Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ಕರ್ನಾಟಕ ಸರಕಾರ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ (ಕೆಡಿಪಿ) ಮಹಾನಂದ ಬಮ್ಮಣ್ಣಿ, ಸುರೇಶ ಸಿದ್ದಪ್ಪ ಚೌಧರಿ, ಶಿವಯೋಗೆಪ್ಪ ಹತ್ತರಕಿ, ಖಾದರಬಾಷಾ ವಾಲೀಕಾರ, ನಿಂಗಣ್ಣ ಬುಳ್ಳಾ, ಅಯ್ಯಪ್ಪ ಚಂದ್ರಾಮ ಕಟ್ಟಿಮನಿ ಅವರಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಲಾಗಿದೆ.ಸದರಿ ಎಲ್ಲ ನಾಮ ನಿರ್ದೇಶನಗೊಂಡ ಸದಸ್ಯರಿಗೆ ಶಾಸಕ ಅಶೋಕ ಮನಗೂಳಿ ಅಭಿನಂದನೆ ಸಲ್ಲಿಸಿದ್ದಾರೆ.
ಕೊಲ್ಹಾರ: “ಏಕ ಸಾಅತ್ ಸ್ವಹಬತೇ ಬಾ ಅವಲಿಯಾ ಬಹತರ ಅಜ್ ಸದ್ ಸಾಲಾ ತಾಅತೆ ಬೇರಿಯಾ” ಸಂದೇಶದಂತೆ ಭೂತ ಮತ್ತು ಭವಿಷ್ಯತ್ ಕಾಲದ ಬಗ್ಗೆ ಒಂದಿಷ್ಟು ಚಿಂತನೆ ಮಾಡದೆ ಮೂಡನಂಬಿಕೆಯನ್ನು ಮನದಲ್ಲಿ ಮೂಡಿಸಿಕೊಳ್ಳದೆ ವರ್ತಮಾನ ಕಾಲದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಅಳಿಸಿ ಹಾಕಿ ಸಾಧ್ಯವಾಗಿಸುವ ಶಕ್ತಿ ಹೊಂದಿರುವ ವ್ಯಕ್ತಿಗಳು ಅಂದರೆ ಶರಣರು ಸಂತರು ದಾರ್ಶನಿಕರು ಹಾಗೂ ಸೂಪಿತತ್ವವನ್ನು ನಂಬಿ ಜೀವನ ನಡೆಸುವವರು ಮನುಜಮತ ವಿಶ್ವಪಥ ಎಂದು ತಿಳಿಸಲು ಸದಾಕಾಲ ಚಿಂತನೆ ಮಾಡುತ್ತಿರುತ್ತಾರೆ.ಅಂತಹ ಸೂಫಿಗಳಲ್ಲಿ ಒಬ್ಬರು ಅಲಹಾಬಾದ್ ಮೌಲಾನ ಎಂದು ಕಲಿಯುಗದಲ್ಲಿ ಪ್ರಖ್ಯಾತರಾದ ಹಜರತ್ ಅಬ್ದುಲ್ ಗಫಾರ್ ಖಾದ್ರಿ ಶ್ರೇಷ್ಠ ಪವಾಡ ಪುರುಷ ಯೋಗಿಗಳಾಗಿದ್ದರು ಇವರು ಉತ್ತರ ಪ್ರದೇಶದ ಅಲಹಾಬಾದನಲ್ಲಿ ಕ್ರಿ.ಶ ೧೮೫೫ ರಲ್ಲಿ ಜನ್ಮತಾಳಿದರು. ಮಾನವೀಯತೆ ಉದ್ದಾರಕ್ಕಾಗಿ ಸೂಫಿ ಧರ್ಮ ಅದರ ತತ್ವಗಳ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹಲವಾರು ರಾಜ್ಯಗಳಲ್ಲಿ ಸುತ್ತಾಡಿ ತಮ್ಮ ಸಾವಿರಾರು ಶಿಷ್ಯ ಬಳಗವನ್ನು ಹುಟ್ಟುಹಾಕಿದರು. ನಿರಂತರವಾಗಿ ಮನುಜ ಕುಲದ ಉದ್ದಾರಕ್ಕಾಗಿ ಆಸೆ ಆಮಿಷಗಳಿಗೆ ಒಳಗಾಗದೇ ಮಾನವ…
ಕೆಂಭಾವಿ: HTC ಶಟಲ್ ಬ್ಯಾಡ್ಮಿಂಟನ್ ಕ್ಲಬ್ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಿದ್ದು. ಇದೇ ತಿಂಗಳು ಮಾ.09ರಂದು ಹಿಲ್ ಟಾಪ್ ನ ಬ್ಯಾಡ್ಮಿಂಟನ್ ಗ್ರೌಂಡ್ ನಲ್ಲಿ ಓಪನ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿವೆ ಎಂದು HTC ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಚ್. ಆರ್. ಬಡಿಗೇರ್ ತಿಳಿಸಿದರು.ದಶರಥ ಮೂಡಲಗಿರಿ, ಸದ್ದಾಂ ಕೆ. ಕೆ, ಕಲ್ಯಾಣಿ, ಪ್ರವೀಣ್ ಸೇರಿದಂತೆ ಇತರರು ಪಂದ್ಯಾವಳಿ ಪ್ರಾಯೋಜಕರಾಗಿದ್ದಾರೆ. ಪ್ರಥಮ ಬಹುಮಾನ 11, 001ರೂ, ದ್ವಿತೀಯ ಬಹುಮಾನ 5,001ರೂ, ತೃತೀಯ ಬಹುಮಾನ 2,501ರೂ, ಬೆಸ್ಟ್ ಸ್ಮಾಶರ 1111ರೂ, ಉತ್ತಮ ತಂಡಕ್ಕೆ 1111ರೂ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ 400ರೂ ಇರುತ್ತದೆ. ತಂಡವನ್ನು ನೊಂದಾಯಿಸಲು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ. 6361947131, 7353735418, 9964609143.
ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ | ಧರ್ಮ ಸಮನ್ವಯ ಸಮಾರಂಭ | ಪುರಾಣ ಮಂಗಲೋತ್ಸವ ಮುದ್ದೇಬಿಹಾಳ: ಮಂತ್ರಿಗಳೊಂದಿಗೆ, ಪ್ರತಿಷ್ಠಿತ ನಾಯಕರೊಂದಿಗೆ, ಎಲ್ಲ ಜಗದ್ಗುರುಗಳೊಂದಿಗೆ, ಎಲ್ಲ ಮಠಾಧೀಶರೊಂದಿಗೆ, ಸಾಹಿತಿಗಳೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಿದ ಕುಂಟೋಜಿ ಶ್ರೀಗಳಿಗೆ ಇಡೀ ರಾಜ್ಯವನ್ನೇ ತಂದು ಕುಂಟೋಜಿಯಲ್ಲಿ ಕೂರಿಸುವಷ್ಟು ಶಕ್ತಿ ಇದೆ ಎಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಮೊದಲನೇ ದಿನದ ಕಾರ್ಯಕ್ರಮವಾದ ಧರ್ಮ ಸಮನ್ವಯ ಸಮಾರಂಭ ಹಾಗೂ ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸ್ವಾಮಿಗಳಿಗೆ ಸಹಕಾರ ನೀಡುವುದರಿಂದ ಸ್ವಾಮಿಗಳು ಬೆಳೆಯುವದಿಲ್ಲ ಬದಲಾಗಿ ಸಮಾಜ, ಮಠಗಳು ಬೆಳೆಯುತ್ತವೆ. ಚನ್ನವೀರ ದೇವರು ತಮ್ಮ ಜೀವನದಲ್ಲಿ ಸುಖದ ಬದಲು ದುಃಖವನ್ನೇ ಹೆಚ್ಚು ಕಂಡವರು. ಸಾಕಷ್ಟು ಕ್ರಿಯಾಶೀಲರಾಗಿರುವ ಅವರಿಗೆ ಗ್ರಾಮಸ್ಥರು ಎಷ್ಟು ಸಹಕಾರ ನೀಡುತ್ತೀರೋ ಅಷ್ಟು ದೊಡ್ಡ ಕೀರ್ತಿಗೆ ನಿಮ್ಮೂರು ಪಾತ್ರವಾಗುತ್ತದೆ ಎಂದರು.ಕಪ್ಪತಗುಡ್ಡದ ನಂದಿವೇರಿಮಠದ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಗುರು…
ಸಿಂದಗಿ: ಇತ್ತೀಚೆಗೆ ಮರಗೂರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಸಿಂದಗಿ ತಾಲೂಕಿನ ಹೂವಿನಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಸಿದ್ದರಾಮ ಪಾಟೀಲ ಅವರ ಧರ್ಮಪತ್ನಿ ಸರೋಜನಿ ಪಾಟೀಲರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾದ ಪ್ರಯುಕ್ತ ಅವರಿಗೆ ತಾಲೂಕಿನ ಪಂಚಮಸಾಲಿ ಸಮಾಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮೀಸಲಾತಿ ಹೋರಾಟ ಸಮಿತಿ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಯುವ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ, ಕಸಾಪ ಅಧ್ಯಕ್ಷ ಶಿವು ಬಡಾನೂರ, ಎಂ.ಬಿ.ಯಡ್ರಾಮಿ, ರಮೇಶ ಯಾಳಗಿ, ಸಂಗನಗೌಡ ಪಾಟೀಲ ಅಗಸಬಾಳ, ದಾನಪ್ಪಗೌಡ ಚೆನಗೊಂಡ, ಶೇಖರಗೌಡ ಬಿರಾದಾರ ಬ್ಯಾಕೋಡ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ ಸೇರಿದಂತೆ ಅನೇಕರಿದ್ದರು.
