ದೇವರಹಿಪ್ಪರಗಿ: ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕ ಹಾಗೂ ಪಾಲಕ ಈರ್ವರ ಪಾತ್ರ ಗಮನಾರ್ಹ ಹಾಗೂ ಜವಾಬ್ದಾರಿಯುತವಾಗಿದೆ ಎಂದು ಖ್ಯಾತವೈದ್ಯ ಆರ್.ಆರ್.ನಾಯಿಕ್ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಮಕ್ಕಳೇ ನಾಳಿನ ನಾಗರೀಕರು. ಇವರ ಸರ್ವತೋಮುಖ ಬೆಳವಣಿಗೆಯಲ್ಲಿ ಮನೆ, ಶಾಲಾ ಪರಿಸರ, ಶಿಕ್ಷಕ, ತಾಯಿ, ತಂದೆ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ನಮ್ಮ ಸಂಸ್ಕಾರಗಳು ಬೆಳೆಯುವ ಮಗುವಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಆದ್ದರಿಂದ ಮಗುವಿಗೆ ಮಾದರಿಯಾಗಿ ನಾವುಗಳು ವರ್ತಿಸಬೇಕು ಎಂದರು.
ಸಿಂದಗಿ ಪದ್ಮರಾಜ ಮಹಿಳಾ ಪ.ಪೂ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ಹಾಸ್ಯಕಲಾವಿದ ಗಿರೀಶ ಕುಲಕರ್ಣಿ ತಮ್ಮ ಗಾಯನದ ಮೂಲಕ ಮಕ್ಕಳ ಗಮನ ಸೆಳೆದರು.
ಎ.ಬಿ. ಸಾಲಕ್ಕಿ ಪ.ಪೂ ಕಾಲೇಜಿನ ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳು ಹಾಗೂ ವಿಶೇಷವಾಗಿ ಪಾಲಕರಿಗೂ ಸಹ ಬಹುಮಾನ ವಿತರಿಸಲಾಯಿತು.
ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಮುಖ್ಯಗುರು ವ್ಹಿ.ಎಂ.ಪಾಟೀಲ, ರಮೇಶ ಕೋರಿ, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಕಾಳಮ್ಮ ಬಡಿಗೇರ, ಪ್ರೇಮಾ ಕರಿಕಲ್ಲಮನಿ, ವಿಜಯಲಕ್ಷ್ಮಿ ಕೋಟಿನ್, ಕಾವ್ಯಾ ಬಡಿಗೇರ, ಲಕ್ಷ್ಮಿ ದೊಡಮನಿ, ಪ್ರತಿಭಾ ಸದಾ, ಸಂತೋಷ ಬಡಿಗೇರ, ವರ್ಗಪ್ರತಿನಿಧಿಗಳಾದ ಸುಶ್ಮಿತಾ ಹಡಪದ, ಮಹಮ್ಮದ್ ಅಯಾಜ ಮುಲ್ಲಾ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

