ವಿಜಯಪುರ: ಲಿಂಗ ತಾರತಮ್ಯದಿಂದ ಮುಕ್ತವಾದ ಉತ್ತಮ ಸಮಾಜವನ್ನು ನಿರ್ಮಿಸಲು ಮತ್ತು ಲಿಂಗ ಸಮಾನತೆಯ ಸಂದೇಶವನ್ನು ನೀಡಲು ಪ್ರತಿ ವರ್ಷ ಮಾರ್ಚ್ ೮ ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಡಾ. ಸಿ.ಕೆ. ಹೊಸಮನಿ ಎಂದು ಹೇಳಿದರು.
ಲಯನ್ಸ ಕ್ಲಬ ಆಫ್ ಬಿಜಾಪುರ ಪರಿವಾರ ಹಾಗೂ ಸುವಿಧಾ ಸಾಮಾಜಿಕ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ನಗರದ ಅಪ್ಸರಾ ಹಾಲ್ ಹಮ್ಮಿಕೊಂಡ ಸಂದರ್ಭದಲ್ಲಿ ಮಾತನಾಡುತ್ತಿದ್ದರು.
ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಎತ್ತಿ ತೋರಿಸುವ ದಿನವೇ ಮಾರ್ಚ್ ೮ ರ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿದೆ. ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಆರ್ಥಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಗಮನಿಸುತ್ತದೆ. ಮಹಿಳಾ ದಿನವು ಲಿಂಗ ತಾರತಮ್ಯ, ಪಕ್ಷಪಾತದಿಂದ ಮುಕ್ತವಾಗಿರುವ ಲಿಂಗ-ಸಮಾನ ಜಗತ್ತಿಗೆ ಕರೆ ನೀಡುತ್ತದೆ. ಈ ದಿನವನ್ನು ಮಹಿಳೆಯರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಇದು ಮಹಿಳೆಯರ ಸಮಾನ ಹಕ್ಕುಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ನಿಂದನೆ ಮತ್ತು ಸಂತಾನೋತ್ಪತ್ತಿ ಹಕ್ಕುಗಳಂತಹ ವಿಷಯಗಳ ಬಗ್ಗೆ ಮಾತನಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಲಯನ್ಸ ಪರಿವಾರದ ಅಧ್ಯಕ್ಷರಾದ ಪ್ರೊ. ಎಂ.ಬಿ. ರಜಪೂತ ಮಾತನಾಡಿದರು.
ಈ ಸಂದರ್ಭದಲ್ಲಿ ಸುವಿಧಾ ಸಂಸ್ಥೆಯ ಅಧ್ಯಕ್ಷರು ಹಾಗೂ ಲಯನ್ಸ ಪರಿವಾರದ ಕಾರ್ಯದರ್ಶಿಗಳಾದ ಫಯಾಜ ಕಲಾದಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಖಜಾಂಚಿ ಕೆ ಅರ್ ಲಮಾಣಿ, ಲಯನ್ಸ್ ಪರಿವಾರದ ಸಂಸ್ಥಾಪಕರಾದ ಡಾ. ಅಶೋಕ್ ಕುಮಾರ್ ಜಾಧವ, ಶ್ರೀಮತಿ ಅಕ್ಕುಬಯಿ ನಾಯಿಕ್, ಶಶಿಕಲಾ ಇಜೇರಿ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಶ್ರೀಮತಿ ಜಯಶ್ರೀ ಹೂಗಾರ ಶಿಕ್ಷಣ ಕ್ಷೇತ್ರ, ಶ್ರೀಮತಿ ಶೋಭಾ ಮೇಡೇಗರ್ ಶಿಕ್ಷಣ ಕ್ಷೇತ್ರ, ಶ್ರೀಮತಿ ಅಕ್ಕುಬಾಯಿ ನಾಯಿಕ್ ಶಿಕ್ಷಣ ಕ್ಷೇತ್ರ, ಶ್ರೀಮತಿ ವಿದ್ಯಾ ಕೊಟ್ಟೆನವರ ಶಿಕ್ಷಣ ಕ್ಷೇತ್ರ, ಶ್ರೀಮತಿ ಶಕುಂತಲಾ ಸಮಾಜಸೇವೆ ಕ್ಷೇತ್ರ ಇವರಿಗೆ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಪ್ರೊ. ಎಸ್ ಎಸ್ ರಾಜಮನೆ, ಎಸ್ ಆರ್ ಕಟ್ಟಿ, ಸಿ. ಎಸ್. ನಿಂಬಾಳ, ವಾಲು ಚವ್ಹಾಣ, ಎಚ್.ಎಸ್. ಕಬಾಡೆ, ನಸೀಮ್ ರೋಜಿಂದಾರ್, ಸಾದಿಕ್ ಜಾನ್ವೇಕರ್, ಐ.ಸಿ. ಪಠಾಣ, ಶ್ರೀಮತಿ ಉಷಾರಾವ್, ಶ್ರೀಮತಿ ಪುಷ್ಪಾ ಮಹಾಂತ್ಮಠ, ಶ್ರೀಮತಿ ರಜನಿ ಸಂಬಣ್ಣಿ, ಶೋಮಶೇಖರ್ ರಾಠೋಡ್, ಶಫೀಕ್ ಜಾಗಿರದಾರ, ಹಸನ ಕಲಾದಗಿ, ಲತಿಫ್ ಕಲಾದಗಿ, ಹಾಶಿಮ್ ಕಲಾದಗಿ, ಶ್ರೇಯೇಸ್ ಮಹೇಂದ್ರಕರ್, ಶ್ರೀಧರ್ ಮಹೇಂದ್ರಕರ್, ಫಿದಾಹುಸೈನ್ ಕಲಾದಗಿ, ಇಲಿಯಾಸ್ ಬಡೆಘರ್ ಮುಂತಾದವರು ಇದ್ದರು.
ಕಾರ್ಯಕ್ರಮವನ್ನು ಸುರೇಶ ಬಿಜಾಪೂರ ನಿರೂಪಿಸಿದರು. ಪ್ರೊ.ಎಂ.ಬಿ. ರಜಪೂತರ ವಂದಿಸಿದರು.
Subscribe to Updates
Get the latest creative news from FooBar about art, design and business.
ಸಮಾನತೆಯ ಸಂದೇಶ ನೀಡಲು ಮಹಿಳಾ ದಿನಾಚರಣೆ ಆಚರಿಸಿ :ಡಾ.ಹೊಸಮನಿ
Related Posts
Add A Comment

