ಸಿಂದಗಿ: ಇತ್ತೀಚೆಗೆ ಮರಗೂರ ಸಕ್ಕರೆ ಕಾರ್ಖಾನೆಯ ನಿರ್ದೇಶಕರ ಚುನಾವಣೆಯಲ್ಲಿ ಸಿಂದಗಿ ತಾಲೂಕಿನ ಹೂವಿನಳ್ಳಿ ಗ್ರಾಮದ ಮಾಜಿ ಜಿಪಂ ಸದಸ್ಯ ಸಿದ್ದರಾಮ ಪಾಟೀಲ ಅವರ ಧರ್ಮಪತ್ನಿ ಸರೋಜನಿ ಪಾಟೀಲರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾದ ಪ್ರಯುಕ್ತ ಅವರಿಗೆ ತಾಲೂಕಿನ ಪಂಚಮಸಾಲಿ ಸಮಾಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮೀಸಲಾತಿ ಹೋರಾಟ ಸಮಿತಿ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಯುವ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ, ಕಸಾಪ ಅಧ್ಯಕ್ಷ ಶಿವು ಬಡಾನೂರ, ಎಂ.ಬಿ.ಯಡ್ರಾಮಿ, ರಮೇಶ ಯಾಳಗಿ, ಸಂಗನಗೌಡ ಪಾಟೀಲ ಅಗಸಬಾಳ, ದಾನಪ್ಪಗೌಡ ಚೆನಗೊಂಡ, ಶೇಖರಗೌಡ ಬಿರಾದಾರ ಬ್ಯಾಕೋಡ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

