Author: editor.udayarashmi@gmail.com

ತಿಕೋಟಾದಲ್ಲಿ ಸಂಭ್ರಮದ ಎಳ್ಳ ಅಮವಾಸ್ಯೆ ಆಚರಣೆ | ಸಾಮೂಹಿಕ ಭೋಜನ ತಿಕೋಟಾ: ಗ್ರಾಮೀಣ ಭಾಗದ ರೈತಾಪಿ ವರ್ಗ ಆಚರಿಸುವ ವಿಶೇಷ ಹಬ್ಬಗಳಲ್ಲಿ ಎಳ್ಳ ಅಮವಾಸ್ಯೆ ಒಂದು ಹಬ್ಬವಾಗಿದೆ. ಈ ದಿನ ರೈತ ತನ್ನ ಕುಟುಂಬ ವರ್ಗ, ರಕ್ತ ಸಂಬಧಿಗಳು ಹಾಗೂ ಆತ್ಮಿಯರನ್ನು ಕರೆದು ತೋಟದಲ್ಲಿ ಬೆಳೆದ ಫಸಲಿನ ಮಧ್ಯೆ ಉತ್ಸಾಹದಿಂದ ಭೂ ತಾಯಿಗೆ ಪೂಜೆ ಸಲ್ಲಿಸಿ ಎಲ್ಲರೊಟ್ಟಿಗೆ ಮೃಷ್ಟಾನ್ನ ಭೋಜನ ಸವಿದು ಹಬ್ಬ ಆಚರಣೆ ಮಾಡುತ್ತಾನೆ. ತಾಲ್ಲೂಕಿನ ಬಹುತೇಕ ಹಳ್ಳಿಗಳ ರೈತರ ತೋಟದಲ್ಲಿ ಗುರುವಾರ ಸಂಭ್ರಮದಿಂದ ಹಬ್ಬ ಆಚರಿಸಿದರು.ರೈತ ಈ ದಿನ ರೈತ ತಾನು ಬೆಳೆದ ಬೆಳೆ ಸುರಕ್ಷಿತವಾಗಿರಲಿ ಎಂದು ತೋಟದ ಬನ್ನಿ ಮರ ಹಾಗೂ ಜೊಳ, ಕಡಲೆ ಇತರೆ ಬೆಳೆಯ ಮಧ್ಯೆ ಐದು ಕಲ್ಲನ್ನು ಇಟ್ಟು, ವಿಭೂತಿ ಕುಂಕುಮ ಅರಿಷಿನ ಹಚ್ಚಿ ಭಕ್ತಿ ಭಾವದಿಂದ ಪ್ರಕೃತಿಯನ್ನು ಪೂಜಿಸುತ್ತಾನೆ. ಇಡೀ ತೋಟದ ಸುತ್ತ ತಿರುಗುತ್ತಾ ಚರಗ ಚೆಲ್ಲಿದರು.ಮನೆಯಲ್ಲಿ ತಯಾರಿಸಿದ ವಿವಿಧ ಖಾಧ್ಯಗಳ ಊಟ ಸವಿಯಲು ರೈತ ಆತ್ಮಿಯರನ್ನು ಆಹ್ವಾನಿಸಿ ಸಜ್ಜೆ ರೊಟ್ಟಿ,…

Read More

ತಿಕೋಟಾ: ತಾಲ್ಲೂಕಿನಲ್ಲಿ ರೈತ ಕುಟುಂಬದ ಮಹಿಳೆಯರು ಗುರುವಾರ ಎಳ್ಳ ಅಮವಾಸ್ಯೆ ದಿನದಂದು ತೋಟದಲ್ಲಿ ಕುಟುಂಬ ಸದಸ್ಯರು, ಬಂಧುಗಳೊಂದಿಗೆ ಬೆಳೆದ ಬೆಳೆಯ ತುಂಬೆಲ್ಲಾ ಚರಗ ಚೆಲ್ಲಿ ಸಂಭ್ರಮಿಸಿದರು.

