Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕಾಯಕ ದಾಸೋಹದ ಮೂಲಕ ವಿಶ್ವಕ್ಕೆ ಬಸವ ತತ್ವ ಸಾರಿದ ಮಹಾನ್ ಶಕ್ತಿ ಶಿವಕುಮಾರ ಸ್ವಾಮೀಜಿ ಅವರು ಅನ್ನ, ಅಕ್ಷರ, ಆಶ್ರಯ ನೀಡಿ ಎಲ್ಲರ ಮನಗೆದ್ದು,ಅಸಂಖ್ಯಾತ ಮಕ್ಕಳ ಭವಿಷ್ಯ ಕಲ್ಪಿಸಿದ ನಡೆದಾಡುವ ದೇವರಾಗಿದ್ದಾರೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದಲ್ಲಿ ಡಾ. ಶಿವಕುಮಾರ ಸ್ವಾಮಿಜಿಯವರ 117 ನೇ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ಅಕ್ಷರ ಜ್ಞಾನದ ಜೊತೆಗೆ ಬದುಕಿಗೆ ಅಗತ್ಯವಾದ ಶಿಕ್ಷಣವನ್ನೂ ಸ್ವಾಮೀಜಿ ಅವರು ಮಕ್ಕಳಿಗೆ ಕಲಿಸಿದ್ದಾರೆ. ಮಠದ ಹೊಲ-ತೋಟಗಳಲ್ಲಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವ ಮೂಲಕ ಅವರಿಗೆ ಕಾಯಕ ಮತ್ತು ಶ್ರಮ ಸಂಸ್ಕೃತಿಯ ಪಾಠಗಳನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.ಪಿಕೆಪಿಎಸ್ ನಿರ್ದೇಶಕ ಪ್ರಭಾಕರ ಅರಕೇರಿ ಮಾತನಾಡಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ಹಾಕಿಕೊಟ್ಟ ಮಾರ್ಗ, ತೋರಿದ ದಾರಿ ಅನುಪಮವಾದದ್ದು. ಅತ್ಯಂತ ಸರಳ ಹಾಗೂ ಸಾರ್ಥಕತೆಯ ಬದುಕು ನಡೆಸಿದ ಅವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಹೇಳಿದರು.ಚಂದ್ರಕಾಂತ ಬಿರಾದಾರ ಮಾತನಾಡಿ, ಜ್ಞಾನ ಎನ್ನುವುದು…
ಕಲಕೇರಿ: ತಾಳಿಕೋಟಿ ತಾಲೂಕಿನ ಕಲಕೇರಿ ಸಮೀಪದ ಬೆಕಿನಾಳ ಗ್ರಾಮದಲ್ಲಿ ಬೆಳಿಗ್ಗೆ ಸುರಪುರ ಸೋಲಾಪುರ ಬಸ್ಸು ಅಪಘಾತದಿಂದ ಪಾರಾದ ಘಟನೆ ಶನಿವಾರ ನಡೆದಿದೆ. ಸುಮಾರು ೪೦ ಪ್ರಯಾಣಿಕರು ಹಾಗೂ ಪರೀಕ್ಷೆಗೆ ಹೋಗುತ್ತೀರುವ ವಿದ್ಯಾರ್ಥಿಗಳನ್ನು ಕೊಂಡೊಯುತ್ತಿರುವ ಬಸ್ಸು ಜೆ.ಜೆ.ಎಂ ಕಾಮಗಾರಿಯ ಪೈಪನ್ನು ರಸ್ತೆಯ ಬದಿಯಲ್ಲಿ ಹಾಕಿ ಅರ್ಧಂಬರ್ಧ ಮುಚ್ಚಿ ಹೋಗಿರುವ ವೇಳೆ ಟಂ ಟಂ ಗೆ ಸ್ಥಳಾವಕಾಶ ಮಾಡಲು ಬಸ್ಸಿನ ಚಾಲಕ ಹೊದಾಗ ಕೊರೆಗೆ ಜಗ್ಗಿ ಬಸ್ಸು ಪಲ್ಟಿ ಆಗುವ ಸಂಭವವಿತ್ತು ಆದರೆ ಚಾಲಕನ ಮುಂಜಾಗೃತೆಯಿಂದ ಬಸ್ಸು ಪಲ್ಟಿಯಾಗದೇ ಕೊರೆಗೆ ಹೋಗಿ ಬಾಗಿ ನಿಂತ ಘಟನೆ ನಡೆದಿದೆ.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಳಿಕೋಟಿ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ ಅವರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬಸ್ಸಿನಲ್ಲಿದ ಪ್ರಯಾಣಿಕರನ್ನು ಹೊರ ಬರಲು ತಮ್ಮ ಸಂಗಡಿಗರೊಂದಿಗೆ ಸಹಕರಿಸಿದರು.