Author: editor.udayarashmi@gmail.com

ಪಾಲಿಕೆಯ ಆಸ್ತಿ ಲೀಜ್ ಅಥವಾ ಮಾರಾಟಕ್ಕೆ ಶಾಸಕರು & ಪಾಲಿಕೆ ಸರ್ವ ಸದಸ್ಯರ ಒಪ್ಪಿಗೆ ಅಗತ್ಯ | ಶಾಸಕ ಯತ್ನಾಳ ಅಭಿಮತ ವಿಜಯಪುರ: ಮಹಾನಗರ ಪಾಲಿಕೆ ಒಡೆತನದಲ್ಲಿರುವ ಆಸ್ತಿಗಳನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಹಾಗೂ ಸರ್ಕಾರಿ ವಿವಿಧ ಯೋಜನೆಗಳಿಗಾಗಿ ಕಾಯ್ದಿರಿಸಬೇಕು ಎಂದು ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಮಹಾನಗರ ಪಾಲಿಕೆ ಒಡೆತನದ ಕೊಟ್ಯಂತರ ಬೆಲೆ ಬಾಳುವ ನಗರ ಮಧ್ಯಭಾಗದಲ್ಲಿರುವ ಅಥವಾ ಹೊರ ಭಾಗದಲ್ಲಿರುವ ಪಾಲಿಕೆ ಆಸ್ತಿಗಳನ್ನು ಸಾರ್ವಜನಿಕರ ಉದ್ದೇಶಕ್ಕಾಗಿ ಹಾಗೂ ಸರ್ಕಾರದ ವಿವಿಧ ಯೋಜನೆಗಳಾದ ವಸತಿ, ಸಮುದಾಯ ಭವನಗಳು, ಒಳಾಂಗಣ ಕ್ರೀಡಾಂಗಣ, ಮಳಿಗೆಗಳು, ನಿರ್ಗತಿಕರ ಭವನ, ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು ಮತ್ತಿತರೆ ಉದ್ದೇಶಕ್ಕಾಗಿ ಕಾಯ್ದಿರಿಸಬೇಕಾದುದ್ದನ್ನು, ಕೆಲ ಅಧಿಕಾರಿಗಳು ಲೀಜ್ ನೆಪದಲ್ಲಿ ಖಾಸಗಿ ವ್ಯಕ್ತಿಗಳಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರದ ಬಗ್ಗೆ ತಿಳಿದು ಬಂದಿದೆ.ಒಂದು ವೇಳೆ ಖಾಸಗಿ ವ್ಯಕ್ತಿಗಳಿಗೆ ಅಥವಾ ನಕಲಿ ಸಂಸ್ಥೆಗಳಿಗೆ ಲೀಜ್ ನೆಪದಲ್ಲಿ ಮಾರಾಟ…

