ಸಿಂದಗಿ: ಮುಸ್ಲಿಂ ಬಾಂಧವರು ಈ ನಾಡಿನ ಜನರಿಗೆ ಸಮೃದ್ಧಿಯಾಗಿ ಮಳೆ, ಬೆಳೆ, ಅರೋಗ್ಯ ಹಾಗೂ ನೆಮ್ಮದಿ ಬದುಕನ್ನು ಸಾಗಿಸಲು ಆಶೀರ್ವದಿಸಲಿ ಎಂದು ಪ್ರಾರ್ಥಿಸಿ ಪರಮಾತ್ಮನ ಹೆಸರಿನಲ್ಲಿ ತಿಂಗಳ ಪೂರ್ತಿ ಅನ್ನ ನೀರಿಲ್ಲದೆ ಉಪವಾಸ ಮಾಡುತ್ತಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾದ ರಮಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಿರುವ ರೋಜದಾರ ಜನರಿಗೆ ಹಮ್ಮಿಕೊಂಡ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಮಜಾನ್ ಹಬ್ಬದ ದಿನದಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಸಹ ಹೊಸ ಬಟ್ಟೆ ಧರಿಸಿ ಪ್ರಾರ್ಥನೆ ಮಾಡಿ ಬೇರೆ ಬೇರೆ ಸಮುದಾಯದ ವ್ಯಕ್ತಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಸಿಹಿ ಸುರ್ಕುಂಬ್ ಕೂಡಿಸಿ ಭಾವೈಕ್ಯತೆಯಿಂದ ಹಬ್ಬವನ್ನು ಆಚರಣೆ ಮಾಡಿ ಬಡವರಿಗೆ ದಾನ(ಜಾಕಾತ) ಮಾಡುತ್ತಿರುವುದು ಅವರ ಹಾರೈಕೆ ಪರಮೇಶ್ವರ ಕಲ್ಪಿಸಿಕೊಡಲಿ ಎಂದು ಹಾರೈಸುತ್ತೇನೆ ಎಂದರು.
ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ, ಡಾ.ಚನ್ನವೀರ ಮನಗೂಳಿ, ಡಾ.ಶಾಂತವೀರ ಮನಗೂಳಿ, ಎಸ್.ಎಂ.ಪಾಟೀಲ್ ಗಣಿಹಾರ್, ಅಶೋಕ ವಾರದ, ಸಾಧಿಕ ಸುಂಬಡ್, ನೂರಅಹಮದ್ ಅತ್ತಾರ, ಹಾಸಿಂ ಆಳಂದ, ಸೈಫನ್ ನಾಟೀಕಾರ, ಸಲೀಮ್‌ಪಟೇಲ್ ಮರ್ತುರ, ಬಂದೆನವಾಜ್ ಶಹಾಪುರ, ಇಕ್ಬಾಲಸಾಬ್ ತಲಕಾರಿ, ರಾಜು ಖೇಡ್, ಜೀಲಾನಿ ನಾಟೀಕಾರ, ಭಾಷಾಸಾಬ ತಂಬೋಳ್ಳಿ, ರಾಜು ಮಕಾಂದಾರ ಸೇರಿದಂತೆ ಮುಸ್ಲಿಂ ಸಮಾಜದ ಭಾಂದವರು ಹಾಗೂ ಮನಗೂಳಿ ಮನೆತನದ ಸದಸ್ಯರು ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

