ದೇವರಹಿಪ್ಪರಗಿ: ಪರೀಕ್ಷಾರ್ಥಿಗಳು ಆತ್ಮವಿಶ್ವಾಸ, ನಿರ್ಭಯದಿಂದ ನಕಲುಮುಕ್ತ ಪರೀಕ್ಷೆ ಬರೆಯಲು ಪಾಲಕರು ಹಾಗೂ ಸಂಬಂಧಿಗಳು ಸಹಕಾರ ನೀಡಬೇಕು ಎಂದು ಅಧೀಕ್ಷಕ ಐ.ಎಸ್.ನರೂಣಿ ಹೇಳಿದರು.
ಪಟ್ಟಣದ ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಗಣಿತ ವಿಷಯ ಪರೀಕ್ಷೆಯ ಆರಂಭದಲ್ಲಿ ಆವರಣದಲ್ಲಿ ಸೇರಿದ ಪರೀಕ್ಷಾರ್ಥಿಗಳು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದರು. ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆಗಳ ೩ ಪೇಪರ್‌ಗಳನ್ನು ವಿದ್ಯಾರ್ಥಿಗಳು ಅತ್ಯಂತ ಆತ್ಮವಿಶ್ವಾಸದಿಂದ ಬರೆದಿದ್ದಾರೆ. ಅದರಂತೆ ಇಂದು ಸಹ ಗಣಿತ ವಿಷಯದ ಪತ್ರಿಕೆಯನ್ನು ಎದುರಿಸಲಿದ್ದಾರೆ. ಅವರಿಗೆ ಶುಭಕೋರಿ ಆವರಣದಿಂದ ತೆರಳಿ. ಯಾವುದೇ ಕಾರಣಕ್ಕೂ ನಕಲು ನೀಡಿ ಅವರ ಭವಿಷ್ಯಕ್ಕೆ ಅಡ್ಡಿಯಾಗಬೇಡಿ. ಈಗಾಗಲೇ ಶಿಕ್ಷಕವೃಂದ ವರ್ಷಪೂರ್ತಿ ಪಾಠಮಾಡಿ ಅವರನ್ನು ಸಜ್ಜುಗೊಳಿಸಿದೆ, ನೀವು ಅನಗತ್ಯವಾಗಿ ಪರೀಕ್ಷಾ ಸಮಯದಲ್ಲಿ ಅವರಿಗೆ ತೊಂದರೆ ನೀಡಿ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ತರಬೇಡಿ ಹಾಗೂ ನಿಮ್ಮ ಸಮಯವನ್ನು ಬಿರು ಬಿಸಿಲಿನಲ್ಲಿ ವ್ಯರ್ಥ ಮಾಡಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಪರೀಕ್ಷಾ ಕೇಂದ್ರದ ಆವರಣ ಹಾಗೂ ಸುತ್ತಲೂ ಇರುವಂತಿಲ್ಲ ಎಂದು ಕಟ್ಟುನಿಟ್ಟಿನ ಮಾಹಿತಿ ನೀಡಿ, ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದರು.
ಮೋಬೈಲ್ ಸ್ವಾಧಿನಾಧಿಕಾರಿ ವಿಜಯಲಕ್ಷ್ಮಿ ನವಲಿ, ಪ್ರಶ್ನೆಪತ್ರಿಕೆ ಪಾಲಕ ಎಸ್.ಎಸ್.ನಾಯಿಕ್, ಸ್ಥಾನಿಕ ಜಾಗೃತದಳದ ಎನ್.ಬಿ.ಬಿರಾದಾರ, ಪಿ.ಆರ್.ಜಾಧವ, ಎ.ಬಿ.ಚಂಡಕಿ, ಎ.ಬಿ.ನಾಯ್ಕೋಡಿ, ಎಸ್.ಎ.ನಾಗಠಾಣ, ಸಂಗೀತಾ ಕೆ. ನಾಜ್‌ನೀನ್, ಪಿ.ಬಿ.ಆಯೀಷಾ ಸದರ್‌ಖಾನ್ ಹಾಗೂ ಸಂತೋಷ ಬಡಿಗೇರ ಸೇರಿದಂತೆ ಕೋಠಡಿ ಮೇಲ್ವಿಚಾರಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

