ಸಿಂದಗಿ: ಅಪ್ಪ ಅಮ್ಮ ಪ್ರತಿಷ್ಠಾನ, ಬೆನಕನಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಇವರ ಸಹಯೋಗದಲ್ಲಿ ದಿ.ಚಂದ್ರಾಮ ಹೊನ್ನಕಟ್ಟಿ ಇವರ ೨೨ ನೇ ವರ್ಷದ ಪುಣ್ಯಾರಾಧನೆ ಹಾಗೂ ಕಾಯಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಹಾಗೂ ಆಸಂಗಿಹಾಳ ಗ್ರಾಮದ ಪ್ರಾಧ್ಯಾಪಕರು (ದಾವಣಗೆರೆ ವಿ.ವಿ) ಡಾ.ಸಿದ್ಧಪ್ಪ ಭೀ.ಕಕ್ಕಳಮೇಲಿ ಇವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟಿ, ಜಂಬಗಿ ಪ್ರಭುದೇವರಬೆಟ್ಟ ಮಠದ ಅಡವಿಲಿಂಗ ಮಹಾರಾಜರು, ಹಳೇ ಹುಟ್ದಬ್ಬಯ ವೀರ ಭೀಕ್ಷಾವರ್ತಿ ನೀಲಕಂಠ ಮಠದ ಶಿವಕುಮಾರ ಶಿವಾಚಾರ್ಯರು, ಅಥರ್ಗಾದ ಗುರುದೇವ ಆಶ್ರಯದ ಈಶಪ್ರಸಾದ್ ಷಣ್ಮುಖ ಶಿವಯೋಗಿಗಳು, ವಿಜಯಪುರ ಜ್ಞಾನಯೋಗಿ ಆಶ್ರಮದ ಚನ್ನಬಸವ ಸ್ವಾಮಿಗಳು ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