Read More

ವಿಜಯಪುರ: ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದ ಹಿಂಗಾರು ಹಂಗಾಮಿನ ಬೆಳೆಗಳ ರಕ್ಷಣೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ನೀರು ಹರಿಸಿದ ರಾಜ್ಯ ಸರ್ಕಾರದ ನಿರ್ದಾರ ತುಂಬಾ ಸ್ವಾಗತಾರ್ಹವಾದುದೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಜಿ ಎಂಕಂಚಿ ಹೇಳಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಅದರಂತೆ ಕೃಷ್ಣಾ ಮೇಲ್ದಂಡೆ ಯೋಜನೆಯ ಅವಳಿ ಜಿಲ್ಲೆಗಳ (ವಿಜಯಪುರ ಬಾಗಲಕೋಟೆ) ರೈತರ ತ್ಯಾಗ ಬಹುದೊಡ್ಡದೆಂಬುವುದು ಸರ್ಕಾರ ಮರೆಯಬಾರದು. ಅವಳಿ ಜಿಲ್ಲೆಯ ಕೃಷಿ ಅವಲಂಬಿತ ರೈತ ಸಮುದಾಯಕ್ಕೆ ನಿರಾಸೆ ಉಂಟು ಮಾಡದೆ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಸರ್ಕಾರ ಮಲತಾಯಿ ಧೊರಣೆ ಬಿಟ್ಟು ಕೃಷಿ ಅವಲಂಬಿತ ಎಲ್ಲ ರೈತಾಪಿ ವರ್ಗಕ್ಕೆ ಕಾಲುವೆಗಳ ಮೂಲಕ ನೀರು ಹರಸುಸುವುದರಿಂದ ತುಂಬಾ ಸಹಾಯವಾಗುತ್ತದೆ. ಕಾರಣ ಈ ನಿಟ್ಟಿನಲ್ಲಿ ತಕ್ಷಣ ಸರ್ಕಾರ ಮುತುವರ್ಜಿಯನ್ನು ವಹಿಸಿ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿಯ ಕಾಲುವೆಗಳಿಗೆ ಆಲಮಟ್ಟಿ ಆಣೆಕಟ್ಟಿನ ಎಡ ಮತ್ತು ಬಲ ದಂಡೆಯಿಂದ ನೀರು ಹರಿಸಬೇಕೆಂದು ಆಗ್ರಹಿಸಿದರು.ರೈತರ ಹಿಂಗಾರು…

Read More

ರಾಷ್ಟ್ರೀಯ ಯುವ ದಿನ (ಜ.12) ನಿಮಿತ್ತ ವಿಶೇಷ ಲೇಖನ ವೀಣಾಂತರಂಗ- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಬೀದಿಯಲ್ಲಿ ಕಾಷಾಯ ವಸ್ತ್ರ ಧರಿಸಿದ ಆ ಯುವ ಸನ್ಯಾಸಿ ನಾಲ್ಕಾರು ನಾಯಿಗಳ ಗುಂಪು ಬೆನ್ನಟ್ಟಿ ಬಂದಾಗ ಹಿಂತಿರುಗಿ ಓಡಲಾರಂಭಿಸಿದ. ಆಗ ಅಲ್ಲಿಯೇ ಇದ್ದ ಓರ್ವ ವ್ಯಕ್ತಿ ಸನ್ಯಾಸಿಯನ್ನು ಕುರಿತು ಹಿಂತಿರುಗಿ ಓಡಬೇಡ ಕೈಯಲ್ಲಿರುವ ಕೋಲನ್ನು ಗಟ್ಟಿಯಾಗಿ ಎತ್ತಿ ಹಿಡಿ, ಎಂದು ಹೇಳಿದ. ಯುವ ಸನ್ಯಾಸಿಯು ಅಪರಿಚಿತ ವ್ಯಕ್ತಿ ಹೇಳಿದ ಮಾತಿನಂತೆ ಕೋಲನ್ನು ಹಿಡಿದು ದೃಢವಾಗಿ ನಿಂತನು. ಸನ್ಯಾಸಿಯ ದೃಢ ನಿಲುವನ್ನು ಕಂಡ ನಾಯಿಗಳು ಬಾಲಮುದುರಿಕೊಂಡು ಹೊರಟು ಹೋದವು. ಜೀವನದ ಬಹುಮುಖ್ಯ ಪಾಠವೊಂದನ್ನು ಕಲಿತ ಸನ್ಯಾಸಿ “ಕಷ್ಟಗಳು ಬಂದಾಗ ಹೆದರಿಕೊಂಡು ಕುಳಿತುಕೊಳ್ಳದೆ ಅವುಗಳನ್ನು ಧೈರ್ಯವಾಗಿ ಎದುರಿಸಿ” ಎಂದು ಜಗತ್ತಿಗೆ ಸಾರಿದ. ಭಾರತದ ಕೀರ್ತಿಯನ್ನು ಜಗದೆತ್ತರಕ್ಕೆ ಬೆಳೆಸಿದ ಆಧ್ಯಾತ್ಮದ ಭವ್ಯ ಇತಿಹಾಸವನ್ನು ರಚಿಸಿದ ಆ ವೀರ ವಿರಾಗಿಯೇ ನಮ್ಮ ಸ್ವಾಮಿ ವಿವೇಕಾನಂದರು.ಸ್ವಾಮಿ ವಿವೇಕಾನಂದರು ಇಂದಿನ ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಜನವರಿ 12 1863 ರಲ್ಲಿ ಜನಿಸಿದರು…