ನಂತರ ಮಾತನಾಡಿದ ಅವರು ಜೆ.ಜೆ.ಎಂ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಕೆಲಸ ಮುಗಿದ ತಕ್ಷಣ ಪೂರ್ತಿಯಾಗಿ ಗುಂಡಿಯನ್ನು ಮುಚ್ಚಬೇಕಾಗಿತ್ತು. ಆದರೆ ಅವರ ನಿರ್ಲಕ್ಷ್ಯದಿಂದ ಈ…
ವಿಜಯಪುರ: ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ ೮ ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಡಾ. ಸಿ.ಕೆ. ಹೊಸಮನಿ ಎಂದು ಹೇಳಿದರು.ಲಯನ್ಸ ಕ್ಲಬ ಆಫ್ ಬಿಜಾಪುರ ಪರಿವಾರ ಹಾಗೂ ಸುವಿಧಾ ಸಾಮಾಜಿಕ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಗರದ ಅಪ್ಸರಾ ಹಾಲ್ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡುತ್ತಿದ್ದರು.ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಮಾರ್ಚ್ ೮ ರ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ. ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗಮನಿಸುತ್ತದೆ. ಮಹಿಳಾ ದಿನವು ಲಿಂಗ ತಾರತಮ್ಯ, ಪಕ್ಷಪಾತದಿಂದ ಮುಕ್ತವಾಗಿರುವ ಲಿಂಗ-ಸಮಾನ ಜಗತ್ತಿಗೆ ಕರೆ ನೀಡುತ್ತದೆ. ಈ ದಿನವನ್ನು…
“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ- ಮಂಡ್ಯ ಮ.ನಾ.ಉಡುಪ ದಡ್ಡ ಕತ್ತೆ ಒಮ್ಮೆ ಸಿಂಹಕ್ಕೆ ಜೋರಾಗಿ ಹಸಿವೆಯಾಯ್ತು, ಪಕ್ಕದಲ್ಲಿದ್ದ ನರಿಯೊಂದಿಗೆ ಹೇಳಿತು:”ನನಗೇನಾದರು ತಿನ್ನಲು ತಂದು ಕೊಡು, ಇಲ್ಲದಿದ್ದರೆ ನಾನು ನಿನ್ನನ್ನು ಕೊಂದು ತಿನ್ನುತ್ತೇನೆ.”ನರಿ ನೇರ ಒಂದು ಕತ್ತೆಯ ಬಳಿ ಹೋಗಿ ಹೇಳಿತು:”ಸಿಂಹ ನಿನ್ನನ್ನು ರಾಜನನ್ನಾಗಿ ಮಾಡ್ತಾನಂತೆ,ಬಾ ನನ್ನ ಜೊತೆ.”ಕತ್ತೆಯನ್ನು ಕಂಡಾಗ ಸಿಂಹ ಅದರ ಮೇಲೆ ಆಕ್ರಮಿಸಿತು, ಕಿವಿಯನ್ನು ಕಚ್ಚಿ ಕತ್ತರಿಸಿತು, ಆದರೆ ಕತ್ತೆ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಯಿತು.ಕತ್ತೆ ನರಿಯೊಂದಿಗೆ ಕೇಳಿತು, “ನೀನು ನನಗೆ ಮೋಸ ಮಾಡಿ ಬಿಟ್ಟೆ ಅಲ್ವಾ?…! “ನರಿ ಹೇಳಿತು: “ಮುಠ್ಠಾಳನಂತೆ ಮಾತಾಡ್ಬೇಡ, ನಿನ್ನ ತಲೆಗೆ ಕಿರೀಟ ತೊಡಿಸಲು ನಿನ್ನ ಕಿವಿಯನ್ನು ಕತ್ತರಿಸಿದ್ದು.”‘ಕತ್ತೆ ಅದು ಸತ್ಯವಾಗಿರಬಹುದು ಎಂದು ಭಾವಿಸಿ ಮತ್ತೆ ಸಿಂಹದ ಬಳಿ ಹೋಯಿತು.