Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: 2022-23 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಗರದ ವಾರ್ಡ್ ನಂ.21 ರಲ್ಲಿ ಬರುವ ಇಬ್ರಾಹಿಂಪುರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಬುಧವಾರ ಸಂಜೆ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸಮುದಾಯ ಭವನಕ್ಕೆ ಐದು ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದ್ದು, ನಿರ್ಮಿತಿ ಕೇಂದ್ರವು ಈ ಕಟ್ಟಡ ನಿರ್ಮಾಣ ಮಾಡಲಿದೆ. ಅಗತ್ಯಬಿದ್ದರೆ ತಾವು ಇದಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ಪರವಾಗಿ ಗ್ರಾಮದ ಹಿರಿಯ ಮುಖಂಡ ಗಿರಮಲ್ಲಪ್ಪ ನುಚ್ಚಿ ಅವರು ಶಾಸಕ ಯತ್ನಾಳ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.ಪ್ರಭು ಹಿರೇಮಠ ಸ್ವಾಮಿಗಳು ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ ಗಡಗಿ, ಪ್ರೇಮಾನಂದ ಬಿರಾದಾರ, ಗ್ರಾಮದ ಹಿರಿಯರಾದ ಮೇಲಪ್ಪ ಗಲಗಲಿ, ಸೂರ್ಯಕಾಂತ ಗಡಗಿ, ಶಿವಸಂಗಪ್ಹ ಹಳ್ಳಿ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಗುರುಪಾದಪ್ಪ(ಸುನೀಲ)…
ಆಲಮಟ್ಟಿ: ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಮೂರು ಬಾರಿ ನಡೆಸುವುದು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದಕ್ಕೆ ಪ್ರೌಡಶಾಲಾ ಶಿಕ್ಷಕರ ಯಾವೊಂದು ಸಂಘಟನೆಗಳು ಸ್ವಲ್ಪವೂ ವಿರೋಧ ವ್ಯಕ್ತವಾಗದಿರುವುದು ವಿಷಾದನೀಯ ಎಂದು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅಭಿಪ್ರಾಯಪಟ್ಟರು.ಬುಧವಾರ, ಆಲಮಟ್ಟಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಏಕಾಏಕಿ ಮೂರು ಬಾರಿ ಪರೀಕ್ಷೆ ಎಂದು ನಿರ್ಧರಿಸಬಾರದಿತ್ತು. ಅದನ್ನು ವಿವಿಧ ಶಿಕ್ಷಣ ತಜ್ಞರು, ಶಿಕ್ಷಕರು, ಸಂಘ, ಸಂಸ್ಥೆಗಳ, ಪೋಷಕರ ಹಂತದಲ್ಲಿ ಚರ್ಚೆಯಾಗಬೇಕಿತ್ತು. ನಂತರವಷ್ಟೇ ಈ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಳ್ಳಬೇಕಿತ್ತು ಎಂದರು.ಪರೀಕ್ಷೆ ನಡೆಸುವುದು ಅಷ್ಟು ಸುಲಭವಲ್ಲ. ಪ್ರತಿ ಬಾರಿಯೂ 144 ಕಲಂ ಜಾರಿಗೆ ಮಾಡಿ, ಇಡೀ ಜಿಲ್ಲಾಡಳಿತವೇ ಉಸ್ತುವಾರಿ ನಿರ್ವಹಿಸಿ ಪರೀಕ್ಷೆ ನಡೆಸುತ್ತದೆ. ನಂತರ ಮೌಲ್ಯಮಾಪನ, ಮರು ಮೌಲ್ಯಮಾಪನ ಹೀಗೆ ಸಾಕಷ್ಟು ಹಂತಗಳು ಇರುತ್ತವೆ. ಅದಕ್ಕಾಗಿ ಕೋಟ್ಯಂತರ ಹಣ ಖರ್ಚಾಗುತ್ತದೆ, ಜತೆಗೆ ಸಮಯವೂ ಸಾಲುವುದಿಲ್ಲ ಎಂದರು. ಪ್ರೌಡಶಾಲಾ ಶಿಕ್ಷಕರ ಮೇಲೆ ಅನಗತ್ಯ ಹೊರೆ ಬೀಳುತ್ತವೆ. ಇದನ್ನು ಪ್ರತಿರೋಧಿಸಬೇಕಿದ್ದ ಪ್ರೌಡಶಾಲಾ ಶಿಕ್ಷಕರ ಸಂಘಟನೆಗಳು ಮೌನವಾಗಿರುವುದು ವಿಷಾದ ಎಂದರು.144 ಕಲಂ ಜಾರಿಯಿದ್ದರೂ…