ದೇವರಹಿಪ್ಪರಗಿ: ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕ ಹಾಗೂ ಪಾಲಕ ಈರ್ವರ ಪಾತ್ರ ಗಮನಾರ್ಹ ಹಾಗೂ ಜವಾಬ್ದಾರಿಯುತವಾಗಿದೆ ಎಂದು ಖ್ಯಾತವೈದ್ಯ ಆರ್.ಆರ್.ನಾಯಿಕ್ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.ಇಂದಿನ ಮಕ್ಕಳೇ ನಾಳಿನ ನಾಗರೀಕರು. ಇವರ ಸರ್ವತೋಮುಖ ಬೆಳವಣಿಗೆಯಲ್ಲಿ ಮನೆ, ಶಾಲಾ ಪರಿಸರ, ಶಿಕ್ಷಕ, ತಾಯಿ, ತಂದೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ನಮ್ಮ ಸಂಸ್ಕಾರಗಳು ಬೆಳೆಯುವ ಮಗುವಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಆದ್ದರಿಂದ ಮಗುವಿಗೆ ಮಾದರಿಯಾಗಿ ನಾವುಗಳು ವರ್ತಿಸಬೇಕು ಎಂದರು.ಸಿಂದಗಿ ಪದ್ಮರಾಜ ಮಹಿಳಾ ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಹಾಸ್ಯಕಲಾವಿದ ಗಿರೀಶ ಕುಲಕರ್ಣಿ ತಮ್ಮ ಗಾಯನದ ಮೂಲಕ ಮಕ್ಕಳ ಗಮನ ಸೆಳೆದರು.ಎ.ಬಿ. ಸಾಲಕ್ಕಿ ಪ.ಪೂ ಕಾಲೇಜಿನ ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಹಾಗೂ ವಿಶೇಷವಾಗಿ ಪಾಲಕರಿಗೂ ಸಹ ಬಹುಮಾನ ವಿತರಿಸಲಾಯಿತು.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಮುಖ್ಯಗುರು…
ಬಸವಶರಣ ಸಂಗಮ ಸೇವಾ ಸಮೀತಿ & ವಿವಿಧ ಸಂಘ-ಸಂಸ್ಥೆಗಳಿಂದ ಪಪಂ ಮುಖ್ಯಾಧಿಕಾರಿಗೆ ಮನವಿ ದೇವರಹಿಪ್ಪರಗಿ: ವಿಶ್ವಗುರು ಬಸವಣ್ಣನವರ ಸಾಂಸ್ಕೃತಿಕ ಭವನಕ್ಕೆ ನಿವೇಶನ ಪೂರೈಸುವಂತೆ ಆಗ್ರಹಿಸಿ ಬಸವಶರಣ ಸಂಗಮ ಸೇವಾ ಸಮೀತಿ ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪಂಚಾಯಿತಿ ಕಾರ್ಯಲಯಕ್ಕೆ ಬುಧವಾರ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ನಿವೇಶನಕ್ಕಾಗಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ಬಸವಶರಣ ಸಂಗಮ ಸೇವಾ ಸಮೀತಿ ಅಧ್ಯಕ್ಷ ಸಂಗಪ್ಪಣ್ಣ ತಡವಲ ಮಾತನಾಡಿ, ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಇದು ಸಂತೋಷದ ವಿಷಯ. ಈಗ ಪ್ರತಿ ಭಾನುವಾರ ಬಸವಣ್ಣ ಸಹಿತ ಶರಣರ ಕುರಿತಾದ ಕಾರ್ಯಕ್ರಮಗಳನ್ನು ಪಟ್ಟಣದ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದು ಕಾರ್ಯಕ್ರಮಗಳಿಗೆ ಚಿಕ್ಕದಾಗುತ್ತಿದೆ.ಪಟ್ಟಣ ಈಗ ತಾಲ್ಲೂಕು ಕೇಂದ್ರವು ಆಗಿರುವುದರಿಂದ ಸರ್ಕಾರದ ಮೂಲಕ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಬಸವಣ್ಣನವರ ಸಾಂಸ್ಕೃತಿಕ ಭವನ ನಿರ್ಮಿಸಿ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿದರೆ ಒಳ್ಳೆಯದಾಗುತ್ತದೆ. ಅದಕ್ಕಾಗಿ…
