ಸಿಂದಗಿ: ಬಸವಣ್ಣನವರ ವಿಚಾರ ಧಾರೆಗಳು ಭಾರತ ಅಲ್ಲದೆ ಹೊರ ರಾಷ್ಟ್ರದಲ್ಲಿ ಪಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಅಭಿವ್ಯಕ್ತ ಪಡಿಸಿದರು.
ಅವರು ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧುವಾರ ಹಮ್ಮಿಕೊಂಡಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿರುವ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖೇನ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ವಚನಗಳಲ್ಲಿ ವೈಜ್ಞಾನಿಕ ಜ್ಞಾನವಿದೆ. ಶರಣರ ಸಂದೇಶಗಳನ್ನು ಅರ್ಥೈಸಿಕೊಳ್ಳುವದರಿಂದ ನಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬಹುದು. ನ್ಯೂಜಿಲೆಂಡನಲ್ಲಿ ಬಸವ ಸಮಿತಿಯನ್ನು ಸ್ಥಾಪಿಸಿ ಬಸವಣ್ಣನವರ ಮತ್ತು ಶರಣರ ವಿಚಾರಗಳನ್ನು ಅಲ್ಲಿಯ ಜನತೆಗೆ ನೀಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಈ ವೇಳೆ ಸಿಂದಗಿಯ ಎಚ್.ಜಿ. ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಅವರು ಗೋಲಗೇರಿಯ ಶ್ರೀ ಗೋಲ್ಲಾಳೇಶ್ವರ ಕುರಿತಾಗಿ ಮಾತನಾಡಿದರು.
ಈ ವೇಳೆ ಜಾನಪದ ಸಾಹಿತಿ ಡಾ.ಎಂ.ಎಂ ಪಡಶೆಟ್ಟಿ ಅವರು ತಿಂಥಣಿ ಮೌನೇಶ್ವರ ವಚನಗಳ ಕುರಿತಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಡಾ.ಶರಣಬಸವ ಜೋಗೂರ ಅವರು ಮಾತನಾಡಿದರು.
ಈ ವೇಳೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಪರವಾಗಿ ನ್ಯೂಜಿಲೆಂಡಿನ ಬಸವ ಸಮಿತಿ ಸಂಸ್ಥಾಪಕ ಲಿಂಗಣ್ಣ ಕಲಬುರ್ಗಿ ಅವರಿಗೆ ಗೌರವಿಸಲಾಯಿತು.
ವೇದಿಕೆ ಮೇಲೆ ದತ್ತಿದಾನಿಗಳಾದ ಶಿವಪ್ಪ ಗವಸಾನಿ, ಬಿ.ಎಸ್.ಹಣಮಶೆಟ್ಟಿ, ಪ್ರಾಚಾರ್ಯ ಜೆ.ಸಿ.ನಂದಿಕೋಲ ಅವರು ಇದ್ದರು.
ಕಾರ್ಯಕ್ರಮದಲ್ಲಿ ಡಾ.ಚನ್ನಪ್ಪ ಕಟ್ಟಿ, ಎಮ್.ಎಸ್.ಹೈಯಾಳಕರ, ಶಿವಾನಂದ ಕಲಬುರ್ಗಿ, ಸಂಗಪ್ಪ ಕತ್ತಿ, ಶರಣಗೌಡ ಪಾಟೀಲ, ಶಿವುಕುಮಾರ ಶಿವಶಿಂಪಿಗೇರ, ಮಹಾನಂದಾ ಬಮ್ಮಣ್ಣಿ, ಡಾ.ಸೀಮಾ ವಾರದ, ಸುಜಾತಾ ಕಿಣಗಿ, ದ್ರಾಕ್ಷಾಯಣಿ ಪಾಟೀಲ, ಜಗದೀಶ ಕಲಬುರ್ಗಿ, ಬಸಯ್ಯ ಮಠಪತಿ, ಭೀಮಾಶಂಕರ ಅರಳಗುಂಡಗಿ, ಎಸ್.ಎಮ್.ಪೂಜಾರಿ, ಪ್ರಸನ್ನ ಜೋಗೂರ, ವಿಶ್ವನಾಥ ನಂದಿಕೋಲ, ಕಲ್ಲಪ್ಪ ತಾರಾಪೂರ, ಸಿದ್ದಲಿಂಗ ಕಿಣಗಿ, ದಾನಯ್ಯ ಮಠಪತಿ, ಆರ್.ಎ.ಹಾಲಕೇರಿ, ಪ್ರಶಾಂತ ಕುಲಕರ್ಣಿ, ಸಿ.ಜಿ.ಕತ್ತಿ, ವಿದ್ಯಾ ಮೊಗಲಿ, ಶಿವಣ್ಣ ದಸ್ಮಾ, ಶ್ರೀಶೈಲ ಯಳಮೇಲಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

