ಆಲಮಟ್ಟಿ: ಖಾಸಗಿ ಶಾಲೆಗೆ ಪೈಪೋಟಿ ನೀಡುವಂತೆ, ಅತ್ಯಂತ ಶಿಸ್ತುಬದ್ಧವಾಗಿ, ದೇಶಿ ಹಾಗೂ ಆಧುನಿಕ ಶೈಲಿಗಳನ್ನು ಅಳವಡಿಸಿಕೊಂಡು, ಅದ್ಭುತ ವೇದಿಕೆಯಲ್ಲಿ ಸಮೀಪದ ಬೇನಾಳ ಆರ್.ಎಸ್. ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಸಂಭ್ರಮ “ದಿಶಾ-2024-ಪ್ರಗತಿಯಿಂದ ಪರಿವರ್ತನೆಯೆಡೆಗೆ’ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಶಳೆದ 15 ದಿನಗಳಿಂದ ಶಾಲೆಯ ಪ್ರತಿ ಶಿಕ್ಷಕರು ಸತತ ಪರಿಶ್ರಮ, ಅರ್ಪಣಾ ಮನೋಭಾವನೆ ಹಾಗೂ ಸೃಜನಾತ್ಮಕ ಮನೋಭಾವನೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ, ಶಾಲೆಯ ಪ್ರತಿ ಮಗುವನ್ನು ಯಾವುದಾದರೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿ, ಹೊಸ ಹೊಸ ಮನೋರಂಜನಾ ಪ್ರಯೋಗ ಮಾಡಿದ್ದು ಪ್ರಶಂಸೆಗೆ ಪಾತ್ರವಾಯಿತು. ಹಗ್ಗದ (ರೋಪ್ ಡಾನ್ಸ್ ) ನೃತ್ಯ ಗಮನಸೆಳೆಯಿತು.
ಶಿಕ್ಷಕರು, ಮಕ್ಕಳ ಕಲೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ಬೇನಾಳ ಗ್ರಾಮದ ಹಳೆ ವಿದ್ಯಾರ್ಥಿಗಳು ಕೈಜೋಡಿಸಿದ್ದು ವಿಶೇಷ. ವೇದಿಕೆಯಲ್ಲಿ ಲೈವ್ ಸ್ಕ್ರೀನ್ ಡಿಸ್ ಪ್ಲೇ ಪ್ರದರ್ಶನವೂ ನಡೆಯಿತು. ಸುಮಾರು ಆರು ಗಂಟೆಗಳ ಕಾಲ ನಡೆದ ದೀರ್ಘಾವಧಿ ಕಾರ್ಯಕ್ರಮದಲ್ಲಿ ಸಹಸ್ರಾರು ಗ್ರಾಮಸ್ಥರು ಭಾಗವಹಿಸಿ, ಸರ್ಕಾರಿ ಶಾಲೆಯ ಸಾಧನೆಯ ಬಗ್ಗೆ ಹೊಗಳಿದ್ದು ಕಂಡು ಬಂತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ ಕಾರ್ಯಕ್ರಮ ಉದ್ಘಾಟಿಸಿದರು.
ಚೈತ್ರಾ ಇಂಗಳೇಶ್ವರ, ರವಿ ಬಾಗೇವಾಡಿ, ಜಿ.ಸಿ. ಮುತ್ತಲದಿನ್ನಿ, ಬಿ.ಎಚ್. ಗಣಿ, ಎಸ್.ಡಿಎಂಸಿ ಅಧ್ಯಕ್ಷ ಮುನ್ನಾ ಬೆಣ್ಣಿ, ಟಿ.ಎಸ್. ಬಿರಾದಾರ, ನೇತಾಜಿ ಗಾಂಧಿ, ಮಹೇಶ ಇಂಗಳೇಶ್ವರ, ಶಿಕ್ಷಕ ಸಂಘಟನೆಯ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಸುರೇಶ ಹುರಕಡ್ಲಿ, ವಿ.ಕೆ. ಮಸೂತಿ, ಆರ್.ಬಿ. ಗೌಡರ, ಸಂಗಪ್ಪ ಹಂಡರಗಲ್ಲ, ಬಿ.ಸಿ. ಮನಗೂಳಿ, ಮುತ್ತು ಬಡಿಗೇರ, ಚೆನ್ನಪ್ಪ ಬಾಗೇವಾಡಿ, ಹನುಮಂತ ಗದುಗಿನ, ರಾಜು ಆಲಮಟ್ಟಿ ಇದ್ದರು. ಮಹೇಶ ಗಾಳಪ್ಪಗೋಳ ಉಪನ್ಯಾಸ ನೀಡಿದರು.
ಪದೋನ್ನತಿ ಹೊಂದಿದ ಶಿಕ್ಷಕ ವಿ.ಎಸ್. ರಾಠೋಡ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಹನುಮಂತಪ್ಪ, ಶಿಕ್ಷಕರಾದ ಪ್ರಭಾಕರ ಹೆಬ್ಬಾಳ, ಎನ್.ಬಿ. ದಾಸರ, ಸೀತಾರಾಮ್ ರಾಠೋಡ, ಆನಂದ ರೇವಡಿ, ದುಂಡಪ್ಪ ಮುತ್ತಲದಿನ್ನಿ, ಜಿ.ಡಿ. ಆಸಂಗಿ, ಕೆ.ವಿ. ಕುಕನೂರ, ಮೇರಾಬಾಯಿ, ಸುಷ್ಮಿತಾ ಅಮ್ಮನವರು ಮತ್ತೀತರ ಕಾರ್ಯ ಪ್ರಶಂಸೆಗೆ ಪಾತ್ರವಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

