Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶ್ರೇಷ್ಠ ಯೋಗಿ ಹಜರತ್ ಅಬ್ದುಲ್ ಗಫಾರ್ ಖಾದ್ರಿ
(ರಾಜ್ಯ ) ಜಿಲ್ಲೆ

ಶ್ರೇಷ್ಠ ಯೋಗಿ ಹಜರತ್ ಅಬ್ದುಲ್ ಗಫಾರ್ ಖಾದ್ರಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೊಲ್ಹಾರ: “ಏಕ ಸಾಅತ್ ಸ್ವಹಬತೇ ಬಾ ಅವಲಿಯಾ ಬಹತರ ಅಜ್ ಸದ್ ಸಾಲಾ ತಾಅತೆ ಬೇರಿಯಾ” ಸಂದೇಶದಂತೆ ಭೂತ ಮತ್ತು ಭವಿಷ್ಯತ್ ಕಾಲದ ಬಗ್ಗೆ ಒಂದಿಷ್ಟು ಚಿಂತನೆ ಮಾಡದೆ ಮೂಡನಂಬಿಕೆಯನ್ನು ಮನದಲ್ಲಿ ಮೂಡಿಸಿಕೊಳ್ಳದೆ ವರ್ತಮಾನ ಕಾಲದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಅಳಿಸಿ ಹಾಕಿ ಸಾಧ್ಯವಾಗಿಸುವ ಶಕ್ತಿ ಹೊಂದಿರುವ ವ್ಯಕ್ತಿಗಳು ಅಂದರೆ ಶರಣರು ಸಂತರು ದಾರ್ಶನಿಕರು ಹಾಗೂ ಸೂಪಿತತ್ವವನ್ನು ನಂಬಿ ಜೀವನ ನಡೆಸುವವರು ಮನುಜಮತ ವಿಶ್ವಪಥ ಎಂದು ತಿಳಿಸಲು ಸದಾಕಾಲ ಚಿಂತನೆ ಮಾಡುತ್ತಿರುತ್ತಾರೆ.
ಅಂತಹ ಸೂಫಿಗಳಲ್ಲಿ ಒಬ್ಬರು ಅಲಹಾಬಾದ್ ಮೌಲಾನ ಎಂದು ಕಲಿಯುಗದಲ್ಲಿ ಪ್ರಖ್ಯಾತರಾದ ಹಜರತ್ ಅಬ್ದುಲ್ ಗಫಾರ್ ಖಾದ್ರಿ ಶ್ರೇಷ್ಠ ಪವಾಡ ಪುರುಷ ಯೋಗಿಗಳಾಗಿದ್ದರು ಇವರು ಉತ್ತರ ಪ್ರದೇಶದ ಅಲಹಾಬಾದನಲ್ಲಿ ಕ್ರಿ.ಶ ೧೮೫೫ ರಲ್ಲಿ ಜನ್ಮತಾಳಿದರು. ಮಾನವೀಯತೆ ಉದ್ದಾರಕ್ಕಾಗಿ ಸೂಫಿ ಧರ್ಮ ಅದರ ತತ್ವಗಳ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಹಲವಾರು ರಾಜ್ಯಗಳಲ್ಲಿ ಸುತ್ತಾಡಿ ತಮ್ಮ ಸಾವಿರಾರು ಶಿಷ್ಯ ಬಳಗವನ್ನು ಹುಟ್ಟುಹಾಕಿದರು. ನಿರಂತರವಾಗಿ ಮನುಜ ಕುಲದ ಉದ್ದಾರಕ್ಕಾಗಿ ಆಸೆ ಆಮಿಷಗಳಿಗೆ ಒಳಗಾಗದೇ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶವನ್ನು ಸಾರುವ ಮೂಲಕ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಪಾರ್ಸಿ ಜನಾಂಗದ ಮಾನವರು ಸಮಾಜದಲ್ಲಿ ಬದುಕುವ ಪಾಠವನ್ನು ಸನ್ಮಾರ್ಗದ ಮೂಲಕ ಹೇಳಿ ಕೊಟ್ಟು ಮಾರ್ಗದರ್ಶನ ನೀಡುತ್ತಿದ್ದರು ಅಂತಹ ಸೂಫಿಯವರು ೧೪೦ನೇ ವಯಸ್ಸಿನಲ್ಲಿ ಮಹಾರಾಷ್ಟçದ ರಾಯಗಡ ಜಿಲ್ಲೆಯ ಕೋಲಮಂಡಲ ಎಂಬ ಗ್ರಾಮದಲ್ಲಿ ದಿನಂಕ ೦೮-೦೩-೧೯೯೩ ರಲ್ಲಿ ಇಹಲೋಕವನ್ನು ತ್ಯಜಿಸಿದರು ಎಂದು ಅವರ ಆಪ್ತರಾಗಿದ್ದ ಮತ್ತು ಶಿಷ್ಯ ಬಳಗದವರು ಹೇಳುತ್ತಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದ ಊರುಗಳಲ್ಲಿ ಹೆಚ್ಚಿನ ಸಮಯ ಮಾನವತಾವಾದಿ ತತ್ವವನ್ನು ಭೋಧಿಸಿದ ಅಲಹಾಬಾದ ಮೌಲಾನಾ ೧೯೯೨ನೇ ಇಸ್ವಿಯಲ್ಲಿ ಮುಳಗಡೆಯಾದ ಕೊಲ್ಹಾರದ ಹಳೇ ಊರಿಗೆ ಆಗಮಿಸಿದಾಗ ಅಲ್ಲಿನ ಭಕ್ತರು ಜಾತಿ ಮತ ಪಂತ ಭೇದ ಭಾವ ಎನ್ನದೇ ಬರಮಾಡಿಕೊಂಡರು. ಆದಯ್ಯ ಶರಣರು ಹೇಳಿದಂತೆ ಸೂಫಿಗಳು ತನುವಿನಲ್ಲಿ ನಿರ್ಮೂಹಿಗಳಾಗಿ ಮನದಲ್ಲಿ ನಿರಂಹಕಾರಿಗಳಾಗಿ ಪ್ರಾಣದಲ್ಲಿ ನಿರ್ಭಯರಾಗಿ ಚಿತ್ತದಲ್ಲಿ ನಿರಪೇಕ್ಷೀಗಳಾಗಿ ವಿಷಯಗಳಲ್ಲಿ ಉದಾಸೀನ ರಾಗಿ ಭಾವದಲ್ಲಿ ದಿಗಂಬರ ರಾಗಿ ಜ್ಞಾನದಲ್ಲಿ ಪರಮಾನಂದ ಭರಿತರಾಗಿ ಮನದ ವಿಕಾರಗಳನ್ನೆಲ್ಲ ಜಯಿಸಿ ಫಕೀರರಾಗಿ ದೇಶ ಸಂಚಾರ ಕೈಗೊಳ್ಳುವ ಮಹಾನ್ ಸಂತರು ಅಂತಹ ಸೂಫಿ ಪರಂಪರೆಯಲ್ಲಿ ಇಪ್ಪತ್ತನೇ ಶತಮಾನದ ಸೂಪಿಸಂತರಾದ ಹಜರತ್ ಶಾಹ್ ಮೊಹಮ್ಮದ್ ಅಬ್ದುಲ್ ಗಫಾರ್ ಖಾದ್ರಿಯವರ ಕೊಡುಗೆ ಅಪಾರ.
