ಚಿಮ್ಮಡ: ರಬಕವಿ-ಬನಹಟ್ಟಿ ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಗೆ ಗ್ರಾಮದ ಇಬ್ಬರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಶಕ್ತಿ, ಗ್ರಹಲಕ್ಷ್ಮಿ, ಗ್ರಹಜ್ಯೋತಿ, ಅನ್ನಭಾಗ್ಯ, ಯುವಶಕ್ತಿ ಈ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಜಿಲ್ಲೆ, ತಾಲೂಕು ಮಟ್ಟದಲ್ಲಿ ಅನುಷ್ಠಾನ ಸಮೀತಿ ರಚಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪೂರ, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಧುರೀಣ ಸಿದ್ದು ಕೊಣ್ಣೂರ ಸಿಫಾರಸ್ಸಿನ ಮೇರೆಗೆ ಸ್ಥಳೀಯ ಕಾಂಗ್ರೆಸ್ ಧುರೀಣರಾದ ಪ್ರವೀಣ ಪೂಜಾರಿ, ಹಾಗೂ ರವಿ ದೊಡವಾಡ ಅವರನ್ನು ರಬಕವಿ-ಬನಹಟ್ಟಿ ತಾಲೂಕು ಗ್ರಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಗೆ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ನೀಡಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