Read More

ಜಯ್ ನುಡಿ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೋ.ನಂ. ೯೪೪೯೨೩೪೧೪೨ ಈ ದಿನ ಮಾಡಲು ಮತ್ತೆ ಸಾಕಷ್ಟು ಕೆಲಸಗಳಿವೆ. ನಿನ್ನೆಯೇ ಮಾಡಿ ಮುಗಿಸಬೇಕಿದ್ದ ಬಹಳಷ್ಟು ಕೆಲಸಗಳು ಹಾಗೇ ಬಾಕಿ ಉಳಿದುಕೊಂಡಿವೆ. ಕೆಲಸದ ಹೊರೆ ಹೆಚ್ಚುತ್ತಿದೆ ಅದರೊಂದಿಗೆ ತಲೆನೋವು ಹೆಚ್ಚುತ್ತಿದೆ. ನಾವು ಮಾಡುವ ಕೆಲಸವನ್ನು ಇಷ್ಟಪಡದಿದ್ದರೆ, ಭಾರ ಎಂದುಕೊಂಡರೆ, ಕೆಲಸ ಮಾಡದೇ ನಿರ್ಲಕ್ಷಿಸುವುದನ್ನು ಮುಂದುವರೆಸಿದರೆ, ಸಿಗುವ ಫಲಿತಾಂಶವಾದರೂ ಏನು? ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಉಪಜೀವನಕ್ಕೆ ಮಾತ್ರ ಗೊಣಗುತ್ತ ಮಾಡುವ ಕೆಲಸ ಆಗುತ್ತದೆಯೇ ಹೊರತು ನಿಜವಾಗಿ ಸಂತೃಪ್ತಿ ನೀಡುವ ಕೆಲಸವಾಗಲಾರದು. ಕಾಯಕ ಸಂತೃಪ್ತಿ ತರಲಾರದು. ನಾವು ಇಷ್ಟ ಪಡುವ ಕೆಲಸದಲ್ಲಿ ತೊಡಗಿದ್ದರೆ ಕೆಲಸ ಕಷ್ಟವೆನಿಸುವುದಿಲ್ಲ. ಇನ್ನಷ್ಟು ಮತ್ತಷ್ಟು ಮಾಡಬೇಕು ಮಾಡುತ್ತಲೇ ಇರಬೇಕು ಎಂದನಿಸುವುದು ಸಹಜ.ಕೆಲಸದ ಪ್ರತಿ ಪ್ರೀತಿಇಷ್ಟ ಪಟ್ಟು ಮಾಡುವ ಕೆಲಸದಲ್ಲಿ ಸಾಹಸ ಮಾಡಿ ಸಾಧನೆ ಮಾಡಬಹುದು. ಮುಂದಿನ ಪೀಳಿಗೆಗೆ ಸಾಹಸಗಾಥೆಯನ್ನು ಬಿಟ್ಟು ಹೋಗಬಹುದು ಯುವ ಜನರು ಹುಚ್ಚು ಹತ್ತಿಸುವಂತಹ ಸಾಹಸಮಯ ಪ್ರೋತ್ಸಾಹದಾಯಕ ಕತೆಗಳನ್ನು ಕೇಳಿದಾಗ ತಾವೂ ಅವರಂತೆ ಆಗಬೇಕೆಂದು ಬಯಸುತ್ತಾರೆ. ಇಷ್ಟ ಪಟ್ಟ ಕೆಲಸವನ್ನು…

