ವಿಜಯಪುರ: ಲೋಕಸಭಾ ಚುನಾವಣೆ ನಿಮಿತ್ತ ವಿಜಯಪುರ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ದಿ.1 ಸೋಮವಾರ ವಿಜಯಪುರ ನಗರ, ದೇವರಹಿಪ್ಪರಗಿ ಮತ್ತು ದಿ.2 ಮಂಗಳವಾರ ಸಿಂದಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಸಭೆ ಹಮ್ಮಿಕೊಂಡಿದ್ದಾರೆ.
ದಿ.1 ಸೋಮವಾರ ಬೆ.9 ರಿಂದ ಮ.12 ಗಂ.ವರೆಗೆ ವಿಜಯಪುರ ನಗರ ವಿಧಾನಸಭಾ ವ್ಯಾಪ್ತಿಯ ಮಹಾನಗರ ಪಾಲಿಕೆ ವಾರ್ಡ್ ನಂ: 32, 33 ಹಾಗೂ 34 ಗಳಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ನಂತರ ಸಂ. 4ಕ್ಕೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ಮುಖಂಡರ ನೇತೃತ್ವದಲ್ಲಿ ಮುಳಸಾವಳಗಿ ಜಿ.ಪಂ ವ್ಯಾಪ್ತಿಯ ಮುಳಸಾವಳಗಿ ಗ್ರಾಮದ ಮಾರುಕಟ್ಟೆಯಲ್ಲಿ ಮತ್ತು ಸಂಜೆ.6ಗಂ. ಕೋರವಾರ ಜಿ.ಪಂ ವ್ಯಾಪ್ತಿಯ ಕೋರವಾರ ಪಿಕೆಪಿಎಸ್ ಮುಂಭಾಗದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ.
ದಿ.2 ಮಂಗಳವಾರ ಸಿಂದಗಿ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಬೆ.10ಗಂ. ಕನ್ನೋಳ್ಳಿ ಜಿ.ಪಂ ವ್ಯಾಪ್ತಿಯ ಕನ್ನೋಳ್ಳಿ ಗ್ರಾಮದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಮ.1ಗಂ. ಯಂಕಂಚಿ ಜಿ.ಪಂ ವ್ಯಾಪ್ತಿಯ ಯಂಕಂಚಿ ಗ್ರಾಮದ ಭೀರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಸಾ.4ಗಂ. ಮೊರಟಗಿ ಜಿ.ಪಂ ವ್ಯಾಪ್ತಿಯ ಮೊರಟಗಿ ಗ್ರಾಮದ ಸನ್ಮಾರ್ಗ ಸಭಾ ಭವನದಲ್ಲಿ ಮತ್ತು ಸಾ.6ಗಂ. ದೇವಣಗಾಂವ ಜಿ.ಪಂ ವ್ಯಾಪ್ತಿಯ ದೇವಣಗಾಂವ ಅಂಬಿಗರ ಚೌಡಯ್ಯ ಸಭಾ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

