ಮುದ್ದೇಬಿಹಾಳ: ತಾಲೂಕಿನ ಗೋನಾಳ ಗ್ರಾಮದಲ್ಲಿ ರಸ್ತೆಗಳ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸದೇ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ ನ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವದಾಗಿ ತಾಲೂಕಿನ ಗೋನಾಳ ಗ್ರಾಮದ ರೈತ ಪರೂತಯ್ಯ ಹಿರೇಮಠ ಎಚ್ಚರಿಸಿದರು.
ಕಾಮಗಾರಿಯ ಫೋಟೋ ಉದಯರಶ್ಮಿ ನ್ಯೂಸ್ ಗೆ ನೀಡಿ ತಮ್ಮ ಅಳಲನ್ನು ತೋಡಿಕೊಂಡ ಅವರು, ತಾಲೂಕಿನ ಗೋನಾಳ ಎಸ್.ಎಚ್.ಗ್ರಾಮದಲ್ಲಿ ನಿರ್ಮಿಸುತ್ತಿರುವ ರಸ್ತೆಗೆ ನಮ್ಮದು ಸಂಪೂರ್ಣ ತಕರಾರು ಇದೆ. ಮಳೆಗಾಲದಲ್ಲಿ ರಸ್ತೆಯ ಮೇಲಿಂದ ಹರಿದು ಬರುವ ಅಪಾರ ಪ್ರಮಾಣದ ನೀರು, ಮತ್ತು ಗ್ರಾಮದ ಕೆಲ ಮನೆಗಳಿಂದ ಬರುವ ಕೊಳಕು ನೀರು ನಮ್ಮ ಮತ್ತು ಇನ್ನೀತರ ರೈತರ ಹೊಲಗಳಿಗೆ ನುಗ್ಗಿ ಮುಂದೆ ಸರಾಗವಾಗಿ ಹರಿಯಲು ಯಾವುದೇ ಚರಂಡಿಯ ವ್ಯವಸ್ಥೆ ಇಲ್ಲದಿರುವದರಿಂದ, ತಿಂಗಳಾನುಗಟ್ಟಲೆ ವ್ಯವಸಾಯ ಮಾಡಲು ಸಾಧ್ಯವಾಗದಷ್ಟು ನಿಂತು ಹಲವು ರೈತರಿಗೆ ತುಂಬಿಬಾರದ ಹಾನಿಯಾಗುತ್ತಿದೆ. ಈ ಸಮಸ್ಯೆ ಕೆಲ ವರ್ಷಗಳ ಹಿಂದೆ ಇದೇ ರಸ್ತೆ ನಿರ್ಮಿಸಿದಾಗಲೇ ಪ್ರಾರಂಭವಾಗಿದೆ. ಆಗಿನಿಂದ ಸಮಸ್ಯೆ ಅನುಭವಿಸುತ್ತಿರುವ ಎಲ್ಲ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಕಳೆದ ವರ್ಷ ಇದೇ ರಸ್ತೆ ನಿರ್ಮಿಸುವಾಗ ತಕರಾರು ನೀಡಿದ್ದಕ್ಕೆ ಕಾಮಗಾರಿ ತಡೆಹಿಡಿಯಲಾಗಿತ್ತು. ಸಧ್ಯ ಮತ್ತೆ ಇದೇ ರಸ್ತೆಗೆ ಕಾಮಗಾರಿ ಪ್ರಾರಂಭವಾಗಿದ್ದು ಎಲ್ಲ ರೈತರು ಆತಂಕಕ್ಕೆ ಒಳಗಾಗಿದ್ದೇವೆ. ರಸ್ತೆಯ ಎರಡೂ ಬದಿ ಸೂಕ್ತ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹರಿದು ಹಳ್ಳ ಕೂಡುವಂತಾದರೆ ರಸ್ತೆ ನಿರ್ಮಾಣಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ ಚರಂಡಿ ನಿರ್ಮಿಸದೇ ರಸ್ತೆ ನಿರ್ಮಾಣಕ್ಕೆ ಮುಂದಾದಲ್ಲಿ ಸಮಸ್ಯೆ ಅನಿಭವಿಸುತ್ತಿರುವ ಎಲ್ಲ ರೈತರು ಬೀದಿಗಿಳಿದು ವಿವಿಧಪರ ಸಂಘಟನೆಗಳ ಬೆಂಬಲ ಪಡೆದು ಹೋರಾಟನಡೆಸುವುದಾಗಿ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

