ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ದೇವಸ್ಥಾನದ ಮೂಲಜೀಣೋದ್ಧಾರಕ ಲಿಂ. ಮಲ್ಲಪ್ಪ ಸಿಂಹಾಸನ ಪ್ರತಿಮೆ ಸಮೀಪವಿರುವ ಶುದ್ಧ ನೀರಿನ ಘಟಕ ಸೋಮವಾರ ಪುನಾರಂಭಗೊಂಡಿತ್ತು.
ಶುದ್ಧ ನೀರಿನ ಘಟಕಕ್ಕೆ ಚಾಲನೆ ನೀಡಿದ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡಿರುವ ಈ ಶುದ್ಧ ನೀರಿನ ಘಟಕ ಬಹುದಿನಗಳಿಂದ ದುರಸ್ತಿಯಾಗದೇ ಹಾಗೇ ಉಳಿದುಕೊಂಡಿತ್ತು. ನಮ್ಮ ಸಮಿತಿಯಿಂದ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡುವಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿದ ಅಽಕಾರಿಗಳು ಈ ಶುದ್ಧ ನೀರಿನ ಘಟಕವನ್ನು ದುರಸ್ತಿಗೊಳಿಸಿ ಪುನಾರಂಭ ಮಾಡುತ್ತಿರುವದು ಒಳ್ಳೆಯ ಕಾರ್ಯ. ಬಿರುಬಿಸಿಲಿನಿಂದಾಗಿ ಶುದ್ಧ ನೀರು ತುಂಬಾ ಅಗತ್ಯವಿದೆ. ಪಟ್ಟಣಕ್ಕೆ ನಾನಾ ಗ್ರಾಮಗಳಿಂದ ಆಗಮಿಸುತ್ತಾರೆ. ಪಟ್ಟಣ ಸೇರಿದಂತೆ ಪಟ್ಟಣಕ್ಕೆ ಆಗಮಿಸುವ ಜನರಿಗೆ ಶುದ್ಧ ನೀರು ತುಂಬಾ ಅಗತ್ಯವಿದೆ. ಮಾರುಕಟ್ಟೆ ಪ್ರದೇಶದಲ್ಲಿರುವ ಈ ಶುದ್ಧ ನೀರಿನ ಘಟಕದಿಂದ ತುಂಬಾ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದುರಸ್ತಿ ಮಾಡಿ ಜನರಿಗೆ ಶುದ್ಧ ನೀರು ಒದಗಿಸಲು ಮುಂದಾಗಿರುವದು ಶ್ಲಾಘನೀಯ ಎಂದರು.
ಕಳೆದ ವರ್ಷಕ್ಕಿಂತ ಈ ಸಲ ಬೇಸಿಗೆ ಬಿಸಿಲು ಪ್ರಖರತೆಯಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಶುದ್ಧ ನೀರು ತುಂಬಾ ಅಗತ್ಯವಿದೆ. ಜನರು ನೀರನ್ನು ಪೋಲಾಗದಂತೆ ಬಳಕೆ ಮಾಡುವುದು ತುಂಬಾ ಅಗತ್ಯವಿದೆ. ಜನತೆ ಶುದ್ಧ ನೀರಿನ ಘಟಕದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿಯ ಉಪಾಧ್ಯಕ್ಷ ಬಸವರಾಜ ಹಾರಿವಾಳ, ಬಸವೇಶ್ವರ ಸೇವಾ ಸಮಿತಿಯ ಕೋಶಾಧ್ಯಕ್ಷ ಎಂ.ಜಿ.ಆದಿಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ, ತಾಪಂ ಮಾಜಿ ಸದಸ್ಯ ನಾಗನಗೌಡ ಬಿರಾದಾರ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಸಂಗಣ್ಣ ಕಲ್ಲೂರ, ಸಂಕನಗೌಡ ಪಾಟೀಲ, ಚನ್ನು ಇಂಡಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಭಿಯಂತರ ಡಿ.ಎಸ್.ಹಿರೇಮಠ, ವಿಠ್ಠಲ ಸುಲಾಖೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