Read More

ಮೋರಟಗಿ: ಸಾರ್ವಜನಿಕರು ಆನೇಕಾಲು ಮಾತ್ರೆ ತಿರಸ್ಕರಿಸುವುದರಿಂದ ಸಿಂದಗಿ ಹಾಗೂ ಆಲಮೇಲ ತಾಲೂಕಿನಲ್ಲೇ ಮೋರಟಗಿ ಸಮುದಾಯ ಆರೋಗ್ಯ ಕೇಂದ್ರದ ಹಳ್ಳಿಗಳಲ್ಲಿ ಆನೆಕಾಲು ರೋಗದ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿವೆ. ರೋಗ ಮುಕ್ತ ಗ್ರಾಮ ನಿರ್ಮಾಣಕ್ಕಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಮುದಾಯ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ, ಶಶಿಕಾಂತ ಬಾಗೇವಾಡಿ ಹೇಳಿದರು.ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆನೆಕಾಲು ರೋಗ ಮುಕ್ತಕ್ಕಾಗಿ ಕರೆದ ಸಾಮೂಹಿಕ ಔಷದಿ ಸೇವನೆ ಜಾಗೃತಿ ಕಾರ್ಯಕ್ರಮದ ಸಭೆಯಲ್ಲಿಸಭೆಯಲ್ಲಿ ಅವರು ಮಾತನಾಡಿದರು.ಆನೆಕಾಲು ರೋಗ ಇದೊಂದು ಸೋಂಕಿತ ಕ್ಯೂಲೆಕ್ಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಸಾಂಕ್ರಾಮಿಕವಾಗಿ ಹರಡುವ ರೋಗವಾಗಿದೆ, ಆ ಸೊಳ್ಳೆಯಿಂದ ಕಚ್ಚಿದರೆ ಒಬ್ಬರಿಂದ ಒಬ್ಬರಿಗೆ ರೋಗ ಅಂಟಿಕೊಳ್ಳುವ ಎಲ್ಲ ಸಾಧ್ಯತೆಗಳು ಇರುತ್ತದೆ ಸಾರ್ವಜನಿಕರು ಮುಂಜಾಗ್ರತವಾಗಿ ಮಾತ್ರೆ ತೆಗೆದುಕೊಂಡರೆ ಮಾತ್ರ ರೋಗ ಅಂಟಿಕೊಳ್ಳುವುದಿಲ್ಲ, ಮಾತ್ರೆ ತಿರಸ್ಕರಿಸಿದರೆ ಸೊಂಕಿತನಿಗೆ ಕಚ್ಚಿದ ಸೊಳ್ಳೆ ಸಾಮಾನ್ಯ ಇನ್ನೊಬ್ಬರಿಗೆ ಕಚ್ಚುವುದರಿಂದ ಆನೆಕಾಲು ರೋಗ ಉತ್ಪತ್ತಿ ಆಗುತ್ತದೆ. ಇದನ್ನು ತಡೆಗಟ್ಟುಲು ಸರಕಾರ ನಿಮ್ಮ ಮನೆ ಬಾಗಿಲಿಗೆ ಅರೋಗ್ಯ ಸಿಬ್ಬಂದಿ ಆಶಾ ಕಾರ್ಯಕರ್ತರು ಮಾತ್ರೆ ಕೊಡಲು…

Read More

ವಿಜಯಪುರ: ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರ ಪ್ರಸ್ತಾವನೆಯಂತೆ, ವಿಜಯಪುರ ಮಹಾನಗರ ಪಾಲಿಕೆಯ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀ ಭಾಗಪ್ಪ ಕನ್ನೋಳ್ಳಿ (ಸಾಮಾನ್ಯ ವರ್ಗ ಮಹಿಳೆ), ಬಸವರಾಜ ಮಾರುತಿ ಕಾಂಬಳೆ (ಪರಿಶಿಷ್ಟ ಜಾತಿ), ಸಂದೀಪ ನರಸಿಂಗ್ ಕಾಳೆ (ಹಿಂದುಳಿದ ವರ್ಗ), ಪಾರೀಸ್ ಶಿರಹಟ್ಟಿ (ಅಲ್ಪಸಂಖ್ಯಾತರ ವರ್ಗ) ಅವರನ್ನು ನೇಮಕ ಮಾಡಲಾಗಿದೆ.

Read More

ಇಂಡಿ: ಸ್ವಾಮಿ ವಿವೇಕಾನಂದರ ಜೀವನ ಮತ್ತು ವ್ಯಕ್ತಿತ್ವ ಕೋಟಿ ಕೋಟಿ ಯುವಕರಿಗೆ ಪ್ರೇರಣೆಯ ಚಿಲುಮೆಯಾಗಿದೆ. ಅವರು ಭಾರತ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಧೀಮಂತ ನಾಯಕರು. ೧೮೯೩ ರಲ್ಲಿ ಚಿಕ್ಯಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ನೀಡಿದ ಭಾಷಣ ಅವಿಸ್ಮರಣೀಯವಾಗಿದೆ ಎಂದು ಉಪನ್ಯಾಸಕ ಶಿವಾನಂದ ವಾಲಿಕಾರ ಹೇಳಿದರು.ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್, ಯುತ್ ರೆಡ್‌ಕ್ರಾಸ್ ಹಾಗೂ ಸ್ಕೌಟ್ಸ್ & ಗೈಡ್ಸ್ ಘಟಕಗಳ ಅಡಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ, ಉಪನ್ಯಾಸಕ ಶ್ರೀ.ಬಿ.ಹೆಚ್.ಬಗಲಿ,ಸಹಾಯಕ ಪ್ರಾಧ್ಯಾಪಕರಾದ ಡಾ.ಶ್ರೀಕಾಂತ ರಾಠೋಡ, ಡಾ.ವಿಶ್ವಾಸ ಕೊರವಾರ, ಡಾ.ಸುರೇಂದ್ರ ಕೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ಆನಂದ ನಡವಿನಮನಿ, ಶ್ರೀ.ಶ್ರೀಶೈಲ, ಡಾ.ಸಿ.ಎಸ್.ಬಿರಾದಾರ, ಡಾ.ಜಯಪ್ರಸಾದ ಡಿ ಶ್ರೀ.ಎಮ್.ಆರ್.ಕೋಣದೆ, ಶ್ರೀ.ಆರ್.ಪಿ.ಇಂಗನಾಳ ಮತ್ತಿತರಿದ್ದರು.

Read More

ವಿಜಯಪುರ: ವಿವೇಕಾನಂದರ ವಿಚಾರ ಧಾರೆಗಳು ವಿಶೇಷವಾಗಿ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಅವರ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ. ಭಾರತೀಯ ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ವಿಚಾರ ಧಾರೆಗಳು ಸ್ಪೂರ್ತಿದಾಯಕವಾಗಲಿವೆ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.ವಿಜಯಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ‘ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದು ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ ಎಂದು ಸ್ವಾಮಿ ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು ಎಂದು ಹೇಳಿದರು.ಶಿಕ್ಷಕ ಎಸ್.ವಿ.ದೇಶಪಾಂಡೆ ಪ್ರತಿಜ್ಞಾ ವಿಧಿ ಭೋಧಿಸಿದರು.ಈ ವೇಳೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ, ಸೇರಿದಂತೆ ಕನ್ನಡ ಹಾಗೂ ಆಂಗ್ಲ…

Read More

ಚಡಚಣ: ಸಮೀಪದ ರೇವತಗಾಂವ ಗ್ರಾಮದ ಶ್ರೀ ಸಿಂಹಗಢ ಮಹಾರಾಜರ ೫೪ ನೇ ಪುಣ್ಯಾರಾಧನೆಯ ನಿಮಿತ್ತ ಗುರುವಾರ ರಾತ್ರಿ ಎಳ್ಳ ಅಮವಾಸ್ಯೆಯ ನಿಮಿತ್ತ ರಾತ್ರಿ ೯ ಗಂಟೆಗೆ ‘ವೀಣೆ ನಿಲ್ಲಿಸುವ’ ಹಾಗೂ ಮರಾಠಾ ಭಜನಾ ಕಾರ್ಯಕ್ರಮಗಳೊಂದಿಗೆ ಪುಣ್ಯಾರಾಧನೆಯ ಕಾರ್ಯಕ್ರಮಗಳು ಪ್ರಾರಂಭವಾದವು.

