ವಿಜಯಪುರ: ಇತ್ತೀಚಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಕಾಂ ಎರಡನೇ ಸೆಮಿಸ್ಟರ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹುಣಶ್ಯಾಳ ಜಿಲ್ಲಾ ಪಂಚಾಯತಿ ಸೇವಾ ಆಕಾಂಕ್ಷಿ ಬಂಗಾರೆಮ್ಮ ಮಾನಪ್ಪ ದೊಡಮನಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾದ ವರದಿ ವೃತ್ತಪತ್ರಿಕೆಗಳಲ್ಲಿ ಬಂದ ವಿಷಯ ಪ್ರಸ್ತಾಪಿಸಿ, ಇದರಿಂದ ಸಮಾಜ ಸುಶಿಕ್ಷಿತದಿಂದ ಅಶಿಕ್ಷಿತದ ಕಡೆಗೆ ಸಾಗುತ್ತದೆ, ಇದು ಅಕ್ಷಮ್ಯ ಎಂದರು. ಇಂತಹ ಘಟನೆಗಳಿಂದ ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸಿ, ದೂರದ ಊರುಗಳಿಂದ ಪ್ರಯಾಣಿಸಿ, ಸರಿಯಾಗಿ ಊಟ, ನಿದ್ರೆ ಇಲ್ಲದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಆತ್ಮವಿಶ್ವಾಸ ಕುಂದಿಸುತ್ತದೆ.
ಎಸ್.ಎಸ್.ಎಲ್.ಸಿ ಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ವರೆಗೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವ ವಿಷಯ ಇತ್ತೀಚಿಗೆ ಸಾಮಾನ್ಯವಾಗಿವೆ. ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲವಾಗುತ್ತದೆ ಹಾಗೂ ಪ್ರಾಮಾಣಿಕ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ, ಇಂತಹ ಘಟನೆಗಳಿಗೆ ಕಾರಣರಾದ ವಿಶ್ವವಿದ್ಯಾಲಯ ಹಾಗೂ ಪರೀಕ್ಷಾ ಮಂಡಳಿಗಳ ಮೇಲುಸ್ತುವಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು.
ನಕಲಿ ಅಭ್ಯರ್ಥಿಗಳ ಹಾಜರಿ, ಉತ್ತರ ಪತ್ರಿಕೆಗಳ ನಕಲು, ದಾಖಲೆಗಳನ್ನು ತಿರುಚುವುದು, ಮೆರಿಟ್ ಪಟ್ಟಿ ಸಿದ್ಧಪಡಿಸುವಲ್ಲಿ ಅಕ್ರಮ ಎಸಗುವುದು, ಉದ್ದೇಶಪೂರ್ವಕವಾಗಿ ಭದ್ರತಾ ವ್ಯವಸ್ಥೆ ಉಲ್ಲಂಘಿಸುವುದು, ಪರೀಕ್ಷಾರ್ಥಿಗಳಿಗೆ ಸೀಟು ನಿಗದಿಪಡಿಸುವಲ್ಲಿ ಅಕ್ರಮ ಎಸಗುವುದು, ಉದ್ದೇಶಪೂರ್ವಕವಾಗಿ ನಿಯಮಗಳನ್ನು ಉಲ್ಲಂಘಿಸುವ ಕ್ರಮವನ್ನು ಪರೀಕ್ಷಾ ಅಕ್ರಮಗಳೆಂದು ಹೊಸ ಮಸೂದೆಯಡಿ ಪರಿಗಣಿಸಲಾಗುತ್ತದೆ. ಈ ಕುರಿತ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದೆ. ‘ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ ೨೦೨೪’ಯಲ್ಲಿ ೨೦ ಪರೀಕ್ಷಾ ಅಕ್ರಮಗಳನ್ನು ಉಲ್ಲೇಖಿಸಲಾಗಿದೆ, ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಪ್ರಶ್ನೆ ಪತ್ರಿಕೆ ಸೋರಿಕೆ ಗಂಭೀರವಾಗಿ ಪರಿಗಣಿಸಿ :ಬಂಗಾರೆಮ್ಮ
Related Posts
Add A Comment

