ಸಿಂದಗಿ: ಬ್ಯಾಕೋಡ ಗ್ರಾಮದಿಂದ ಮಾಡಬಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಹೋಟಲ್ ಮತ್ತು ಮನೆಗಳನ್ನು ನಿರ್ಮಿಸಿದ್ದು, ಆ ರಸ್ತೆಯಲ್ಲಿ ಸಂಚರಿಸುವ ನೂರಾರು ರೈತರಿಗೆ ತೊಂದರೆ ಉಂಟಾಗುತ್ತಿದ್ದು, ಅವುಗಳನ್ನು ತೆರವುಗೊಳಿಸುವಂತೆ ಪರಶುರಾಮ ದೊಡಮನಿ ಆಗ್ರಹಿಸಿ ಶರಸ್ತೇದಾರ್ ಜಿ.ಎಸ್.ರೋಡಗಿ ಅವರ ಮೂಲಕ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಬ್ಯಾಕೋಡ ಗ್ರಾಮಸ್ಥರಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ತಾಲೂಕು ದಂಡಾಧಿಕಾರಿಗಳಿಗೆ ಮೂರು ಬಾರಿ ಮನವಿ ಸಲ್ಲಿಸಿದ್ದರು ಅವರು ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಆದಕಾರಣ ಸಧ್ಯ ರೈತರಿಂದ ಇದು ಕೊನಯ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಮುಂದಿನ ೧೫ದಿನಗಳೊಳಗೆ ಇದಕ್ಕೆ ಕ್ರಮ ಕೈಗೊಳ್ಳದೇ ಹೋದರೆ ಸಿಂದಗಿಯಿಂದ ಕಲಕೇರಿಗೆ ಹೋಗುವ ಹೆದ್ದಾರಿ ಮಾರ್ಗವನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ನಿಂಗಪ್ಪ ಭಾವಿಕಟ್ಟಿ, ರಾಯಪ್ಪ ಹಳಗೊಂಡ, ಶ್ರೀಶೈಲ ನಾಯ್ಕೋಡಿ, ಅಮರೇಶ ಹಳಗೊಂಡ, ದರೆಪ್ಪ ಭಾವಿಕಟ್ಟಿ, ಬಸವರಾಜ ತೆಗನೂರ, ದತ್ತು ನಾಗಾವಿ, ಅಣ್ಣಾಸಾಬ ನಧಾಫ್, ಚಂದ್ರು ಹರನಾಳ, ಯಲ್ಲಪ್ಪ ಚೋರಗಸ್ತಿ ಸೇರಿದಂತೆ ಗ್ರಾಮಸ್ಥರು ಮತ್ತು ರೈತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