Read More

ಕೊಲ್ಹಾರ: ಮಕ್ಕಳಿಗೆ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಆಗು ಹೋಗುಗಳ ಕುರಿತು ಮತ್ತು ಇಂದಿನ ರಾಜಕೀಯ ವ್ಯವಸ್ಥೆಯ ಪ್ರಚಲಿತ ವಿದ್ಯಮಾನಗಳ ವಿವರಣೆಯನ್ನು ಪಾಠದ ಜೊತೆಗೆ ಶಿಕ್ಷಕರು ಭೋದಿಸಿದರೆ ಮಕ್ಕಳು ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಾಗಲಕೋಟ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಸುರೇಶ ಹೆಗಡೆ ಹೇಳಿದರು.ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಯಲ್ಲಮ್ಮದೇವಿ ಸಿಬಿಎಸ್‌ಸಿ ಶಾಲೆಯ ಮಕ್ಕಳಿಂದ ನಡೆದ ಪಾದಪೂಜೆ ಕಾರ್ಯಕ್ರಮ, ವಿಷಯವಾರು ಹಾಗೂ ವಿಜ್ಞಾನ ತಂತ್ರಜ್ನಾನದ ಕುರಿತು ಮಕ್ಕಳು ರಚಿಸಿದ ವಸ್ತುಪ್ರದರ್ಶನದ ಉದ್ಘಾಟಣೆ ಸ್ವಾಮಿ ವಿವೇಕಾನಂದರ ಜಯಂತಿ ಯುವ ದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಜನ್ಮ ಕೊಟ್ಟ ತಂದೆ ತಾಯಿಗಳ ಋಣವನ್ನು ತೀರಿಸಲು ಯಾವ ಕಾಲಕ್ಕೂ ಸಾಧ್ಯವಾಗದಂತಹ ಋಣಾನುಬಂಧದ ಬಂಧನವಾಗಿರುತ್ತದೆ ಅವರುಗಳ ಸೇವೆಯನ್ನು ಪಾದಪೂಜೆಯಂತಹ ಸಂಸ್ಕಾರಯುತ ಸಂಸ್ಕೃತಿಯನ್ನು ತೋರಿಸಿಕೊಡುವ ಇಂಥಹ ಕಾರ್ಯಕ್ರಮಗಳಿಂದ ಸ್ವಲ್ಪ ಮಟ್ಟಿಗಾದರೂ ಜನ್ಮದಾತರಿಗೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುತ್ತದೆ. ಶಿಕ್ಷಕರು ಅನುಕೂಲಕರವಾಗುವ ವಿದ್ಯೆಯನ್ನು ಯಾರ ಮುಖಾಂತರವಾದರೂ ಕಲಿಯುವ ಸ್ವಾರ್ಥಿಗಳಾಗಿ ವಿಧ್ಯಾರ್ಥಿಗಳಿಗೆ ಭೋಧನೆ ಮಾಡುವ ಉತ್ತಮ ನಡವಳಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು…

Read More

ದೇವರಹಿಪ್ಪರಗಿ: ಯುವ ಕಾರ್ಮಿಕರು ವೃತ್ತಿಯ ಜೊತೆಗೆ ತಮ್ಮ ಆರೋಗ್ಯ ಹಾಗೂ ಕುಟುಂಬದ ಕುರಿತು ಹೆಚ್ಚು ಕಾಳಜಿ ವಹಿಸಬೇಕು ಎಂದು ಉದ್ಯಮಿ ಕೆ.ಎ.ಸಾಲಕ್ಕಿ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಯುವಕಾರ್ಮಿಕರಿಗೆ ಅಗತ್ಯ ಪರಿಕರಗಳನ್ನು ವಿತರಿಸಿ ಮಾತನಾಡಿದರು.ಕಾರ್ಮಿಕರ ಬೇಡಿಕೆಗಳ ಅನುಗುಣವಾಗಿ ಅಲ್ಟ್ರಾಟೆಕ್ ಸಿಮೆಂಟ್ ಜೊತೆಗೂಡಿ ಪ್ರತಿ ತಿಂಗಳು ಕೌಶಲ್ಯಯುತ, ಶ್ರಮಿಕ ಕಾರ್ಮಿಕರನ್ನು ಗುರುತಿಸಿ ಅವರ ದೈನಂದಿನ ಜೀವನಕ್ಕೆ ಉಪಯೋಗವಾಗಬಹುದಾದ ಪರಿಕರಗಳನ್ನು ನೀಡುವುದರ ಮೂಲಕ ಅವರ ಕಾರ್ಯತತ್ಪರತೆಯನ್ನು ಉತ್ತೇಜಿಸಲಾಗುತ್ತಿದೆ. ಇದರ ಸದುಪಯೋಗವನ್ನು ವರ್ಷದ ಎಲ್ಲ ತಿಂಗಳಲ್ಲಿ ಪಟ್ಟಣದ ಬಹುತೇಕ ಕಾರ್ಮಿಕ ಬಂಧುಗಳು ಪಡೆದುಕೊಳ್ಳುತ್ತಾರೆ ಎಂದರು.ರವಿ ವಡ್ಡೋಡಗಿ, ಈರಣ್ಣ ಸರೂರ, ಗುತ್ತಿಗೆದಾರ ರವಿ ಮೆಟಗಾರ, ಕಾರ್ಮಿಕರಾದ ಹಸನ್‌ಸಾಬ್ ಬಾಗವಾನ, ಅಬ್ದುಲ್‌ಸಾಬ್ ನದಾಫ್, ಶ್ರೀಶೈಲ ರಾಮಗೊಂಡ, ಅಲ್ಟ್ರಾಟೆಕ್ ಕಂಪನಿಯ ತಾಂತ್ರಿಕ ಸಿಬ್ಬಂದಿ ನಾಗರಾಜ್, ವಿಶ್ವನಾಥ ಸೇರಿದಂತೆ ಇತರರು ಇದ್ದರು.

