Author: editor.udayarashmi@gmail.com

ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೆ | ಏಳು ಜನರ ವಿರುದ್ಧ ಪ್ರಕರಣ ದಾಖಲು | ಆರೋಪಿಗಳ ಬಂಧನಕ್ಕೆ ಪೊಲೀಸರ ಬಲೆ | ಬೆಂಗಳೂರು: ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೊಂಡು, ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಏಳು ಜನ ಕಿಡಿಗೇಡಿಗಳ ವಿರುದ್ಧ ಬೆಂಗಳೂರು ದಕ್ಷಿಣ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.ಬೆಂಗಳೂರು ನಿವಾಸಿ ಹರೀಶ್ ನಾಗರಾಜು ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದು, ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಾಮಾಜಿಕ ಜಾಲತಾಣ ವೇದಿಕೆಗಳಾದ ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್‌ ಖಾತೆಗಳಲ್ಲಿ ಸಿದ್ದರಾಮಯ್ಯ ಕುರಿತ ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೊಂಡಿರುವವರ ವಿರುದ್ಧ ದೂರು ದಾಖಲಿಸಲಾಗಿದೆ.ಈ ಕುರಿತು ಸ್ವತಃ ಸಿದ್ಧರಾಮಯ್ಯ ತಮ್ಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದು, ‘ಬಿಜೆಪಿ –…

Read More

ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದ ನಿವಾಸಿ, ಹುಬ್ಬಳ್ಳಿಯ ವಿದ್ಯಾನಿಕೇತನ ಕಾಲೇಜು ವಿದ್ಯಾರ್ಥಿನಿ ಸಹನಾ ಈಳಗೇರ ೫೯೪ (೯೯%) ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ೫ನೇ ಸ್ಥಾನ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

Read More

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ವಿ.ವಿ ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಆಕ್ಸಪರ್ಡ ಪಿಯು ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ಸ್ಥಾನ ಗಿಟ್ಟಿಸುವ ಮೂಲಕ ಸಾಧನೆಗೈದಿದ್ದಾರೆ.ಅಮೃತಗೌಡ ಬಿರಾದಾರ ಹಾಗೂ ಆನಂದ ಶಂಕರಲಿಂಗಪ್ಪ ತಲಾ ೫೯೦ (೯೮.೩%) ಅಂಕಗಳನ್ನು ಪಡೆದು ರಾಜ್ಯಕ್ಕೆ ೯ನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿದ್ರಾಮೇಶ ಢವಳಗಿ ಹಾಗೂ ಶ್ವೇತಾ ವಜ್ರಮಟ್ಟಿ ತಲಾ ೫೮೮ (೯೮%) ಅಂಕಗಳನ್ನು ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಮತ್ತು ಪೂಜಾ ಪಟ್ಟೇದ ಹಾಗೂ ರಾಧಿಕಾ ತಿಳ್ಳಿಹಾಳ ತಲಾ ೫೮೬(೯೭.೬೬%) ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ.ಸಂಸ್ಥೆಯಲ್ಲಿ ಒಟ್ಟು ೯೦೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇಕಡಾ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದು ಗಮನಸೆಳೆದಿದೆ. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ ಮತ್ತು ಕಾಲೇಜಿನ ಪ್ರಾಂಶುಪಾಲ ರೇವಣಸಿದ್ದ ಚಲವಾದಿ ಸೇರಿದಂತೆ ಎಲ್ಲ ಉಪನ್ಯಾಸಕರು ಮತ್ತು ಭೋಧಕೇತರ ಸಿಬ್ಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ವಿಜಯಪುರ: ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿಶುಕ್ರವಾರ ಮುಂಜಾನೆ 11:00 ಗಂಟೆಗೆ ಯುಗಾದಿ ಕಾವ್ಯ ಸಂಭ್ರಮ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಕನ್ನೂರ ಗುರಮಠದ ಸೋಮನಾಥ ಶಿವಾಚಾರ್ಯರು ವಹಿಸಲಿದ್ದಾರೆ. ಉದ್ಘಾಟಿನೆ ವಿಶ್ರಾಂತ ಡಿ ಎಸ್ ಪಿ ಬಸವರಾಜ ಚೌಕಿಮಠ ಮಾಡಲಿದ್ದಾರೆ. ಅಧ್ಯಕ್ಷತೆ ಡಿ ಎಸ್ ಪಿ ವಿಜಯಪುರ ಬಸವರಾಜ ಯಲಗಾರ ವಹಿಸುತ್ತಾರೆ.ಮುಖ್ಯ ಅತಿಥಿಗಳಾಗಿ ಜ್ಯೋತಿ ಚೌಕಿಮಠ, ಶಿಲ್ಪಾ ಯಲಗಾರ, ಈರಣ್ಣ ಬಿರಾದಾರಗೌಡರ, ಹೊನ್ನಪ್ಪ ಬಿಸನಾಳ, ಇಸಾಕ ಸಾರವಾಡ, ಜಗದೀಶ ಸಾಲಳ್ಳಿ ಆಗಮಿಸಲಿದ್ದಾರೆ.ಕವನ ವಾಚನ ಮಾಡುವ ಕವಿಗಳುಶೋಭಾ ಮೇಡೆಗಾರ, ಮಡಿವಾಳಮ್ಮ ನಾಡಗೌಡ, ಶಿಲ್ಪಾ ಬಸ್ಮೆ, ರೂಪಾ ರಜಪೂತ, ಶೋಭಾ ಹರಿಜನ, ಜಿ ಪಿ ಬಿರಾದಾರ, ಶಿವಾಜಿ ಮೋರೆ, ಶಿಲ್ಪಾ ಹಂಜಿ, ಪಾವ೯ತಿ ಸೊನ್ನದ, ಅಣ್ಣುಗೌಡ ಬಿರಾದಾರ, ಕಾಶಿರಾಯ ಹತ್ತಳ್ಳಿ, ಸಾವಿತ್ರಿ ಮೊನಾಜಿ, ಜಗದೀಶ ಬಿರಾದಾರ, ಅನ್ನಪೂರ್ಣ ಚೊಳಕೆ, ರುದ್ರಮ್ಮ ಗಿಡ್ಡಪ್ಪಗೋಳ, ಶಿವಲೀಲಾ ಕೊರವಾರ, ಶಿವಲೀಲಾ ಕೋರಿ, ಶಾಂತಲಾ ಪಾಟೀಲ, ಶ್ರೀಕಾಂತ ಮಾದರ, ಗಿರಿಜಾ ಪಾಟೀಲ, ಭಾರತಿ ಗೊಂಗಡಿ, ವಿದ್ಯಾ ಕಲ್ಯಾಣಶೆಟ್ಟಿ, ಸಿದ್ದನಗೌಡ ಕಾಶಿನಕುಂಟೆ, ಪ್ರತಿಭಾ…