Read More

ಚಡಚಣ: ಕನ್ನಡ ಸಾಹಿತ್ಯ ಲೋಕದ ‘ಹಾಸ್ಯಬ್ರಹ್ಮ’ ಎಂದು ಚಿರಪರಿಚಿತರಾದ ಡಾ. ಎಂ. ಎಸ್. ಸುಂಕಾಪುರ ಅವರ ಸಾಹಿತ್ಯ ಶೃಂಗಾರ ರಸದ ಜೊತೆಗೆ ಹಾಸ್ಯ ರಸ ಸೇರಿಸಿ ನವರಸ ಜೀವಂತಿಕೆ ಹಾಗೂ ಜೀವನಾನುಭವದ ಸಾಹಿತ್ಯವಾಗಿದೆ. ನಗುವೇ ಜೀವನದ ಜೀವಾಳ. ನಗೆ ಇಲ್ಲದ ಮನೆ ದೇವರಿಲ್ಲದ ಗುಡಿಯಂತೆ ಎಂದರಿತ ಪ್ರತಿಯೊಬ್ಬರೂ ಹಾಸ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಕಲಹಗಳಿಗೆ ಅವಕಾಶವೇ ಇರುವುದಿಲ್ಲ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಡಾ.ಎಂ.ಎಸ್.ಮಾಗಣಗೇರಿ ಅಭಿಪ್ರಾಯಪಟ್ಟರು.ಡಾ.ಎಂ.ಎಸ್.ಸುಂಕಾಪುರ ಅವರ ೧೦೩ನೇ ಜನ್ಮ ದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಂಕಾಪುರರು ನಗೆ-ಹೊಗೆ, ಗಪ್-ಚಿಪ್, ತಲೆಹರಟೆಗಳು, ನಗೆಗಾರ ನಯಸೇನ, ಜೀವನದಲ್ಲಿ ಹಾಸ್ಯ ಮೊದಲಾದ ಹಾಸ್ಯ ಕೃತಿಗಳನ್ನು ರಚಿಸುವುದರ ಜೊತೆಗೆ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಸಂಶೋಧನಾ ಮಹಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದ ಮೊದಲಿಗರು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕ ಎಂ.ಎ.ಜನವಾಡ, ಸುಂಕಾಪುರ ಅವರ ಮನೆತನವೆ ಜನಪದಗಳ ತವರಾಗಿತ್ತು. ಹೀಗಾಗಿ ಇವರಿಗೆ ಜನಪದ ಕಲೆಗಳ…

Read More

ವಿಜಯಪುರ: ದೇಶದ ಬೆನ್ನೆಲುಬಾಗಿರುವ ರೈತರಿಗೆ ಹೆಚ್ಚಿನ ಸಹಕಾರ ಮತ್ತು ಸುಸ್ತಿದಾರರಿಗೆ ಸಾಲದ ಬಗ್ಗೆ ಮಾಹಿತಿ ನೀಡಬೇಕೆಂದು ವಿಜಯಪುರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಂ ಎಸ್ ಪಾಟೀಲ್ ಕರೆ ನೀಡಿದರು.ಬುಧವಾರ ನಗರದ ಡಿಸಿಸಿ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ. ನಿ.. ಬೆಂಗಳೂರ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ನಿ. ವಿಜಯಪುರ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ..ಮತ್ತು ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ಮತ್ತು ಬಸವನ ಬಾಗೇವಾಡಿ ತಾಲೂಕಿನ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಆಪರೇಟರ್ ಗಳ ಒಂದು ದಿನದ ವಿಶೇಷ ತರಬೇತಿ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಜನತೆಗೆ ಸಹಕಾರ ಸಂಘಗಳಿಂದ ಹೆಚ್ಚಿನ ಸೌಲಭ್ಯಗಳು ದೊರೆಯುವಂತೆ ಕಾರ್ಯನಿರ್ವಹಿಸಲು ತರಬೇತು ದಾರರಿಗೆ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಚಂದ್ರಶೇಖರ್ ಗೌಡ ಪಾಟೀಲ(ಮನಗೂಳಿ ) ಮಾತನಾಡಿದರು.ಸಹಕಾರಿ ಯೂನಿಯನ್ ನಿರ್ದೇಶಕ ಶಿವನಗೌಡ ಎಸ್…

