ದೇವರಹಿಪ್ಪರಗಿ: ಮುಂಬರುವ ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ಗರ್ಭಿಣಿಯರು, ದೈಹಿಕ ನ್ಯೂನ್ಯತೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ದೇವರಹಿಪ್ಪರಗಿ ತಾಲ್ಲೂಕು ವ್ಯಾಪ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿನಾಯಿತಿ ನೀಡುವದು ಹಾಗೂ ಚುನಾವಣೆಯಲ್ಲಿ ಸೌಲಭ್ಯಗಳ ಒದಗಿಸುವ ಕುರಿತಂತೆ ತಾಲ್ಲೂಕು ಶಿಕ್ಷಕರ ಸಂಘದಿಂದ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರದಂದು ಆಗಮಿಸಿದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರರನ್ನು ಕಂಡು, ಗಂಭೀರ ಕಾಯಿಲೆ, ವಿಕಲಚೇತನ, ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು ಹಾಗೂ ಗರ್ಭಿಣಿ, ೨ವರ್ಷದ ಒಳಗಿನ ಮಗುವಿನ ತಾಯಂದಿರಾದ ಕೆಲವು ಶಿಕ್ಷಕಿಯರಿಗೆ ವಿನಾಯಿತಿ ನೀಡುವ ಕುರಿತು ಗಮನ ಸೆಳೆದರು. ಹಾಗೂ ಮತದಾನ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರು, ಊಟ, ಮಹಿಳಾ ಸಿಬ್ಬಂದಿಗೆ ಸೂಕ್ತವಸತಿ, ರಕ್ಷಣೆ, ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.
ಶಿಕ್ಷಕರ ಸಂಘದ ಬೇಡಿಕೆಗಳನ್ನು ಆಲಿಸಿದ ತಹಶೀಲ್ದಾರ ಕಳೆದ ಬೇಸಿಗೆ ರಜೆ ಅವಧಿಯಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗಳಿಕೆ ರಜೆಯ ಆದೇಶಪತ್ರ ನೀಡಿದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ನೌಕರರ ಸಂಘದ ಅಧ್ಯಕ್ಷ ಎಂ.ಜಿ.ಯಂಕಂಚಿ, ಖಜಾಂಚಿ ಪಿ.ಸಿ.ತಳಕೇರಿ. ಸಹಕಾರ್ಯದರ್ಶಿ ರೇಣುಕಾ ಇಂಡಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಪಿ.ಬಿರಾದಾರ, ಎ.ಎಸ್.ವಾಲೀಕಾರ, ಜಾಕೀರ್ ಬಗಲಿ, ದಾನು ರಾಠೋಡ, ಮಲ್ಲಿಕಾರ್ಜುನ ಶಿವಣಗಿ, ಎಸ್.ಕೆ.ಹೊಸಮನಿ, ಎಸ್.ಎಮ್.ಹಿರೇಕುರುಬರ, ಆನಂದ ಶಿಕ್ಕೇರಿ, ಮಹಾಂತಯ್ಯ ಮಠಪತಿ, ಎಮ್.ಎಸ್.ಓತಿಹಾಳ, ಜಿ.ಎಸ್.ಬಿರಾದಾರ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

