ವಿಜಯಪುರ: ಗುರು ಲಿಂಗ ಜಂಗಮ ಸೇವೆಗಳ ಮೂಲಕ ಕಾಯಕದ ಮಹತ್ವವನ್ನು ಸಾರಿದ ಕೀರ್ತಿ ೧೨ನೇ ಶತಮಾನದ ಶರಣರಿಗೆ ಸಲ್ಲುತ್ತದೆ. ಅನುಭವ ಮಂಟಪ ೧೨ನೇ ಶತಮಾನದ ನಿಜವಾದ ಸಂಸತ್ತು ಎಂದು ಜಿಲ್ಲಾ ಕೇಂದ್ರ ಕಾರಾಗ್ರಹದ ಅಧೀಕ್ಷಕ ಡಾ.ಆಯ್ ಜಿ ಮ್ಯಾಗೇರಿ ಅಭಿಪ್ರಾಯಪಟ್ಟರು.
ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಹಾಗೂ ನಗರ ಘಟಕ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ದತ್ತಿನಿಧಿ ಕಾಯ೯ಕ್ರಮದಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾಯ೯ಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಸತ್ಯ, ಶುದ್ಧ ಕಾಯಕದಿಂದ ಮಾಡಿದ ನಿಜವಾದ ಭಕ್ತಿ ಮಾತ್ರ ಶಿವಲಿಂಗಕ್ಕೆ ಸಲ್ಲುತ್ತದೆ ಎಂದರು.
ದತ್ತಿನಿಧಿ ಕಾಯ೯ಕ್ರಮದ ನಿಮಿತ್ಯ ಶ್ರೀಮತಿ ಈರವ್ವ ಮಲ್ಲಪ್ಪ ಹಣಮಶೆಟ್ಟಿ, ದತ್ತಿ ದಾನಿಗಳು ಶ್ರೀ ಎಸ್.ಎಮ್ ಹಣಮಶೆಟ್ಟಿ. “ಕಾಯಕಯೋಗಿ ನುಲಿಯ ಚಂದಯ್ಯ” ನವರ ವಿಷಯದ ಕುರಿತು ಜಯಶ್ರೀ ಹಿರೇಮಠರವರು “ಉಪನ್ಯಾಸ ನೀಡುತ್ತಾ, ವಚನ ಸಾಹಿತ್ಯದ ಈ ಕಾಲಘಟ್ಟ ಕಾಯಕ ದಾಸೋಹಕ್ಕೆ ಹೆಸರುವಾಸಿಯಾದದ್ದು. ಇಂತಹ ಕಾಲದಲ್ಲಿ ವಿಜಯಪುರ ಜಿಲ್ಲೆಯ ಶಿವಣಗಿಯ ಶ್ರೇಷ್ಠ ಕಾಯಕ ಶರಣರಾದ ನುಲಿಯ ಚಂದಯ್ಯನವರ ಕಾಯಕದ ಮಹತ್ವವನ್ನು ಕುರಿತು ಮಾತನಾಡುತ್ತಾ, ಯಾವುದೇ ಕಾಯಕವನ್ನು ಭಾವಶುದ್ಧಿಯಿಂದ, ಅಂತಃಕರಣೆಯ ಮೂಲಕ ಮಾಡಿದಾಗ ಮಾತ್ರ ನಿಜವಾದ ಆತ್ಮದ ಉನ್ನತಿ ಸಾಧ್ಯವಾಗುತ್ತದೆ ಎನ್ನುತ್ತಾ, ನಾವು ಮಾಡಿದ ಕಾಯಕಕ್ಕೆ ಪ್ರತಿಯಾಗಿ ಹೆಚ್ಚಿನದನ್ನು ಅಪೇಕ್ಷಿಸಬಾರದು ಎಂಬುದನ್ನು ಅನೇಕ ನಿದಶ೯ನಗಳ ಮೂಲಕ ತಮ್ಮ ಉಪನ್ಯಾಸ ನೀಡಿದರು.