ಅಂತಹ ಶ್ರೇಷ್ಠ ಪವಾಡ ಪುರುಷನ ಶಿಷ್ಯ ಬಳಗದಲ್ಲಿ ಒಬ್ಬರಾದ ಕೊಲ್ಹಾರ ಪಟ್ಟಣದ ಡಾಕ್ಟರ್ ಅಲಹಾಜ್ ಶಾಹ್ ಬಕ್ತೀಯಾರಖಾನ ಖಾದ್ರಿ ಸಾಹೇಬರು ಅವರ ಉತ್ತರಾಧಿಕಾರಿಯಾಗಿ ಕಳೆದ ಮೂವತ್ತು ವರ್ಷಗಳಿಂದ ಅಖಂಡ ವಿಜಯಪೂರ ಜಿಲ್ಲೆಯ ಭಾಗದಲ್ಲಿ ಸಂಚರಿಸುವ ಮೂಲಕ ಶಿಷ್ಯರಿಗೆ ಹಾಗೂ ಭಕ್ತರಿಗೆ ಅವರ ಸಂದೇಶವನ್ನು ಸಾರುವ ಸಲುವಾಗಿ ತಮ್ಮ ಗುರುಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸರ್ವಧರ್ಮದ ಸಮ್ಮೇಳನ ರೂಪದಲ್ಲಿ ನಾಡಿನಲ್ಲಿರುವ ಎಲ್ಲ ಧರ್ಮದ ಮಠಾಧೀಶರನ್ನು ಕರೆಯಿಸಿ ಬಹಳ ಅರ್ಥಪೂರ್ಣವಾಗಿ ಭಾವ್ಯೆಕ್ಯದ ಸಂದೇಶವನ್ನು ಸಾರುವ ಕಾಯಕದಲ್ಲಿ ತೊಡಗಿಕೊಂಡು ವಿವಿಧತೆಯಲ್ಲಿ ಏಕತೆಯ ಸಂಕೇತ ಅಡಗಿರುತ್ತದೆ ಎಂದು ತಿಳಿಸಲು ಶ್ರಮಿಸುತ್ತಿದ್ದಾರೆ. ಅಲ್ಲದೇ ಪ್ರತಿವರ್ಷ ತಮ್ಮ ಗುರುಗಳ ಹೆಸರಿನಲ್ಲಿ ಅಲಹಾಬಾದ ಮೌಲಾನಾ ಪ್ರತಿಷ್ಟಿತ ಸದ್ಭಾವಣಾ ಪ್ರಶಸ್ತಿಯನ್ನು ಸಮಾಜದ ಮಾನವತಾವಾದಿ ಆದ್ಯಾತ್ಮಿಕ ಜೀವಿ ಡಾಕ್ಟರ್ ಅಲಹಾಜ್ ಶಾಹ್ ಬಕ್ತೀಯಾರಖಾನ ಖಾದ್ರಿಯವರು ಕವಿ ಸಾಹಿತಿಗಳಿಗೆ ಸಮಾಜಮುಖಿ ಕಾರ್ಯ ಮಾಡಿದವರಿಗೆ ನೀಡಿ ಗೌರವಿಸಿ ನಿಜವಾದ ಅರ್ಥದಲ್ಲಿ ತಮ್ಮ ಗುರುಗಳ ಪಾದಕ್ಕೆ ಭಾವಪೂರ್ಣ ಶೃದ್ದಾಂಜಲಿಯ ಪುಷ್ಪಗಳನ್ನು ಅರ್ಪಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ
    In (ರಾಜ್ಯ ) ಜಿಲ್ಲೆ
  • ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ
    In (ರಾಜ್ಯ ) ಜಿಲ್ಲೆ
  • ಶಾಸಕ ಮನಗೂಳಿ ಯಿಂದಅಹವಾಲು ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಇಂದು ವ್ಯಸನಮುಕ್ತ ಶಿಬಿರದ ಸಮಾರೋಪ :ಅಲ್ಲಾಪೂರ
    In (ರಾಜ್ಯ ) ಜಿಲ್ಲೆ
  • ಸಿಂದಗಿ: ಇಂದು ವಿದ್ಯುತ್ ವ್ಯತ್ಯೆಯ
    In (ರಾಜ್ಯ ) ಜಿಲ್ಲೆ
  • ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ..
    In ವಿಶೇಷ ಲೇಖನ
  • ಕುಡಿವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಶರಣ ಭೋಗಣ್ಣನವರ ಕುರಿತು ಸಂಶೋಧನೆ ಅಗತ್ಯ :ಗೋಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.