ತಾಳಿಕೋಟಿ: ಪಟ್ಟಣದ ಸಮಾಜಸೇವಕ ಶಿವಶಂಕರ ಹಿರೇಮಠ ಇವರನ್ನು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ (ರಿ) ಇದರ ರಾಜ್ಯ ಗೌರವ ಅಧ್ಯಕ್ಷರಾಗಿ ನೇಮಕ ಮಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪೂರ ಆದೇಶ ಹೊರಡಿಸಿದ್ದಾರೆ.
ತಮ್ಮ ಆದೇಶ ಪತ್ರದಲ್ಲಿ ಅವರು ಈ ಕೂಡಲೇ ತಮಗೆ ಕೊಟ್ಟ ಜವಾಬ್ದಾರಿಯನ್ನು ವಹಿಸಿಕೊಂಡು ಸಮಾಜದ ಸಂಘಟನೆಯ ತತ್ವ ಸಿದ್ಧಾಂತ ಶಿಸ್ತು ಮತ್ತು ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸಲು ಹಾಗೂ ವೀರಶೈವ ಸಮಾಜವನ್ನು ಒಗ್ಗೂಡಿಸಿ ಸಮಾಜ ಬಾಂಧವರನ್ನು ಸಂಘಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿ ಅವರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ಅಭಿನಂದನೆ: ಪಟ್ಟಣದ ಕ್ರಿಯಾಶೀಲ ಸಮಾಜ ಸೇವಕರಾದ ಶಿವಶಂಕರ ಹಿರೇಮಠ ಅವರನ್ನು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಮೋ ರಾಘು ವಿಜಯಪುರ ಅವರು ಅಭಿನಂದಿಸಿ ಅವರ ಅವಧಿಯಲ್ಲಿ ಸಂಘಟನೆಯು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