ಎಕ್ಸಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅಭಿಮತ ಆಲಮಟ್ಟಿ: ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆಯೂ ವಿಮಾನ ಸಾರಿಗೆಯಷ್ಟೇ ಸುಖಕರವಾಗಿರಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿತ್ವ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.ಆಲಮಟ್ಟಿ ರೈಲು ನಿಲ್ದಾಣದಲ್ಲಿ ಬುಧವಾರ, ಶಿರಡಿ-ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಆಲಮಟ್ಟಿಯಲ್ಲಿ ನಿಲುಗಡೆಗೆ ಅವಕಾಶ ದೊರೆತಿದ್ದು, ಅದರ ಪ್ರಯುಕ್ತ ರೈಲ್ವೆ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.ರೈಲ್ವೆ ಬೋಗಿಯ ವಿನ್ಯಾಸಗಳು ಬದಲಾವಣೆಯಾಗಿವೆ, ರೈಲ್ವೆಯ ವೇಗ ಹೆಚ್ಚಾಗಿದೆ, ನಿಗದಿತ ಸಮಯಕ್ಕೆ ನಿಗದಿತ ಸ್ಥಳ ತಲುಪುವ ವ್ಯವಸ್ಥೆ ಕಟ್ಟುನಿಟ್ಟಾಗಿದೆ. ರೈಲುಗಳ ಸಂಖ್ಯೆಗಳು ಹೆಚ್ಚಿವೆ. ಈಗ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ನಿರ್ಮಾಣಗೊಳ್ಳುತ್ತಿವೆ ಇದಕ್ಕೆ ಕಾರಣ ಪ್ರಧಾನಿ ಮೋದಿ ಎಂದರು.ಆಲಮಟ್ಟಿ ಮೂಲಕ ಹಾದು ಹೋಗುವ ಗದಗ-ಹೊಟಗಿ…
ತಾಳಿಕೋಟಿಯಲ್ಲಿ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ 8ನೇ ಶಾಖೆ ಉದ್ಘಾಟನೆ ತಾಳಿಕೋಟಿ: ಪಟ್ಟಣದಲ್ಲಿ ಸಹಕಾರಿ ಸಂಘಗಳು ಜನರ ವಿಶ್ವಾಸದ ಮೇಲೆ ಅವಲಂಬಿತವಾಗಿ ನಡೆಯುತ್ತವೆ. ಇಲ್ಲಿ ಠೇವಣಿಗಳ ಮೇಲೆ ಆಕರ್ಷಿತ ಬಡ್ಡಿಯನ್ನು ನೀಡಲಾಗುತ್ತದೆ. ಸಣ್ಣ ವ್ಯಾಪಾರಸ್ಥರಿಗೆ ಸುಲಭವಾಗಿ ಸಾಲ ಸಿಗುತ್ತದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಸೋಪು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಹತ್ತಿರ ಇರುವ ದೊಡಮನಿ ಕಾಂಪ್ಲೆಕ್ಸ್ ನಲ್ಲಿ ಬಿಎಲ್ ಡಿ ಸೌಹಾರ್ದ ಸಹಕಾರಿ ಸಂಘ ಇದರ ಎಂಟನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಿಎಲ್ಡಿ ಸಂಸ್ಥೆ ಈಗಾಗಲೇ ಶಿಕ್ಷಣ ರಂಗದಲ್ಲಿ ಸಾಕಷ್ಟು ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದೆ. ಅದಕ್ಕೆ ತನ್ನದೇ ಆದ ವರ್ಚಸ್ಸು ಇದೆ. ಈ ಕಾರಣಕ್ಕಾಗಿಯೇ ಕೇವಲ ನೂರು ದಿನಗಳಲ್ಲಿ ಈ ಬ್ಯಾಂಕು ಎರಡು ನೂರು ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿದೆ. ಸಚಿವ ಎಂ. ಬಿ. ಪಾಟೀಲರ ಸಹೋದರ ಸುನೀಲ ಗೌಡರು ಸಾಕಷ್ಟು ಕ್ರಿಯಾಶೀಲತೆಯೊಂದಿಗೆ ಈ…