Read More

ದೇವರಹಿಪ್ಪರಗಿ: ಪಟ್ಟಣದ ಬಿ.ಎಲ್‌ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಶೇ ೯೮.೪೦ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ ೯೭.೭೭ ಒಟ್ಟಾರೆ ಶೇ ೯೮.೨೩ ಫಲಿತಾಂಶ ಬಂದಿದೆ.ಕಲಾ ವಿಭಾಗದಲ್ಲಿ ದೀಪಾರಾಣಿ ತಳವಾರ ಸಮಾಜಶಾಸ್ತ್ರ ಹಾಗೂ ರಾಜ್ಯಶಾಸ್ತç ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದು ಶೇ ೯೭.೮೩ ಫಲಿತಾಂಶದೊಂದಿಗೆ ಪ್ರಥಮ, ಸೃಷ್ಠಿ ಹಡಗಲಿ ಕನ್ನಡ ಹಾಗೂ ಸಮಾಜಶಾಸ್ತ್ರ ವಿಷಯಗಳಲ್ಲಿ ೧೦೦ಕ್ಕೆ ೧೦೦ ಅಂಕಗಳಿಸಿ ಶೇ ೯೬.೮೩ ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಅಂಕಿತಾ ಕಾಖಂಡಕಿ ಮತ್ತು ದೀಪಾ ಪೂಜಾರಿ ಶೇ ೯೫.೩೩ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಸುಷ್ಮಾ ಬಾಗೇವಾಡಿ ಶೇ ೯೪.೬೭ ಫಲಿತಾಂಶದೊಂದಿಗೆ ಪ್ರಥಮ, ಕೀರ್ತಿ ಬಿರಾದಾರ ಶೇ ೯೩.೮೩ ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಲಕ್ಷ್ಮೀ ಬಿರಾದಾರ ಶೇ ೯೨.೮೩ ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿನೀಯರ ಸಾಧನೆಗೆ ಪಾಲಕರು, ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಸದಸ್ಯರು ಹಾಗೂ ಪ್ರಾಚಾರ್ಯರು, ಬೋಧಕ,…

Read More

ಸಿಂದಗಿ: ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಆಲಗೂರ ಅವರ ೭ ವರ್ಷದ ಸುಪುತ್ರ ಮೊಹಮ್ಮದ್ ಜುಬೇರ ನಾಡಿನ ಒಳಿತಿಗಾಗಿ ದೊಡ್ಡವರಂತೆ ಕಟ್ಟುನಿಟ್ಟಾಗಿ ತನ್ನ ಮೊದಲನೆಯ ವರ್ಷದ ಉಪವಾಸವನ್ನು ಆಚರಿಸಿ, ಕುಟುಂಬದ ಸದಸ್ಯರ ಪ್ರೀತಿಗೆ ಪಾತ್ರನಾಗಿದ್ದಾನೆ.

