ಜಂಬಗಿ-ಆಹೇರಿ ಕೆರೆಗೆ ನೀರು ಹರಿಸಲು ರೈತ ಸಂಘ ಆಗ್ರಹ
ವಿಜಯಪುರ: ಈ ವರ್ಷ ಸಂಪೂರ್ಣ ಮಳೆ ಕೈಕೊಟ್ಟಿರುವುದರಿಂದ ಜಮೀನಿನಲ್ಲಿರುವ ಎಲ್ಲಾ ಬಾವಿ, ಕೊಳವೆ ಭಾವಿ, ಹಳ್ಳ, ಕೆರೆಗಳು ಬತ್ತಿ ಹೋಗಿವೆ, ಸಾವಿರ ಅಡಿ ಬೊರವೆಲ್ ಕೊರೆದರು ನೀರು ಸಿಗುತ್ತಿಲ್ಲ, ಇರುವ ಅಲ್ಪಸೊಲ್ಪ ಬೆಳೆಗಳಿಗೆ ನೀರು ಸಾಲುತ್ತಿಲ್ಲ, ದನಕರುಗಳಿಗೆ ಕುಡಿಯಲು ನೀರು, ಮೇವೂ ಇಲ್ಲದೇ ಹರಸಾಹಸ ಪಡುವಂತಾಗಿದೆ. ಕೂಡಲೇ ಬತ್ತಿದ ಜಂಬಗಿ ಹಾಗೂ ಆಹೇರಿ ಕೆರೆಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ.
ಈ ವೇಳೆ ವಿಜಯಪುರ ತಾಲೂಕಾ ಅಧ್ಯಕ್ಷ ಅರಣುಗೌಡ ತೇಲಿ ಮಾತನಾಡಿ, ಈ ಭಾಗದ ರೈತರಿಗೆ ಸಮಸ್ಯೆ ಆಗುವುತ್ತಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣ ಜಂಬಗಿ ಹಾಗೂ ಆಹೇರಿ ಕೆರೆಗಳನ್ನು ವೀಕ್ಷಣೆ ಮಾಡಿದಾಗ ಕೆರೆಯಲ್ಲಿ ಅಲ್ಲಲ್ಲಿ ತೆಗ್ಗುಗಳಲ್ಲಿ ಅಲ್ಪ ಸ್ವಲ್ಪ ನೀರು ಇರುವುದು ಕಂಡು ಬಂದಿತು. ಕಾರಣಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಈ ೨ ಕೆರೆಗಳನ್ನು ತುಂಬಿಸಬೇಕು. ಇಲ್ಲದಿದ್ದಲ್ಲಿ ಧರಣಿ ಸತ್ಯಾಗ್ರಹ ಅನಿವಾರ್ಯವಾಗಲಿದೆ ಎಂದರು.
ತಾಲೂಕಾ ಉಪಾಧ್ಯಕ್ಷ ಮಹದೇವಪ್ಪ ತೇಲಿ ಮಾತನಾಡಿ, ಕೆರೆ ನೀರು ತುಂಬಿಸುವ ಯೋಜನೆಯಡಿ ನೀರು ಹರಿಸುವಾಗ ಈ ಬಾರಿ ಈ ಎರಡು ಕೆರೆ ತುಂಬಿಸಬೇಕು. ಇಲ್ಲದಿದ್ದಲ್ಲಿ ಕೆರೆಯಲ್ಲಿಯೇ ಕುಳಿತು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ರೈತ ಮುಖಂಡರಾದ ಪ್ರಭು ಸಾತಿಹಾಳ, ಶಿವು ಇಬ್ರಾಹಿಂಪುರ, ಶಿವು ಪಡ್ನುರ, ಮಲ್ಲು ಮಸಬಿನಾಳ, ಬಸವಂತ ತೇಲಿ, ರಮೇಶ ತೇಲಿ, ದೂಳಪ್ಪ ಹೊನ್ನಳ್ಳಿ, ಭೀಮರಾಯ ಐಹೊಳಿ, ಮುತ್ತಪ್ಪ ಘೀರಡೆ, ನಾಗಪ್ಪ ಘೀರಡೆ, ಲಕ್ಷö್ಮನ ಹೊನ್ನಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