ತಾಳಿಕೋಟಿ: ಪಟ್ಟಣದ ಸಮಾಜಸೇವಕ ಶಿವಶಂಕರ ಹಿರೇಮಠ ಇವರನ್ನು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ (ರಿ) ಇದರ ರಾಜ್ಯ ಗೌರವ ಅಧ್ಯಕ್ಷರಾಗಿ ನೇಮಕ ಮಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪೂರ ಆದೇಶ ಹೊರಡಿಸಿದ್ದಾರೆ.ತಮ್ಮ ಆದೇಶ ಪತ್ರದಲ್ಲಿ ಅವರು ಈ ಕೂಡಲೇ ತಮಗೆ ಕೊಟ್ಟ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜದ ಸಂಘಟನೆಯ ತತ್ವ ಸಿದ್ಧಾಂತ ಶಿಸ್ತು ಮತ್ತು ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸಲು ಹಾಗೂ ವೀರಶೈವ ಸಮಾಜವನ್ನು ಒಗ್ಗೂಡಿಸಿ ಸಮಾಜ ಬಾಂಧವರನ್ನು ಸಂಘಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿ ಅವರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ಅಭಿನಂದನೆ: ಪಟ್ಟಣದ ಕ್ರಿಯಾಶೀಲ ಸಮಾಜ ಸೇವಕರಾದ ಶಿವಶಂಕರ ಹಿರೇಮಠ ಅವರನ್ನು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಮೋ ರಾಘು ವಿಜಯಪುರ ಅವರು ಅಭಿನಂದಿಸಿ ಅವರ ಅವಧಿಯಲ್ಲಿ ಸಂಘಟನೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದ್ದಾರೆ.
ರಾಜ್ಯದ ರಾಷ್ಟ್ರೀಯ ಹೆದ್ದಾರಿ 748A ಉನ್ನತೀಕರಣಕ್ಕೆ ಬಿಡುಗಡೆ | ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಚತುಷ್ಪಥ ರಸ್ತೆ ಉನ್ನತೀಕರಣ ನವದೆಹಲಿ: ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಲು ಹೆದ್ದಾರಿ ಸಚಿವಾಲಯ 2,675.31 ಕೋಟಿ ರೂ. ಮಂಜೂರು ಮಾಡಿದೆ.ಈ ಉಪಕ್ರಮವು ಒಟ್ಟು 92.40 ಕಿಮೀ ಉದ್ದದ ಹೆದ್ದಾರಿಯನ್ನು ಒಳಗೊಂಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಯೋಜನೆಯು ಪಣಜಿ-ಹೈದರಾಬಾದ್ EC10 ಕಾರಿಡಾರ್‌ನ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದ್ದಾರೆ.*ಬೆಳಗಾವಿಯಲ್ಲಿ 6,975 ಕೋಟಿ ರೂ. ಮೌಲ್ಯದ ಹೆದ್ದಾರಿ ಕಾಮಗಾರಿಗೆ ನಿತಿನ್ ಗಡ್ಕರಿ ಚಾಲನೆ*6,975 ಕೋಟಿ ರೂ. ಮೌಲ್ಯದ 376 ಕಿ.ಮೀ. ಹೆದ್ದಾರಿ ಕಾಮಗಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ,…