ಸಿಂಹ ಪುನಃ ಕತ್ತೆಯನ್ನು ಆಕ್ರಮಿಸಿ ಕಚ್ಚಿ ಬಾಲವನ್ನು ಕತ್ತರಿಸಿ ಹಾಕಿತು..!,ಕತ್ತೆ ಮತ್ತೊಮ್ಮೆ ಪಾರಾಗಿ ಹೋಗಿ ನರಿಯೊಂದಿಗೆ ಕೇಳಿತು “ನೀನು ನನ್ನಲ್ಲಿ ಸುಳ್ಳು ಹೇಳಿದ್ದಲ್ವಾ?!.ನರಿ ಹೇಳಿತು: “ಅಯ್ಯೋ ಮಂಕೇ ನಿನಗೆ ಸಿಂಹಾಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಲು ಬೇಕಾಗಿ…
ವಿಜಯಪುರ: ಲೋಕಸಭಾ ಚುನಾವಣೆ ನಿಮಿತ್ತ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ದಿ.1 ಸೋಮವಾರ ವಿಜಯಪುರ ನಗರ, ದೇವರಹಿಪ್ಪರಗಿ ಮತ್ತು ದಿ.2 ಮಂಗಳವಾರ ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಸಭೆ ಹಮ್ಮಿಕೊಂಡಿದ್ದಾರೆ.ದಿ.1 ಸೋಮವಾರ ಬೆ.9 ರಿಂದ ಮ.12 ಗಂ.ವರೆಗೆ ವಿಜಯಪುರ ನಗರ ವಿಧಾನಸಭಾ ವ್ಯಾಪ್ತಿಯ ಮಹಾನಗರ ಪಾಲಿಕೆ ವಾರ್ಡ್ ನಂ: 32, 33 ಹಾಗೂ 34 ಗಳಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ನಂತರ ಸಂ. 4ಕ್ಕೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ಮುಖಂಡರ ನೇತೃತ್ವದಲ್ಲಿ ಮುಳಸಾವಳಗಿ ಜಿ.ಪಂ ವ್ಯಾಪ್ತಿಯ ಮುಳಸಾವಳಗಿ ಗ್ರಾಮದ ಮಾರುಕಟ್ಟೆಯಲ್ಲಿ ಮತ್ತು ಸಂಜೆ.6ಗಂ. ಕೋರವಾರ ಜಿ.ಪಂ ವ್ಯಾಪ್ತಿಯ ಕೋರವಾರ ಪಿಕೆಪಿಎಸ್ ಮುಂಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ.ದಿ.2 ಮಂಗಳವಾರ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಬೆ.10ಗಂ. ಕನ್ನೋಳ್ಳಿ ಜಿ.ಪಂ ವ್ಯಾಪ್ತಿಯ ಕನ್ನೋಳ್ಳಿ ಗ್ರಾಮದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಮ.1ಗಂ. ಯಂಕಂಚಿ ಜಿ.ಪಂ ವ್ಯಾಪ್ತಿಯ ಯಂಕಂಚಿ ಗ್ರಾಮದ ಭೀರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಸಾ.4ಗಂ. ಮೊರಟಗಿ…
ಆಲಮಟ್ಟಿಯಲ್ಲಿ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಯಶಸ್ವಿ ಆಲಮಟ್ಟಿ: ಪ್ರಸಕ್ತ ಸಾಲಿನ ಮೌಲ್ಯಾಂಕನ ಪರೀಕ್ಷೆಗೆ ಸಾಕಷ್ಟು ಅಡೆತಡೆ ಬಂದಿದ್ದರೂ, ಸರ್ಕಾರ ಮೊದಲೇ ನಿರ್ಧರಿಸಿದ ನಿರ್ಧಾರಕ್ಕೆ ಬದ್ದವಾಗಿ ನಿಂತು ಪರೀಕ್ಷೆ ಯಶಸ್ವಿಯಾಗಿ ನಡೆಸಿದೆ, ಅದಕ್ಕೆ ಪೂರಕವಾಗಿಯೂ ಶಿಕ್ಷಕರು ಕೂಡಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ 5 ನೇ ವರ್ಗದ ಮೌಲ್ಯಾಂಕನ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಿಡಗುಂದಿ ತಾಲ್ಲೂಕಿನ ಸರ್ವ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಿಕ್ಷಣದ ಗುಣಮಟ್ಟದ ಕಲಿಕೆಯ ಅಳತೆಗೋಲಿಗೆ ಮೌಲ್ಯಾಂಕನ ಪರೀಕ್ಷೆ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲಿದೆ ಎಂದರು. ಶಿಕ್ಷಕ ಸಂಘಟನೆಯ ರಾಜ್ಯ ಘಟಕದ ಪ್ರಯತ್ನದ ಫಲವಾಗಿ 2006 ಕ್ಕೂ ಮುಂಚೆ ನೇಮಕಾತಿ ಅಧಿಸೂಚನೆ ಹೊರಡಿಸಿ, 2007 ರಲ್ಲಿ ನೇಮಕಗೊಂಡ ನೌಕರರಿಗೆ ಎನ್ ಪಿಎಸ್ ಬದಲಾಗಿ ಓಪಿಎಸ್ ಜಾರಿಮಾಡಿಸಲಾಗಿದೆ. 7 ವೇತನ ಆಯೋಗದಲ್ಲಿ ಹೆಚ್ಚಿನ ವೇತನ ಶ್ರೇಣಿ…
ಜಂಬಗಿ-ಆಹೇರಿ ಕೆರೆಗೆ ನೀರು ಹರಿಸಲು ರೈತ ಸಂಘ ಆಗ್ರಹ ವಿಜಯಪುರ: ಈ ವರ್ಷ ಸಂಪೂರ್ಣ ಮಳೆ ಕೈಕೊಟ್ಟಿರುವುದರಿಂದ ಜಮೀನಿನಲ್ಲಿರುವ ಎಲ್ಲಾ ಬಾವಿ, ಕೊಳವೆ ಭಾವಿ, ಹಳ್ಳ, ಕೆರೆಗಳು ಬತ್ತಿ ಹೋಗಿವೆ, ಸಾವಿರ ಅಡಿ ಬೊರವೆಲ್ ಕೊರೆದರು ನೀರು ಸಿಗುತ್ತಿಲ್ಲ, ಇರುವ ಅಲ್ಪಸೊಲ್ಪ ಬೆಳೆಗಳಿಗೆ ನೀರು ಸಾಲುತ್ತಿಲ್ಲ, ದನಕರುಗಳಿಗೆ ಕುಡಿಯಲು ನೀರು, ಮೇವೂ ಇಲ್ಲದೇ ಹರಸಾಹಸ ಪಡುವಂತಾಗಿದೆ. ಕೂಡಲೇ ಬತ್ತಿದ ಜಂಬಗಿ ಹಾಗೂ ಆಹೇರಿ ಕೆರೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.ಈ ವೇಳೆ ವಿಜಯಪುರ ತಾಲೂಕಾ ಅಧ್ಯಕ್ಷ ಅರಣುಗೌಡ ತೇಲಿ ಮಾತನಾಡಿ, ಈ ಭಾಗದ ರೈತರಿಗೆ ಸಮಸ್ಯೆ ಆಗುವುತ್ತಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣ ಜಂಬಗಿ ಹಾಗೂ ಆಹೇರಿ ಕೆರೆಗಳನ್ನು ವೀಕ್ಷಣೆ ಮಾಡಿದಾಗ ಕೆರೆಯಲ್ಲಿ ಅಲ್ಲಲ್ಲಿ ತೆಗ್ಗುಗಳಲ್ಲಿ ಅಲ್ಪ ಸ್ವಲ್ಪ ನೀರು ಇರುವುದು ಕಂಡು ಬಂದಿತು. ಕಾರಣಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಈ ೨ ಕೆರೆಗಳನ್ನು ತುಂಬಿಸಬೇಕು. ಇಲ್ಲದಿದ್ದಲ್ಲಿ ಧರಣಿ ಸತ್ಯಾಗ್ರಹ ಅನಿವಾರ್ಯವಾಗಲಿದೆ ಎಂದರು.ತಾಲೂಕಾ…
ಕಲಕೇರಿ: ಭಾರತೀಯ ಜನತಾ ಪಾರ್ಟಿಯ ಎಸ್.ಸಿ. ಮೋರ್ಚಾದ ಜಿಲ್ಲಾ ಅಧ್ಯಕ್ಷ ಮಂಜುನಾಥ ಮೀಸಿ ಅವರು ಕಲಕೇರಿಯ ಬಾರತೀಯ ಜನತಾ ಪಕ್ಷದ ಕಾರ್ಯಕರ್ತ ಸುನೀಲ ಕಲಕೇರಿ ಅವರಿಗೆ ಎಸ್.ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಮಾಡಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಶುಕ್ರವಾರದಂದು ಆದೇಶ ಪ್ರತಿ ನೀಡಿದರು.