Read More

ದೇವರಹಿಪ್ಪರಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ೧೬೧ನೇ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಯಿತು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಯುವರೆಡ್ ಕ್ರಾಸ್, ಸಾಂಸ್ಕೃತಿಕ ವಿಭಾಗ, ಎನ್‌ಎಸ್‌ಎಸ್ ಘಟಕ ಮತ್ತು ಐಕ್ಯೂಸಿ ವಿಬಾಗದ ಸಹಯೋಗದಲ್ಲಿ ಜರುಗಿದ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ ಮಾತನಾಡಿ, ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳು ಯುವಭಾರತವನ್ನು ನಿರ್ಮಿಸಲು ಮುಂದಾಗಬೇಕು. ವಿವೇಕಾನಂದರು ತಮ್ಮ ಚಿಂತನೆಗಳಿಂದ ಇಡೀ ಜಗತ್ತಿಗೆ ಮಾದರಿಯಾಗಿ, ಭವ್ಯ ಭಾರತದ ಹೆಸರನ್ನು ಅಜರಾಮರವಾಗಿರಿಸಿದ್ದಾರೆ. ಇಂತಹ ಮಹಾನ್ ಚೇತನರ ತತ್ವಾದರ್ಶಗಳು ಯುವಜನತೆ ಅಳವಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅಶೋಕ ಹೆಗಡೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯುವ ದಿನದ ಕುರಿತು ವಿವಿಧ ವಿಷಯಯಗಳ ಮೇಲೆ ಲಘು ಭಾಷಣಣವನ್ನು ಏರ್ಪಡಿಸಿ, ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಉಪನ್ಯಾಸಕರುಗಳಾದ ಆಕ್ರಮ್ ಪಾಷಾ, ಡಾ.ದಾಕ್ಷಾಯಣಮ್ಮ ಎನ್.ಸಿ, ಶಿವಪುತ್ರ ಜಾಲವಾದಿ,…

Read More

ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಆಚರಣೆ ಮಕ್ಕಳ ಛದ್ಮವೇಷದೊಂದಿಗೆ ನೆರವೇರಿತು.ಈ ವೇಳೆ ಶಿಕ್ಷಕ ಎಮ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ, ಉಪಾಧ್ಯಕ್ಷ ಡಾ.ಎಸ್.ಬಿ.ವಡವಡಗಿ, ಕಾರ್ಯದರ್ಶಿ ಪಿ.ಎಸ್.ಕಡಿ, ನಿರ್ದೇಶಕ ಬಿ.ಎ.ನಾಲತವಾಡ, ಶಾಂತಾ ಭಟ್ಟ, ರಾಮಚಂದ್ರ ಹೆಗಡೆ, ಜಿ.ಜೆ.ಪಾದಗಟ್ಟಿ, ರಂಜಿತಾ ಭಟ್ಟ, ಮಂಜುನಾಥ ಪಡದಾಳಿ, ಕೀರ್ತಿ ತಳಗೇರಿ, ತೇಜಸ್ವಿನಿ ಕಾಟಿ, ಅನ್ನಪೂರ್ಣ ನಾಗರಾಳ. ಸರಸ್ವತಿ ಮಡಿವಾಳರ್, ಸೇರಿದಂತೆ ಇತರರು ಇದ್ದರು.

Read More