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ, ಇಂಗ್ಲೀಷ ಉಪನ್ಯಾಸಕರು, ಬೆಳಗಾವಿ ಎಲ್ಲರಿಗೂ ತಿಳಿದಂತೆ ಒಬ್ಬೊಬ್ಬರಿಗೆ ಒಂದು ತೆರನಾದ ಭಯವಿರುತ್ತೆ. ಕೆಲವರಿಗೆ ಎತ್ತರದ ಭಯ ಕೆಲವರಿಗೆ ನೀರಿನ ಭಯ. ವಿದ್ಯಾರ್ಥಿಗಳಲ್ಲಿ ಕಂಡು ಬರುವ ಸಾಮಾನ್ಯ ಭಯವೇ ಪರೀಕ್ಷೆ ಭಯ. ಇದನ್ನೇ ಎಕ್ಷಾಮ್ ಫೋಬಿಯಾ ಅಂತಾರೆ ಮನಶಾಸ್ತçಜ್ಞರು. ಭಯ ಅನ್ನುವದು ಮಾನಸಿಕ ಕಾಯಿಲೆ. ಅದು ನಮ್ಮ ಭ್ರಮೆ ವಾಸ್ತವ ಅಲ್ಲ. ಮನಸ್ಸು ಏನು ದೃಢವಾಗಿ ನಂಬುತ್ತೋ ಅದೇ ನಡೆಯುತ್ತೆ ಎನ್ನುವದು ಈಗಾಗಲೇ ಸಾಬೀತಾಗಿದೆ. ಅದಕ್ಕೆ ನೀವು ಪರೀಕ್ಷೆಯ ಬಗ್ಗೆ ಭಯ ಬಿಟ್ಟು ಉತ್ತಮ ಭಾವ ಹೊಂದಿ ನಾನು ಪರೀಕ್ಷೆಯನ್ನು ಚೆನ್ನಾಗಿ ಎದುರಿಸಬಲ್ಲೆ. ಹೆದರಲು ಅದೇನು ದೆವ್ವ ಭೂತ ಅಲ್ಲ ಎಂದು ನೀವು ಗಟ್ಟಿಯಾಗಿ ಅಂದುಕೊಂಡು ನೋಡಿ ಫಲಿತಾಂಶ ಹೇಗಿರುತ್ತೆ ಅಂತ !ನನ್ನ ಮಗ/ಳು ಚೆನ್ನಾಗಿಯೆ ಓದುತ್ತಾಳೆ, ಮನೆಯಲ್ಲಿ ಯಾವ ಪ್ರಶ್ನೆ ಕೇಳಿದರೂ ಟಕ್ ಅಂತ ಉತ್ತರಿಸುತ್ತಾನೆ/ಳೆ, ಆದರೆ ಪರೀಕ್ಷೆಯಲ್ಲಿ ಅದೇ ಪ್ರಶ್ನೆಗಳಿಗೆ ಉತ್ತರಿಸಿರಲ್ಲ ಏಕೆ ಹೀಗೆ? ಎಂಬುದು ಹಲವು ಪಾಲಕರ ಪ್ರಶ್ನೆ.…
ವಿಜಯಪುರ: ಮಲ್ಲಿಕಾರ್ಜುನ ತಂ. ಗೋಲಪ್ಪ ನಾವಿ ಇವರು ೨೨ ವರ್ಷಗಳ ಸುದೀರ್ಘ ದೇಶಸೇವೆ ಮಾಡಿ ಸೇನೆಯಿಂದ ನಿವೃತ್ತಿಗೊಂಡ ಪ್ರಯುಕ್ತ ಇವರನ್ನು ತಿಕೋಟಾ ತಾಲೂಕಿನ ತೊರವಿ ಗ್ರಾಮದಲ್ಲಿ ಭಾರತ ಸೇನಾ ಅಭಿಮಾನಿ ಬಳಗ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಲ್ಲಿಕಾರ್ಜುನ ನಾವಿ ಮಾತನಾಡಿ, ನನಗೆ ದೇಶ ಸೇವೆ ಮಾಡುವ ಸುವರ್ಣ ಅವಕಾಶ ದೊರಕಿರುವದು ನನ್ನ ಸೌಭಾಗ್ಯ. ನಾವು ೨೨ ವರ್ಷಗಳ ಕಾಲ ದೇಶ ಸೇವೆ ಮಾಡಿದ್ದು, ಇನ್ನಷ್ಟು ದಿನಗಳ ಕಾಲ ನಾನು ಸೇವೆ ಮಾಡಬೇಕೆಂಬ ಅಭಿಲಾಷೆಯನ್ನು ಹೊಂದಿದೆ. ದೇಶಸೇವೆ ಎಷ್ಟು ವರ್ಷ ಮಾಡಿದರೂ ಕಡಿಮೆ ಹಾಗೂ ಭಾರತ ದೇಶವು ವಿವಿಧೆಡೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ದೇಶ. ಇಲ್ಲಿ ಎಲ್ಲ ಧರ್ಮದ ಜನರು ಇದ್ದು, ಸೌಹಾರ್ದತೆಯಿಂದ ಇರುವದರಿಂದ ನಾವು ನಿರ್ಭಯವಾಗಿ ದೇಶ ಸೇವೆ ಸಲ್ಲಿಸಿದ ಹೆಮ್ಮೆ ನನಗೆ ತೃಪ್ತಿಕರ ತಂದಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಪ್ರಜೆಯು ದೇಶ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.ಇದರೊಂದಿಗೆ ತಮ್ಮ…