Read More

ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತ ಕೇಳುತ್ತಿರುವ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರ ವಿರುದ್ದ ಕಾಂಗ್ರೇಸ್ ವಕ್ತಾರ ರಾಜಶೇಖರ ಕೂಚಬಾಳ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಖಾಸಗಿ ಹೊಟೇಲನಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಮೇಶ ಜಿಗಜಿಣಗಿ ಇವರಿಬ್ಬರನ್ನು ಸಮಾಜದ ಎರಡು ಕಣ್ಣುಗಳಾಗಿ ಭಾವಿಸಲಾಗುತ್ತದೆ. ಆದರೆ ರಮೇಶ ಜಿಗಜಿಣಗಿ ಅವರು ೩೦ವರ್ಷಗಳ ಕಾಲ ಸಂಸತ್ತಿನಲ್ಲಿದ್ದು ರಾಜಕೀಯ ಮಾಡಿದ ಅವರು ಇಂದು ಪ್ರಧಾನ ಮಂತ್ರಿಯ ಹುದ್ದೆಗೆ ಪೈಪೋಟಿ ಮಾಡುವ ವ್ಯಕ್ತಿತ್ವವುಳ್ಳವರಾಗಬೇಕಿತ್ತು, ಆದರೆ ನಮಗ್ ಯಾರ್ ಮತ ಹಾಕ್ತಾರ್ ಮೋದಿಗೆ ಮತ್ ಹಾಕ್ತಾರ್ ಎನ್ನುವುದು ಅತ್ಯಂತ ಬಾಲೀಶವಾಗಿದೆ. ಏಕೆಂದರೆ ಮೋದಿ ಸಂಸತ್ತಿಗೆ ಪಾದಾರ್ಪಣೆ ಮಾಡುವ ಮೊದಲು ೧೫ವರ್ಷಗಳ ಕಾಲ ಸಂಸದರಾಗಿ ರಾಜಕೀಯ ಅನುಭವಿಕರು ತಮ್ಮ ಆತ್ಮವಂಚನೆ ಮಾಡಿಕೊಂಡು ಈ ಮಾತನ್ನು ಹೇಳುತ್ತಿದ್ದಾರೆ. ಅಧಿಕಾರದ ಆಸೆಗಾಗಿ ತಮ್ಮ ಸ್ವಾಭಿಮಾನ ಬಿಟ್ಟು ಮಾತನಾಡುವುದಷ್ಟೇ ಅಲ್ಲದೇ ದಲಿತರ ಆಶೋತ್ತರಗಳನ್ನು ಕೆಣಕುತ್ತಿದ್ದಾರೆ.ಸುಮಾರು ೩೦ ವರ್ಷಗಳ ಕಾಲ ಸಂಸತ್ತಿನಲ್ಲಿದ್ದು, ಒಂದೇ ಒಂದು…

Read More

ಸಿಂದಗಿ: ಪಟ್ಟಣದ ಪಿ.ಇ.ಎಸ್. ಕಾಲೇಜಿನ ದ್ವಿತೀಯ ಪಿ.ಯು.ಸಿ. ಫಲಿತಾಂಶವು ಶೇ. ೧೦೦ ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು ೩೦೮ ವಿದ್ಯಾರ್ಥಿಗಳಲ್ಲಿ ೧೧೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೧೬೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ೧೭ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ೫ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ಕಲಾ ವಿಭಾಗದಲ್ಲಿ ಕು. ಅಮೇರಾಕೌಸರ್ ತರಫದಾರ ೫೮೬ (೯೭.೬೬%) ಪ್ರಥಮ, ಕು. ಮಹೇಶ ಚಂದಾನವರ ೫೮೪ (೯೭.೩೩%) ದ್ವಿತೀಯ, ಕು. ನಿಂಗಮ್ಮ ನಾಟೀಕಾರ ೫೭೮ (೯೬.೩೩%) ಹಾಗೂ ಸುಜಾತಾ ಗಡೆದ ೫೭೮ (೯೬.೩೩%) ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಕು. ಭಾಗ್ಯಶ್ರೀ ಕಲ್ಲೂರ ೫೮೧ (೯೬.೮೩%) ಪ್ರಥಮ, ಕು. ದಾನಮ್ಮ ಅಗಸರ ೫೭೮ (೯೬.೩೩%) ದ್ವಿತೀಯ, ಸಾನಿಯಾ ತಾಂಬೋಳಿ ೫೭೬ (೯೬.೦೦%) ತೃತೀಯ ಸ್ಥಾನ ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಕು. ರಾಜೇಶ್ವರಿ ಪೂಜಾರಿ ೫೮೦ (೯೬.೬೬%) ಪ್ರಥಮ, ಕು. ಲಕ್ಷೀ ಬಿರಾದಾರ ೫೭೩ (೯೫.೫೦%) ದ್ವಿತೀಯ, ಕು. ಮಹಾನಂದ ಬಿರಾದಾರ ೫೭೨ (೯೫.೩೩%) ತೃತೀಯ ಸ್ಥಾನ ಪಡೆದಿದ್ದಾರೆ.ವಿವಿಧ ವಿಷಯಗಳಲ್ಲಿ…

