ತಿಕೋಟಾ: ಅಖಂಡ ಭಾರತ ದೇಶದೆಲ್ಲೆಡೆ ಆರು ಸಾವಿರಕ್ಕೂ ಹೆಚ್ಚು ಲಿಂಗಗಳನ್ನು ಸ್ಥಾಪನೆ ಮಾಡಿ ಜನರಲ್ಲಿ ಭಕ್ತಿ ಭಾವ ಹಾಗೂ ದೇಶ ಭಕ್ತಿ ಮೂಡಿಸುವ ಕಾರ್ಯ ಮಾಡುತ್ತಾ ಹಲವು ಪವಾಡಗಳನ್ನು ಮಾಡಿದ ಕೀರ್ತಿ ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾಮಲ್ಲಿನಾಥ ಮಹಾರಾಜರಿಗೆ ಸಲ್ಲುತ್ತದೆ ಎಂದು ಪ್ರವಚನಕಾರ ಬಾಬುರಾವ ಮಹಾರಾಜ ಹೇಳಿದರು.
ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದ ಶ್ರೀ ಮುರುಘೇಂದ್ರ ಶಿವಯೋಗಿಗಳ ಶತಮಾನೋತ್ಸವ ಮೂರ್ತಿ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತಾನಾಡಿದರು.
ಜನರಲ್ಲಿ ದೇಶಾಭಿಮಾನ ಬೆಳೆಯಬೇಕು. ಎಲ್ಲ ಭಕ್ತರು ಪರಿಶುದ್ಧವಾದ ಜೀವನ ನಡೆಸಬೇಕು. ಶಾಂತಿ ಸಮಾಧಾನ ಪಡೆದುಕೊಳ್ಳಬೇಕು. ಹಗಲು ರಾತ್ರಿ ಎನ್ನದೇ ದೇಶ ಸೇವೆಗೆ ತನ್ನ ಜೀವವನ್ನೆ ಮುಡುಪಾಗಿಟ್ಟ ಸೈನಿಕರನ್ನು ಕಂಡಾಗ, ಬಿಸಿಲು ಗಾಳಿ ಎನ್ನದೆ ಎಲ್ಲರಿಗೂ ಅನ್ನ ನೀಡುವ ಶ್ರಮ ಜೀವಿ ರೈತರನ್ನು ಕಂಡಾಗ, ಅಕ್ಷರ ಕಲಿಸಿ ಜ್ಞಾನ ನೀಡುವ ಶಿಕ್ಷಕರನ್ನು ಕಂಡಾಗ ಎಲ್ಲರ ಮನ ಮೀಡಿಯಬೇಕೆಂಬುದು ಹವಾ ಮಲ್ಲಿನಾಥ ಮಹಾರಾಜರ ಆಶಯವಾಗಿದೆ ಎಂದರು.
ಗ್ರಾಮಗಳಲ್ಲಿರುವ ಜನರ ಎಲ್ಲ ದುಶ್ಚಟಗಳನ್ನು ದೂರ ಮಾಡಿ ಪ್ರತಿ ಗ್ರಾಮಗಳಲ್ಲಿ ಲಿಂಗ ಸ್ಥಾಪನೆ ಮಾಡಿ ಎಲ್ಲರೂ ಸದ್ಬಕ್ತರಾಗಬೇಕು. ದೇಶಾಭಿಮಾನ ಬೆಳಿಸಿಕೊಂಡು ದೇಶದ ಅಭಿವೃದ್ಧಿಗಾಗಿ ಕೈ ಜೋಡಿಸಬೇಕೆಂದು ಮಲ್ಲಿನಾಥ ಮುತ್ಯಾರ ಆಶಯವಾಗಿದೆ ಎಂದರು.
ಹರಿದು ಬಂದ ಭಕ್ತ ಸಾಗರ: ಈ ಭಾಗಕ್ಕೆ ಶ್ರೀ ಹವಾ ಮಲ್ಲಿನಾಥ ಮಹಾರಾಜರು ಆಗಮಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತ ಸಮೂಹ ಆಗಮಿಸಿತು. ಬಾಬಾನಗರ ಗ್ರಾಮ ಹಾಗೂ ತಿಕೋಟಾ ಪಟ್ಟಣದಲ್ಲಿರುವ ಲಿಂಗಾಶ್ರಮಕ್ಕೆ ತಡರಾತ್ರಿಯಾಗಿ ಭೇಟಿ ನೀಡಿದರೂ ಸರದಿ ಸಾಲಿನಲ್ಲಿ ನಿಂತುಕೊಂಡು ಮಹಾರಾಜರ ಆಶಿರ್ವಾದ ಪಡೆದರು.
ಈ ಸಂದರ್ಭದಲ್ಲಿ ಶ್ರಿ ವಿಜಯಕುಮಾರ ಸ್ವಾಮೀಜಿ, ಎಂ.ಆರ್.ತುಂಗಳ, ಸುಭಾಸಗೌಡ ಪಾಟೀಲ,ಶಿವಪುತ್ರ ಅವಟಿ, ಮಲ್ಲಿಕಾರ್ಜುನ ಕಣಬೂರ, ಸದಾಶಿವ ಮಂಗಸೂಳಿ, ಬಾಬು ಪರೀಟ, ಗುಂಡು ನಾವಿ, ಎಂ.ಎಸ್.ಬೂಸಗೊಂಡ, ಸೋಮಶೇಖರ್ ಜತ್ತಿ, ರಾಜು ಚೌಧರಿ, ಧರೇಪ್ಪ ರೆಬಿನಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