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಭಾರತೀಯ ಕಿಸಾನ ಸಂಘ ಮನವಿ ವಿಜಯಪುರ : ಭಾರತೀಯ ಕಿಸಾನ ಸಂಘ ಕರ್ನಾಟಕ ಉತ್ತರ ಪ್ರಾಂತ್ಯದ ವತಿಯಿಂದ ಜಿಲ್ಲೆಯ ಎಲ್ಲಾ ಕೆರೆ ತುಂಬುವುದು. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ 2-3 ಹಂತದ ಕಾಮಗಾರಿ ಟೆಂಡರ್ ಕರೆಯುವುದು ಹಾಗೂ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಆಲಮಟ್ಟಿ 524.256 ಮಿಟ್ಟರಿಗೆ ಎತ್ತರಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಭಾರತೀಯ ಕಿಸಾನ್ ಸಂಘ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾಧ್ಯಕ್ಷ ಮಲ್ಲನಗೌಡ ಮಹಾದೇವಪ್ಪಗೌಡ ಪಾಟೀಲ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಮಳೆಯ ಅಭಾವದಿಂದ ಹಾಗೂ ಬರಗಾಲ ಭವಣೆಯಿಂದ ಜಿಲ್ಲೆಯ ರೈತರು ತತ್ತರಿಸಿದ್ದು ಜಾನುವಾರಗಳಿಗೆ ಮೇವಿನ ಕೊರತೆ ಜಿಲ್ಲೆಯ ಜನರು ಗುಳ್ಳೆ ಹೋಗುತ್ತಿದ್ದಾರೆ. ಹಾಗೂ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳು ನೀರಿನ ಅಭಾವದಿಂದ ನಶಿಸುತ್ತೇವೆ. ಇದರಿಂದಾಗಿ ರೈತರಿಗೆ ದಿಕ್ಕೆ ತೋಚದಂತಾಗಿದೆ ಜಿಲ್ಲೆಯಲ್ಲಿ ದೊಡ್ಡ ಅಣೆಕಟ್ಟುಗಳಿದ್ದರೂ ಸಮಯಕ್ಕೆ ಸರಿಯಾಗಿ ಕೆರೆಗಳಿಗೆ ನೀರು ತುಂಬದಿರುವುದರಿಂದ ನೀರಿನ ಅಭಾವ ಉಂಟಾಗುತ್ತಿದೆ ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ…
ವಿಜಯಪುರ: ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಎಲ್ಲ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಬುಧವಾರ ಜಿಲ್ಲಾಧಿಕಾರಿಗಳ ಕೇಸ್ವಾನ್ ಸಭಾಂಗಣದಲ್ಲಿ ಮುಂಬರುವ ಲೋಕಸಭಾ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದ ಪೂರ್ವಭಾವಿ ಸಿದ್ಧತೆಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಸೂಕ್ತ ಗಾಳಿ-ಬೆಳಕಿನ ವ್ಯವಸ್ಥೆ, ವಿಕಲಚೇತನ ಮತದಾರರಿಗೆ ರ‍್ಯಾಂಪ್ ವ್ಯವಸ್ಥೆ, ಬೇಸಿಗೆ ಇರುವುದರಿಂದ ಮತದಾರರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಮತಗಟ್ಟೆ ಕಟ್ಟಡ ಸ್ಥಿತಿಗತಿ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಇರುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ಚುನಾವಣೆಗೆ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡಿ ಕೂಲಂಕೂಷವಾಗಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಜಿಲ್ಲೆಯ ಮತಗಟ್ಟೆಗಳಿಗೆ ಭೇಟಿ ನೀಡಿ ಪೂರ್ವಭಾವಿಯಾಗಿ ಪರಿಶೀಲನೆ ನಡೆಸಬೇಕು. ಮತಗಟ್ಟೆಗಳಲ್ಲಿ ಯಾವುದಾದರೂ ಸಣ್ಣ…