Read More

ಸಿಂದಗಿ: ೨೦೨೩-೨೪ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಕಲಾ ವಿಭಾಗದಲ್ಲಿ ಕುಮಾರಿ ಅಶ್ವಿನಿ ಅಲಬಾಳ ೫೮೮ (೯೮.೦೦%) ಪ್ರಥಮ ಸ್ಥಾನ, ಕುಮಾರಿ ಗಂಗಾಬಾಯಿ ಖೇಡಗಿ ೫೮೬ (೯೭.೬೬%), ದ್ವಿತೀಯ ಸ್ಥಾನ, ಕುಮಾರಿ ಭಾಗ್ಯವಂತಿ ಖರಾಬಿ ೫೮೨ (೯೭.೦೦%), ಕುಮಾರ ಭಗವಂತರಾಯ ಬಗಲಿ ೫೮೨ (೯೭.೦೦%), ಕುಮಾರಿ ಐಶ್ವರ್ಯ ಕರಗಾರ ೫೮೨ (೯೭.೦೦%) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು ಕಲಾ ವಿಭಾಗದಲ್ಲಿ ೧೪೮ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಕುಮಾರಿ ಭಾರತಿ ಬಸ್ತಿಹಾಳ ೫೮೧ (೯೬.೮೩%), ಕುಮಾರ ಅರವಿಂದ ನಡುವಿನಮನಿ ೫೮೦ (೯೬.೬೬%) ಕುಮಾರ ಕಾರ್ತಿಕ ಪತ್ತಾರ ೫೭೬ (೯೬.೦೦%) ಸೇರಿದಂತೆ ಒಟ್ಟು ೬೨ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ವಿಜ್ಞಾನ…

Read More

ಸಿಂದಗಿ: ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇಕಡಾ ೯೫.೫೫ ರಷ್ಟು ದಾಖಲೆಯಾಗಿದೆ.ಕಾಲೇಜಿಗೆ ಪ್ರಥಮ ಸ್ಥಾನವನ್ನು ಕಲಾ ವಿಭಾಗದ ವಿಧ್ಯಾರ್ಥಿ ಬಸವರಾಜ ಚಪ್ಪರಮನಿ (೫೭೮) ೯೬.೩೩ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ಯಲ್ಲಾಲಿಂಗ ಹದಗಲ್ಲ (೫೭೩) ೯೫.೫% ಪಡೆದುಕೊಂಡು ದ್ವಿತೀಯ ಸ್ಥಾನ, ರಾಜಾಪಟೇಲ ಬಿರಾದಾರ (೫೭೨) ೯೫.೩೩ % ಅಂಕ ಪಡೆದುತೃತೀಯ ಸ್ಥಾನ, ಪೂಜಾ ಬಿರಾದಾರ (೫೭೧) ೯೫.೧೬ % ಅಂಕ ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಮುತ್ತಪ್ಪ ಮೇಲಿನಮನಿ (೫೪೮) ೯೧.೩೩%, ವಿಜ್ಞಾನ ವಿಭಾಗದಲ್ಲಿ ಚೈತ್ರಾ ದಿಡ್ಡಿಮನಿ (೫೧೪) ೮೫.೬೬ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಪರೀಕ್ಷೆಗೆ ಹಾಜರಾದ ಒಟ್ಟು ೪೩೧ ವಿದ್ಯಾರ್ಥಿಗಳಲ್ಲಿ ೪೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೨೫೩ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, ೯೧ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಹಾಗೂ ೨೪ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಮತ್ತು…

Read More