ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಭಾರತೀಯ ಕಿಸಾನ ಸಂಘ ಮನವಿ
ವಿಜಯಪುರ : ಭಾರತೀಯ ಕಿಸಾನ ಸಂಘ ಕರ್ನಾಟಕ ಉತ್ತರ ಪ್ರಾಂತ್ಯದ ವತಿಯಿಂದ ಜಿಲ್ಲೆಯ ಎಲ್ಲಾ ಕೆರೆ ತುಂಬುವುದು. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ 2-3 ಹಂತದ ಕಾಮಗಾರಿ ಟೆಂಡರ್ ಕರೆಯುವುದು ಹಾಗೂ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಆಲಮಟ್ಟಿ 524.256 ಮಿಟ್ಟರಿಗೆ ಎತ್ತರಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಭಾರತೀಯ ಕಿಸಾನ್ ಸಂಘ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾಧ್ಯಕ್ಷ ಮಲ್ಲನಗೌಡ ಮಹಾದೇವಪ್ಪಗೌಡ ಪಾಟೀಲ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಮಳೆಯ ಅಭಾವದಿಂದ ಹಾಗೂ ಬರಗಾಲ ಭವಣೆಯಿಂದ ಜಿಲ್ಲೆಯ ರೈತರು ತತ್ತರಿಸಿದ್ದು ಜಾನುವಾರಗಳಿಗೆ ಮೇವಿನ ಕೊರತೆ ಜಿಲ್ಲೆಯ ಜನರು ಗುಳ್ಳೆ ಹೋಗುತ್ತಿದ್ದಾರೆ. ಹಾಗೂ ಬಹು ವಾರ್ಷಿಕ ತೋಟಗಾರಿಕೆ ಬೆಳೆಗಳು ನೀರಿನ ಅಭಾವದಿಂದ ನಶಿಸುತ್ತೇವೆ. ಇದರಿಂದಾಗಿ ರೈತರಿಗೆ ದಿಕ್ಕೆ ತೋಚದಂತಾಗಿದೆ ಜಿಲ್ಲೆಯಲ್ಲಿ ದೊಡ್ಡ ಅಣೆಕಟ್ಟುಗಳಿದ್ದರೂ ಸಮಯಕ್ಕೆ ಸರಿಯಾಗಿ ಕೆರೆಗಳಿಗೆ ನೀರು ತುಂಬದಿರುವುದರಿಂದ ನೀರಿನ ಅಭಾವ ಉಂಟಾಗುತ್ತಿದೆ ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದರು.
ಉಪಾಧ್ಯಕ್ಷ ಗುರುನಾಥ ಬಗಲಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಮಗೌಂಡ ಚೌಹಾಣ್, ಈರಪ್ಪ ಗೂಡಿಹಾಳ, ಚೆನ್ನಪ್ಪ ಮಿರಗಿ, ಚಿದಾನಂದ ಮದ್ರಿ, ಶರಣಪ್ಪ ತಾರಾಪುರ, ಸಿದ್ದರಾಯ ತೆ ಲಿ, ಎಲ್ಲಪ್ಪ ಹೊಸಮನಿ, ಮರಳಸಿದ್ದು ಹೊಸಮನಿ, ಪಪ್ಪು, ಗುರುನಾಥ್, ಕಲ್ಲಪ್ಪ ಬುಕಣಿ, ಪ್ರಕಾಶ ಹರಿಜನ, ಸುಧಾಕರ್, ಸುಧೀರ್ ಪಾಟೇಲ್, ಶ್ರೀಮಂತ ಕಣವಿ, ಸುರೇಶ್ ಬುಕ್ಕಾಣಿ, ರಾಯಣ್ಣ ಮಿರಗಿ, ಮತ್ತಿತರರು ಪಾಲ್ಗೊಂಡಿದ್ದರು