ಉಪನ್ಯಾಸ ಎರಡರ ದತ್ತಿ ದಿ. ಕಾಶೀನಾಥ ಸಿದ್ಧಮಲ್ಲಪ್ಪ ಇಂಗಳೇಶ್ವರ ದತ್ತಿ ದಾನಿಗಳು ಶ್ರೀ ಎಸ್.ಕೆ ಇಂಗಳೇಶ್ವರ. ಯಡಿಯೂರು ಸಿದ್ಧಲಿಂಗೇಶ್ವರರ ವಿಷಯದ ಕುರಿತು ಉಪನ್ಯಾಸ ನೀಡಿದ, ಕವಿಯಿತ್ರಿ ಸುಜಾತಾ ಹ್ಯಾಳದರವರು ಉಪನ್ಯಾಸ ನೀಡುತ್ತಾ, ೧೬ನೇ ಶತಮಾನದಲ್ಲಿ ಆಗಿ ಹೋದ ಕನ್ನಡ ನಾಡು ಕಂಡ ಅನುಭಾವಿ ಸಂತ ಶರಣರಲ್ಲಿ ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರರು ಒಬ್ಬ ಶ್ರೇಷ್ಠ ಪವಾಡ ಪುರುಷರಾಗಿದ್ದರು. ಸಿದ್ಧಲಿಂಗೇಶ್ವರರು ಚೆನ್ನಬಸವೇಶ್ವರ ಮಾಗ೯ದಶ೯ನದಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಲೋಕ ಸಂಚಾರ ಮಾಡುತ್ತಾ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಪಶ್ಚಿಮ ಘಟ್ಟಗಳಿಂದ ಅರುಣಾಚಲ ಪ್ರದೇಶದ ವರೆಗೆ ಇಡೀ ಭಾರತವನ್ನು ಸಂಚಾರ ಮಾಡಿ ಶಿವಯೋಗ, ಶಿವಭಕ್ತಿಯನ್ನು ಪ್ರಸಾರ ಮಾಡುವ ಮೂಲಕ ಸಿದ್ಧಲಿಂಗೇಶ್ವರರ ಅನೇಕ ಸಂದೇಶಗಳನ್ನು ಉಪನ್ಯಾಸದಲ್ಲಿ ತಿಳಿಸಿಕೊಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ರಾಂತ ಮುಖ್ಯಾಧ್ಯಾಪಕ ಶಾರದಾ ಐಹೊಳ್ಳಿಯವರು, ಕಾಯಕಯೋಗಿ ನುಲಿಯ ಚಂದಯ್ಯನವರ ಹಾಗೂ ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಜೀವನದ ಸಂದೇಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವತಃ ಗಳಿಸಿದ ಹಣದಿಂದ ಮಾತ್ರ ದಾಸೋಹ ಮಾಡಿದಾಗ ಅದು ಭಗವಂತನ ಪಾದಕ್ಕೆ ಸಮಪಿ೯ತವಾಗಲು ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಕುಮಾರಿ ಅನುಶ್ರೀ ಹಾಗೂ ಶ್ರೀನಿಧಿ ಬಂಡೆಯವರು ಮಾಮಿ೯ಕವಾಗಿ ವಚನ ಗಾಯನ ಮಾಡುವ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿರತೀಶಾನಂದ ಸ್ವಾಮೀಜಿಯವರು ಗುರು ಲಿಂಗ ಜಂಗಮದ ಮಹತ್ವವನ್ನು ತಿಳಿಸಿಕೊಡುತ್ತ, “ಲಿಂಗದ ಬಾಯಿ ಜಂಗಮವೆಂದು, ಹಿರಿದಾದ ಒಂದು ಮರಕ್ಕೆ ಮೂಲ ಆ ಮರದ ಬೇರು ಎನ್ನುತ್ತಾ, ವಚನ ಸಾಹಿತ್ಯ ಇಡೀ ವಿಶ್ವಕ್ಕೆ ಮಾದರಿಯಾದ ಸಾಹಿತ್ಯ”, ಎಂದು ಹೇಳುತ್ತಾ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ, ಡಾ ವ್ಹಿ.ಡಿ ಐಹೊಳ್ಳಿ, ಶಶಿಕಲಾ ಆರ್ ನಾಯ್ಕೋಡಿ, ಪ್ರಭು ಈರಪ್ಪ ಅಳ್ಳಗಿ, ಜಿಲ್ಲಾ ದತ್ತಿ ಸಂಚಾಲಕರಾದ ರಾಜೇಸಾಬ ಶಿವನಗುತ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ, ಸಾಹಿತಿಗಳಾದ ಶಂಕರ ಬೈಚಬಾಳ, ಸಿದ್ದಾರಾಮ ಬಿರಾದಾರ, ವಿದ್ಯಾವತಿ ಅಂಕಲಗಿ, ಅನ್ನಪೂರ್ಣ ಬೆಳ್ಳೆಣ್ಣವರ, ವಿಜಯಲಕ್ಷ್ಮಿ ಹಳಕಟ್ಟಿ, ಕಮಲಾ ಮುರಾಳ, ಜಿ.ಎಸ್ ಬಳ್ಳೂರ, ಶ್ರೀಶೈಲ ಬಿರಾದಾರ, ಸಂತೋಷಕುಮಾರ ಬಂಡೆ, ಅಹ್ಮದ್ ವಾಲೀಕಾರ, ಅನಸೂಯ ಮಜಗಿ, ಗಂಗಮ್ಮ ರಡ್ಡಿ, ಬಿ.ವಿ. ಪಟ್ಟಣಶೆಟ್ಟಿ, ಯುವರಾಜ್ ಚೋಳಕೆ, ಎ.ಎಚ್ ಕಜ೯ಗಿ, ಅಲ್ತಾಫ್ ಮದಭಾವಿ, ಹಾಜರಿದ್ದರು.
ಗೌರವ ಕಾರ್ಯದರ್ಶಿ ಸುಭಾಸ ಕನ್ನೂರರವರು ಸ್ವಾಗತಿಸಿ ಪರಿಚಯಿಸಿದರು. ಡಾ ಮಾಧವ ಎಚ್ ಗುಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಸುನಂದಾ ಪ್ರಾಥಿ೯ಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

