ವಿಜಯಪುರ: 70 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ನವರು ತಾವು ಎಷ್ಟು ಸ್ವಚ್ಚವಾಗಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಂಸದ ರಮೇಶ ಜಿಗಣಗಿ ಖಾರವಾಗಿ ಪ್ರಶ್ನಿಸಿದರು.
ಸೋಮವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿವಿಧ ಮೋರ್ಚಾಗಳ ಸಭೆಯನ್ನುದ್ದೇಶಿ ಮಾತನಾಡಿ, ಮುಸ್ಲಿಂ, ದಲಿತ, ಹಿಂದುಳಿದವರ ಮತ ಪಡೆದು ಅವರಿಗೆ ಏನು ಮಾಡಿದರು. ಅವರಿಗೆ ಒಂದು ಮನೆಯನ್ನಾದರೂ ಕಟ್ಟಿಸಿಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು. ಕೇವಲ ಅವರ ಮತ ಪಡೆದು ತಮ್ಮ ಮನೆ ತುಂಬಿಸಿಕೊಟ್ಟಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ನವರು ಎಷ್ಟೇ ಪ್ರಯತ್ನಿಸಿದರೂ 2 ರಿಂ3 ಸ್ಥಾನ ಗಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರಸ್ ಸರ್ಕಾರ ಇದ್ದರೂ, ಜನತೆ ನಮ್ಮ ಪರ ಇದ್ದಾರೆ. ದೇಶದ ರಕ್ಷಣೆ ಪ್ರದಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ದೇಶದ ಜನತೆಗೆ ಮನವರಿಕೆ ಆಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ ಮಾತನಾಡಿ, ಹಿಂದಿನ ಎಲ್ಲಾ ಸರ್ಕಾರಗಳು ಕೇವಲ ಭ್ರಷ್ಡಚಾರದಲ್ಲಿ ಮುಳುಗಿದ್ದವು. ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಎಂ, ಡಿಸಿಎಂ ಅವರು ಆಡಳಿತಕ್ಕೆ ಬರುವಾಗ ಬಳೀ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಬರಗಾಲದಂತ ಈ ಸಂದರ್ಭದಲ್ಲಿ ರಾಜ್ಯದ ಜನರು ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳಿಗೆ ನೆರವಿಗೆ ಬರುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಕೇವಲ ಒಂದು ಕೋಮು ಓಲೈಕೆ ಮಾಡಿ ಅಧಿಕಾರಕ್ಕೆ ಬರುವದೇ ಅವರ ಗುರಿ. ರಾಷ್ಟ್ರದ ಆರ್ಥಿಕ ರಕ್ಷಣೆ ಅವರಿಗೆ ಬೇಕಿಲ್ಲ. ಕಳೆದ 65 ವರ್ಷಗಳಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿದರು. ಆದರೆ ಈಗ ಪ್ರಧಾನಿ ಮೋದಿ ಅವರ 10 ವರ್ಷಗಳ ಆಡಳಿತದಲ್ಲಿ ಯಾವದೇ ದೇಶದವರು ನಮ್ಮ ತಂಟೆಗೆ ಬಂದರೆ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಕಾಲು ಕೆದರಿ ಜಗಳಕ್ಕೆ ಬಂದ ದೇಶಗಳು ದಿವಾಳಿಯಾಗಿವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿದರು.
ಪ್ರಭಾರಿ ರಾಜೇಖರ ಶೀಲವಂತ, ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ, ವಿಭಾಗ ಸಂಘಟನಾ ಪ್ರದಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಓಬಿಸಿ ಮೋರ್ಚಾ ಅಧ್ಯಕ್ಷೆ ವಿವೇಕಾನಂದ ಡಬ್ಬಿ, ಪ್ರಧಾನ ಕಾರ್ಯದರ್ಶಿ ಮುಳುಗೌಡ ಪಾಟೀಲ, ಸಾಬು ಮಾಶ್ಯಾಳ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ , ಯುವಮೋರ್ಚಾ ಅಧ್ಯಕ್ಷೆ ಬಸವರಾಜ ಹೂಗಾರ, ಹಿಂದುಳಿ ವರ್ಗ ಅಧ್ಯಕ್ಷ ಸಿದ್ದು ಬುಳ್ಳಾ, ರೈತ ಮೋರ್ಚಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಎಸ್.ಸಿ.ಮೋರ್ಚಾ ಅಧ್ಯಕ್ಷ ರವಿಕಾಂತ ವಗ್ಗೆ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೀತಲಕುಮಾರ ಓಗೆ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

