ವಿಜಯಪುರ: ಮಲ್ಲಿಕಾರ್ಜುನ ತಂ. ಗೋಲಪ್ಪ ನಾವಿ ಇವರು ೨೨ ವರ್ಷಗಳ ಸುದೀರ್ಘ ದೇಶಸೇವೆ ಮಾಡಿ ಸೇನೆಯಿಂದ ನಿವೃತ್ತಿಗೊಂಡ ಪ್ರಯುಕ್ತ ಇವರನ್ನು ತಿಕೋಟಾ ತಾಲೂಕಿನ ತೊರವಿ ಗ್ರಾಮದಲ್ಲಿ ಭಾರತ ಸೇನಾ ಅಭಿಮಾನಿ ಬಳಗ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಲ್ಲಿಕಾರ್ಜುನ ನಾವಿ ಮಾತನಾಡಿ, ನನಗೆ ದೇಶ ಸೇವೆ ಮಾಡುವ ಸುವರ್ಣ ಅವಕಾಶ ದೊರಕಿರುವದು ನನ್ನ ಸೌಭಾಗ್ಯ. ನಾವು ೨೨ ವರ್ಷಗಳ ಕಾಲ ದೇಶ ಸೇವೆ ಮಾಡಿದ್ದು, ಇನ್ನಷ್ಟು ದಿನಗಳ ಕಾಲ ನಾನು ಸೇವೆ ಮಾಡಬೇಕೆಂಬ ಅಭಿಲಾಷೆಯನ್ನು ಹೊಂದಿದೆ. ದೇಶಸೇವೆ ಎಷ್ಟು ವರ್ಷ ಮಾಡಿದರೂ ಕಡಿಮೆ ಹಾಗೂ ಭಾರತ ದೇಶವು ವಿವಿಧೆಡೆಯಲ್ಲಿ ಏಕತೆಯನ್ನು ಕಂಡುಕೊಂಡಿರುವ ದೇಶ. ಇಲ್ಲಿ ಎಲ್ಲ ಧರ್ಮದ ಜನರು ಇದ್ದು, ಸೌಹಾರ್ದತೆಯಿಂದ ಇರುವದರಿಂದ ನಾವು ನಿರ್ಭಯವಾಗಿ ದೇಶ ಸೇವೆ ಸಲ್ಲಿಸಿದ ಹೆಮ್ಮೆ ನನಗೆ ತೃಪ್ತಿಕರ ತಂದಿದೆ. ಆದ್ದರಿಂದ ದೇಶದ ಪ್ರತಿಯೊಬ್ಬ ಪ್ರಜೆಯು ದೇಶ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಇದರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ತಮ್ಮ ಅಭಿಮಾನದ ನುಡಿಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಲಪ್ಪ ಬಿ. ನಾವಿ, ನಿರ್ದೇಶಕ ಹಡಪದ ಅಪ್ಪಣ್ಣ ವಿವಿದೋದ್ದೇಶಗಳ ಸಹಕಾರ ಸಂಘ, ನಿರ್ದೇಶಕರಾದ ಶಿವಾನಂದ ಆರ್. ನಾವಿ, ದುಂಡವ್ವ ಗೋ. ನಾವಿ, ಶೈಲಾ ಈರಪ್ಪ ಹಡಪದ, ಅಂಬಿಕಾ ಸಿ. ನಾವಿ, ಭುವನೇಶ್ವರಿ ಶ್ರೀ ಹಡಪದ, ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