ರೇವಣಸಿದ್ಧೇಶ್ವರ ಶ್ರೀಗಳ 38ನೇ ಪುಣ್ಯಾರಾಧನೆ | ಸಾಮೂಹಿಕ ವಿವಾಹ | ದಾಂಪತ್ಯ ಜೀವನಕ್ಕೆ ಕಾಲಿಟ್ಟ 21 ಜೋಡಿ ಝಳಕಿ: ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಅದು ಭಾಗ್ಯವಂತರ ಮದುವೆ ಎಂದು ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾದ್ಯ ಭಗವತ್ ಪಾದಂಗಳ ಹೇಳಿದರು.ಸಮೀಪದ ಸುಕ್ಷೇತ್ರ ಜೇವೂರ ಗ್ರಾಮದ ಹಠಯೋಗಿ ರೇವಣಸಿದ್ಧೇಶ್ವರ ಶ್ರೀಗಳ 38ನೇ ಪುಣ್ಯಾರಾಧನೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಭಾಗದ ಜೇವೂರ ಆಧ್ಯಾತ್ಮಿಕ, ಧಾರ್ಮಿಕ, ಸಮಾಜ ಮುಖಿ ಕಾರ್ಯಗಳಿಂದ ಪ್ರಸಿದ್ಧವಾಗಿದೆ. ಸರಳ ಸಾಮೂಹಿಕ ವಿವಾಹದಲ್ಲಿ ಹಸಿಮಣೆ ಏರಿದ ಜೋಡಿಗಳಿಗೆ ಸಮಾಜದಲ್ಲಿ ಮಾದರಿ ವೈವಾಹಿಕ ಜೀವನ ನಡೆಸುವಂತೆ ಸಲಹೆ ನೀಡಿದರು.ಮಹಾಂತಯ್ಯ ಸ್ವಾಮಿಗಳು ಮಾತನಾಡಿ, ಸಾಲ ಮಾಡಿ ವೈಯಕ್ತಿಕವಾಗಿ ಮದುವೆ ಮಾಡಿಕೊಂಡು ಸಾಲ ತೀರಿಸಲು ಗೋಳಾಡುವುದಕ್ಕಿಂತ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡರೆ ಸುಖಕರ ಜೀವನ ಸಾಗಿಸಬಹುದು ಎಂದರು.ಹಿರೂರ ಜಯಸಿದ್ದೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿ, ನವ ಜೋಡಿಗಳು ನೂರು ಕಾಲ ಸುಖಕರವಾಗಿ ಬಾಳಲಿ ಎಂದು ಆಶೀರ್ವದಿಸಿದರು.21…
ಚಿಮ್ಮಡ: ರಬಕವಿ-ಬನಹಟ್ಟಿ ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಗೆ ಗ್ರಾಮದ ಇಬ್ಬರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ, ಗ್ರಹಲಕ್ಷ್ಮಿ, ಗ್ರಹಜ್ಯೋತಿ, ಅನ್ನಭಾಗ್ಯ, ಯುವಶಕ್ತಿ ಈ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಜಿಲ್ಲೆ, ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮೀತಿ ರಚಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಧುರೀಣ ಸಿದ್ದು ಕೊಣ್ಣೂರ ಸಿಫಾರಸ್ಸಿನ ಮೇರೆಗೆ ಸ್ಥಳೀಯ ಕಾಂಗ್ರೆಸ್ ಧುರೀಣರಾದ ಪ್ರವೀಣ ಪೂಜಾರಿ, ಹಾಗೂ ರವಿ ದೊಡವಾಡ ಅವರನ್ನು ರಬಕವಿ-ಬನಹಟ್ಟಿ ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಗೆ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ನೀಡಿದೆ.