ಸಿಂದಗಿ: ಅಪ್ಪ ಅಮ್ಮ ಪ್ರತಿಷ್ಠಾನ, ಬೆನಕನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಇವರ ಸಹಯೋಗದಲ್ಲಿ ದಿ.ಚಂದ್ರಾಮ ಹೊನ್ನಕಟ್ಟಿ ಇವರ ೨೨ ನೇ ವರ್ಷದ ಪುಣ್ಯಾರಾಧನೆ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಹಾಗೂ ಆಸಂಗಿಹಾಳ ಗ್ರಾಮದ ಪ್ರಾಧ್ಯಾಪಕರು (ದಾವಣಗೆರೆ ವಿ.ವಿ) ಡಾ.ಸಿದ್ಧಪ್ಪ ಭೀ.ಕಕ್ಕಳಮೇಲಿ ಇವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇದೇ ವೇಳೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಜಂಬಗಿ ಪ್ರಭುದೇವರಬೆಟ್ಟ ಮಠದ ಅಡವಿಲಿಂಗ ಮಹಾರಾಜರು, ಹಳೇ ಹುಟ್ದಬ್ಬಯ ವೀರ ಭೀಕ್ಷಾವರ್ತಿ ನೀಲಕಂಠ ಮಠದ ಶಿವಕುಮಾರ ಶಿವಾಚಾರ್ಯರು, ಅಥರ್ಗಾದ ಗುರುದೇವ ಆಶ್ರಯದ ಈಶಪ್ರಸಾದ್ ಷಣ್ಮುಖ ಶಿವಯೋಗಿಗಳು, ವಿಜಯಪುರ ಜ್ಞಾನಯೋಗಿ ಆಶ್ರಮದ ಚನ್ನಬಸವ ಸ್ವಾಮಿಗಳು ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಿಂದಗಿ: ಬಸವಣ್ಣನವರ ವಿಚಾರ ಧಾರೆಗಳು ಭಾರತ ಅಲ್ಲದೆ ಹೊರ ರಾಷ್ಟ್ರದಲ್ಲಿ ಪಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಅಭಿವ್ಯಕ್ತ ಪಡಿಸಿದರು.ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧುವಾರ ಹಮ್ಮಿಕೊಂಡಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖೇನ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರ ವಚನಗಳಲ್ಲಿ ವೈಜ್ಞಾನಿಕ ಜ್ಞಾನವಿದೆ. ಶರಣರ ಸಂದೇಶಗಳನ್ನು ಅರ್ಥೈಸಿಕೊಳ್ಳುವದರಿಂದ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು. ನ್ಯೂಜಿಲೆಂಡನಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿ ಬಸವಣ್ಣನವರ ಮತ್ತು ಶರಣರ ವಿಚಾರಗಳನ್ನು ಅಲ್ಲಿಯ ಜನತೆಗೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.ಈ ವೇಳೆ ಸಿಂದಗಿಯ ಎಚ್.ಜಿ. ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಅವರು ಗೋಲಗೇರಿಯ ಶ್ರೀ ಗೋಲ್ಲಾಳೇಶ್ವರ ಕುರಿತಾಗಿ ಮಾತನಾಡಿದರು.ಈ ವೇಳೆ ಜಾನಪದ ಸಾಹಿತಿ ಡಾ.ಎಂ.ಎಂ ಪಡಶೆಟ್ಟಿ ಅವರು ತಿಂಥಣಿ ಮೌನೇಶ್ವರ ವಚನಗಳ ಕುರಿತಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ಶರಣ…
ವಿಜಯಪುರ: ಮಾರ್ಚ್ ೯ ರಂದು ನಡೆಯಬೇಕಿದ್ದ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಮಾರ್ಚ್ ೧೬ರಂದು ಮುಂದೂಡಲಾಗಿದೆ ಎಂದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಸಂತೋಷ ಕುಂದರ್ ಅವರು ತಿಳಿಸಿದ್ದಾರೆ.ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಛಿಸಿದಲ್ಲಿ ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ತಾಲೂಕಾ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ www.kslsa.kar.nic.in ಅಥವಾ ಸಹಾಯವಾಣಿ ಸಂಖ್ಯೆ ೧೫೧೦ ಹಾಗೂ ೧೮೦೦-೪೨೫-೯೯೦೦ ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
