ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ
ವಿಜಯಪುರ: ಜಿಲ್ಲೆಯ ಸಿಂದಗಿ ಮದೀನಾ ನಗರ (ಮಡ್ಡಿ)ಕೊಳಚೆ ಪ್ರದೇಶದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಎ.ಆರ್ .ಆಸ್ಪತ್ರೆ. ಫಹದ್ ಇನ್ನಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ ಕಾಲೇಜ ಹಾಗೂ ಅಬು ಆಸ್ಪತ್ರೆ ಸಿಂದಗಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಈ ಶಿಬಿರದಲ್ಲಿ ನೂರಕ್ಕಿಂತ ಹೆಚ್ಚು ರೋಗಿಗಳಿಗೆ ತಪಾಸಣೆಯ ಜೊತೆಗೆ ಉಚಿತ ಔಷಧಿಯು ಕೂಡ ನೀಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯ ಅಧ್ಯಕ್ಷ ಮೌಲಾನಾ ದಾವೂದ್ ನದ್ವಿ ಮಾತನಾಡಿ, ಈ ವೇದಿಕೆ ದಣಿವರಿಯದೆ, ನಿಲ್ಲದೆ ಕಳೆದ ಏಳು ವರ್ಷಗಳಿಂದ ಆರೋಗ್ಯವಂತ ಸಮಾಜದ ಸಲುವಾಗಿ ಸೇವೆ ಸಲ್ಲಿಸುತ್ತಿದೆ. ಪರಸ್ಪರ ಸಹಕಾರದಿಂದ ಮಾನವೀಯತೆ ಸಮಾಜ ಬಲಗೊಳ್ಳುತ್ತಿದೆ. ತಮ್ಮ ಸಹಕಾರ ಮಾನವ ಸಮಾಜಕ್ಕೆ ಸದಾ ಇರಲೆಂದು ಕೋರಿದರು.
ಹಾಫೀಜ ಫಜಲೆ ಹಕ್ಕ ಸಾಹೇಬ ಮಾತನಾಡಿ, ಸಮಾಜವು ಪ್ರೀತಿ-ಪ್ರೇಮ, ದಾನ-ಧರ್ಮ ಆರೋಗ್ಯದಿಂದ ಅಭಿವೃದ್ಧಿಪಡೆಯುತ್ತದೆ. ತಾವುಗಳು ಹಗಲಿರುಳು ಜನರ ಆರೋಗ್ಯದ ಕುರಿತು ಕಾಳಜಿವಹಿಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ಪ್ರಯೋಗಾಲಯ ಅಧಿಕಾರಿ ರಾಜಶೇಖರ್ ನರಗೋದಿ ಮಾತನಾಡಿದರು.
ಇದೇ ಸಂದರ್ಭದಲ್ಲಿ. ಡಾ. ತೌಸಿಫ್ ಮಮದಾಪುರ್, ಡಾ ಮಹಮ್ಮದ್ ಇಲಿಯಾಸ್ ಜಾಲಗೇರಿ, ಡಾ.ಶ್ರೀಮತಿ ಶಹೇಲಾ ಮಮದಾಪುರ್, ಡಾ.ಸಂಗಮೇಶ್. ಎ .ಪಾಟೀಲ್, ಡಾ. ಅಬೂಬಕರ್ ಮುಲ್ಲಾ, ಡಾ. ಹಾಜಿ .ಎಮ. ನದಾಫ್
ಡಾ. ಅಶ್ರಫ್ ಖತೀಪ್, ಮೌಲಾನಾ ಕಲೀಮುಲ್ಲಾ ನದ್ವಿ, ರವಿ ವಾಲಿಕಾರ, ಮಹಬೂಬ ಯಂಕಂಚಿ, ಫಹದ ಇನ್ಸಟೂಟ ಆಫ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಸೇವೆಯಲ್ಲಿ ಭಾಗಿಯಾಗಿದ್ದರು.

