ್ಥಳೀಯವಾಗಿಯೇ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದ್ದು, ಜಿಲ್ಲೆಯ ಸರ್ವಾಂಗೀರ್ಣ ಅಭಿವೃದ್ದಿಗೆ ಶ್ರಮಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಸಚಿವ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಶನಿವಾರ ತಿಕೋಟಾದಲ್ಲಿ ೧೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ವಿಧಾನಸೌಧ ಉದ್ಘಾಟನೆ ಹಾಗೂ ತಾಲೂಕಾ ಪಂಚಾಯತಿ ಮತ್ತು ಪಟ್ಟಣ ಪಂಚಾಯತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೇವಲ ನೀರಾವರಿ ಯೋಜನೆಗಳಷ್ಟೇ ಅಲ್ಲದೇ ಕೆರೆಗಳಿಗೆ ನೀರು ತುಂಬಿಸುವುದು, ಶಿಕ್ಷಣ ಗುಣಮಟ್ಟ ಸುಧಾರಣೆ, ಶಾಲಾ ಕಟ್ಟಡಗಳ ಸುಧಾರಣೆ, ಸುಸಜ್ಜಿತ ಗ್ರಂಥಾಲಯಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್‌ಗಳ…
ಆಲಮಟ್ಟಿ ಮಂಜಪ್ಪ ಹರ್ಡೇಕರ ಸನ್ನಿಧಿಯಲ್ಲಿ ಬಿ.ಕೆ.ಬಿರಾದಾರ ಅವರಿಗೆ ಸಂಮಾನ ಆಲಮಟ್ಟಿ: ಇಲ್ಲಿನ ಕೃಷ್ಣೆಯ ಸುಂದರ ಪರಿಸರದಲ್ಲಿರುವ ಕರುನಾಡು ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕ ಭವನಕ್ಕೆ ಭೇಟಿ ನೀಡಿದ ವಿಜಯಪುರ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಇಂಗ್ಲೀಷ ವಿಷಯ ಪರಿವೀಕ್ಷಕ ಬಿ.ಕೆ.ಬಿರಾದಾರ ಅವರನ್ನು ಹೃದಯಸ್ಪರ್ಶಿವಾಗಿ ಸನ್ಮಾನಿಸಿ ಗೌರವಿಸಲಾಯಿತು. ಗದುಗಿನ ತೋಂಟದಾರ್ಯ ವಿದ್ಯಾಪೀಠದ ಹಾಗೂ ಆಲಮಟ್ಟಿ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ,ಶಿಕ್ಷಣ ತಜ್ಞ ಪ್ರೊ, ಎಸ್.ಎಸ್.ಪಟ್ಟಣಶೆಟ್ಟರ ಅವರು ಮಂಜಪ್ಪನವರ ಕಂಚಿನ ಪುತ್ಥಳಿ ಸನ್ನಿಧಿಯಲ್ಲಿ ಸಂಸ್ಥೆಯ ಪರವಾಗಿ ಬಿ.ಕೆ.ಬಿರಾದಾರ ಅವರನ್ನು ಶಾಲು ಹೊದಿಸಿ ಸತ್ಕರಿಸಿದರು. ಈ ವೇಳೆ ಕರುನಾಡಿನ ಅನರ್ಘ್ಯ ರತ್ನ, ಅಜ್ಞಾತ ಮಹಾತ್ಮ ಮಂಜಪ್ಪ ಹರ್ಡೇಕರ ಅವರ ಜೀವನ ಚರಿತ್ರೆಯ ಯಶೋಗಾಥೆ ಮೇಲೆ ಪ್ರೊ,ಪಟ್ಟಣಶೆಟ್ಟರ ಬೆಳಕು ಚೆಲ್ಲಿದರು. ಸಮಾಜಕ್ಕಾಗಿ ಇಡೀ ತಮ್ಮ ಜೀವ ಸವೆದಿರುವ ಮಂಜಪ್ಪನವರು ಅಪ್ರತಿಮ ಚಿಂತಕರು. ತ್ಯಾಗ ಜೀವಿ ಈ ಶರಣರ ಸತ್ಕಾರ್ಯಗಳು ಆಜರಾಮರ. ಅವರ ದೇಶ ಪ್ರೇಮ, ಪಾರದರ್ಶಕತೆ ಬದುಕು ಮರೆಯಲಾಸಾಧ್ಯ ಎಂದರು. …