Read More

ಮಹಾರಾಷ್ಟ್ರ ಸ್ಪೀಕರ್ ತೀರ್ಪು | ಶಾಸಕರ ಅನರ್ಹತೆ ತಿರಸ್ಕಾರ | ಉದ್ಧವ್ ಠಾಕ್ರೆಗೆ ಮುಖಭಂಗ ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ತೀರ್ಪು ನೀಡಿದ್ದು, ಮಾಜಿ ಸಿಎಂ ಮತ್ತು ಯುಬಿಟಿ ಬಣದ ನಾಯಕ ಉದ್ಧವ್ ಠಾಕ್ರೆ ಅವರಿಗೆ ಏಕನಾಥ್ ಶಿಂಧೆ ಅವರನ್ನು ತೆಗೆದುಹಾಕುವ ಅಧಿಕಾರ ಇಲ್ಲ ಎಂದು ಹೇಳಿದ್ದಾರೆ.2022 ರಲ್ಲಿ ಶಿವಸೇನಾದಲ್ಲಿ ಒಡಕುವುಂಟಾಗಿ ಎರಡು ಬಣಗಳಾಗಿ ವಿಭಜನೆ ಆಗಿ 18 ತಿಂಗಳ ನಂತರ ಇಂದು ಸಂಜೆ ಸ್ಪೀಕರ್ ರಾಹುಲ್ ಅವರು ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸಿದ್ದು, ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎಂದು ಹೇಳಿದ್ದಾರೆ. ಅಲ್ಲದೆ ಸಿಎಂ ಶಿಂಧೆ ಮತ್ತು ಅವರ ಬೆಂಬಲಿಗ ಶಾಸಕರನ್ನು ಅನರ್ಹಗೊಳಿಸಬೇಕೆಂಬ ಠಾಕ್ರೆ ಬಣದ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.ಸಿಎಂ ಏಕನಾಥ್ ಶಿಂಧೆ ಸೇರಿದಂತೆ 16 ಶಿವಸೇನೆ ಶಾಸಕರ ಅನರ್ಹತೆಯ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿರುವ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು, ನಾಯಕತ್ವದ ರಚನೆಯನ್ನು…

Read More

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ. ಎಂ. ಎಸ್. ಮದಭಾವಿ ಅವರಿಗೆ ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿಮಠ ಈ ವರ್ಷದ ಬಸವಭೂಷಣ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ.ಉತ್ತರ ಕರ್ನಾಟಕದ ಗಡಿಯಲ್ಲಿರುವ ಶ್ರೀ ಮೋಟಗಿಮಠವು ಶತಮಾನಗಳಿಂದ ನಾಡು, ನುಡಿ, ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸುತ್ತ ಬಂದಿದೆ. ಪ್ರತಿವರ್ಷ ಶರಣಸಂಸ್ಕೃತಿ ಗಡಿನಾಡ ನುಡಿಹಬ್ಬ ಆಚರಿಸುವ ಈ ಮಠ ಗಡಿಯಲ್ಲಿ ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿದೆ. ಭಾಷಾ ಭಾವೈಕ್ಯತೆ, ಧರ್ಮ, ಸಮನ್ವಯತೆ, ಕನ್ನಡ ಜಾಗೃತಿಯ ಮೂಲಧ್ಯೇಯ ಹೊಂದಿದೆ.ಜನೇವರಿ 24 ರಂದು ಬುಧವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ. ಎಂ. ಎಸ್. ಮದಭಾವಿ ಅವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಎಂ. ಎಸ್. ಮದಭಾವಿ ಅವರಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ನಿರ್ದೇಶಕ ಕೃಷ್ಣ ಕೊಲ್ಹಾರಕುಲಕರ್ಣಿ ಮತ್ತು ಸಿಬ್ಬಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ವಿಜಯಪುರ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ವಿಜಯಪುರ ನಗರವು ಈಗ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಅಲ್ಲದೇ, ಮಹಾನಗರಪಾಲಿಕೆ ಸುಮಾರು 10ಕಿ.ಮೀ ವ್ಯಾಪ್ತಿ ಒಳಗೊಂಡಿದೆ. ವಿಜಯಪುರ ನಗರದ ಜನಸಂಖ್ಯೆ ಸುಮಾರು 5 ಲಕ್ಷ ತಲುಪಿದೆ. ನಗರದಲ್ಲಿ ನಾನಾ ಸಮುದಾಯದ ಜನರು ಶವಗಳನ್ನು ಹೂಳುವ ಬದಲಾಗಿ ದಹನ ಮಾಡುವ ಸಂಪ್ರದಾಯವಿದೆ. ಈ ಸಮುದಾಯಗಳ ಜನ ನಿಧನರಾದವರ ಅಂತ್ಯಕ್ರಿಯೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ಉಪಯೋಗಿಸಬೇಕಾಗುತ್ತದೆ. ಇದರಿಂದ ಪರಿಸರ ಮಾಲಿನ್ಯದ ಜೊತೆಗೆ ಪರಿಸರ ನಾಶ ಉಂಟಾಗುತ್ತದೆ. ಅಲ್ಲದೇ ಬಡವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಿದರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಅಲ್ಲದೇ, ಪರಿಸರ ಹಾನಿಯನ್ನೂ ತಡೆಗಟ್ಟಬಹುದಾಗಿದೆ. ಆದ್ದರಿಂದ ತಾವು ಕ್ರೀಯಾ ಯೋಜನೆಯೊಂದನ್ನು ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸುನೀಲಗೌಡ ಪಾಟೀಲ ಸೂಚನೆ ನೀಡಿದ್ದಾರೆ.

Read More