ಕಲಕೇರಿ: ತಾಳಿಕೋಟಿ ತಾಲೂಕಿನ ಕಲಕೇರಿ ಸಮೀಪದ ಬೆಕಿನಾಳ ಗ್ರಾಮದಲ್ಲಿ ಬೆಳಿಗ್ಗೆ ಸುರಪುರ ಸೋಲಾಪುರ ಬಸ್ಸು ಅಪಘಾತದಿಂದ ಪಾರಾದ ಘಟನೆ ಶನಿವಾರ ನಡೆದಿದೆ. ಸುಮಾರು ೪೦ ಪ್ರಯಾಣಿಕರು ಹಾಗೂ ಪರೀಕ್ಷೆಗೆ ಹೋಗುತ್ತೀರುವ ವಿದ್ಯಾರ್ಥಿಗಳನ್ನು ಕೊಂಡೊಯುತ್ತಿರುವ ಬಸ್ಸು ಜೆ.ಜೆ.ಎಂ ಕಾಮಗಾರಿಯ ಪೈಪನ್ನು ರಸ್ತೆಯ ಬದಿಯಲ್ಲಿ ಹಾಕಿ ಅರ್ಧಂಬರ್ಧ ಮುಚ್ಚಿ ಹೋಗಿರುವ ವೇಳೆ ಟಂ ಟಂ ಗೆ ಸ್ಥಳಾವಕಾಶ ಮಾಡಲು ಬಸ್ಸಿನ ಚಾಲಕ ಹೊದಾಗ ಕೊರೆಗೆ ಜಗ್ಗಿ ಬಸ್ಸು ಪಲ್ಟಿ ಆಗುವ ಸಂಭವವಿತ್ತು ಆದರೆ ಚಾಲಕನ ಮುಂಜಾಗೃತೆಯಿಂದ ಬಸ್ಸು ಪಲ್ಟಿಯಾಗದೇ ಕೊರೆಗೆ ಹೋಗಿ ಬಾಗಿ ನಿಂತ ಘಟನೆ ನಡೆದಿದೆ.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಳಿಕೋಟಿ ತಾಲೂಕಾ ಅಧ್ಯಕ್ಷ ಶ್ರೀಶೈಲ ವಾಲಿಕಾರ ಅವರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬಸ್ಸಿನಲ್ಲಿದ ಪ್ರಯಾಣಿಕರನ್ನು ಹೊರ ಬರಲು ತಮ್ಮ ಸಂಗಡಿಗರೊಂದಿಗೆ ಸಹಕರಿಸಿದರು.
ನಂತರ ಮಾತನಾಡಿದ ಅವರು ಜೆ.ಜೆ.ಎಂ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಕೆಲಸ ಮುಗಿದ ತಕ್ಷಣ ಪೂರ್ತಿಯಾಗಿ ಗುಂಡಿಯನ್ನು ಮುಚ್ಚಬೇಕಾಗಿತ್ತು. ಆದರೆ ಅವರ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ. ಮುಂದೆಯೂ ಹೀಗೆ ನಡೆಯಬಹುದು, ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ವಿಶ್ವನಾಥ ಗೌಡ ಕರಕಳ್ಳಿ, ಕುಮಾರ ಬೇನಾಳಮಠ, ಸಿದ್ದು ಸಜ್ಜನ, ಸಂಜು ಮೋಪಗಾರ, ಬಾಬು ಸಂಗ್ಮೀ, ರಫೀಕ ಮುಲ್ಲಾ, ಅಸ್ಲಾಂ ತೋಟದ, ಮಂಜು ಛಲವಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

