ಸಿಂದಗಿ: ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇಕಡಾ ೯೫.೫೫ ರಷ್ಟು ದಾಖಲೆಯಾಗಿದೆ.
ಕಾಲೇಜಿಗೆ ಪ್ರಥಮ ಸ್ಥಾನವನ್ನು ಕಲಾ ವಿಭಾಗದ ವಿಧ್ಯಾರ್ಥಿ ಬಸವರಾಜ ಚಪ್ಪರಮನಿ (೫೭೮) ೯೬.೩೩ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ. ಯಲ್ಲಾಲಿಂಗ ಹದಗಲ್ಲ (೫೭೩) ೯೫.೫% ಪಡೆದುಕೊಂಡು ದ್ವಿತೀಯ ಸ್ಥಾನ, ರಾಜಾಪಟೇಲ ಬಿರಾದಾರ (೫೭೨) ೯೫.೩೩ % ಅಂಕ ಪಡೆದುತೃತೀಯ ಸ್ಥಾನ, ಪೂಜಾ ಬಿರಾದಾರ (೫೭೧) ೯೫.೧೬ % ಅಂಕ ಪಡೆದುಕೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಮುತ್ತಪ್ಪ ಮೇಲಿನಮನಿ (೫೪೮) ೯೧.೩೩%, ವಿಜ್ಞಾನ ವಿಭಾಗದಲ್ಲಿ ಚೈತ್ರಾ ದಿಡ್ಡಿಮನಿ (೫೧೪) ೮೫.೬೬ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಪರೀಕ್ಷೆಗೆ ಹಾಜರಾದ ಒಟ್ಟು ೪೩೧ ವಿದ್ಯಾರ್ಥಿಗಳಲ್ಲಿ ೪೦ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೨೫೩ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, ೯೧ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಹಾಗೂ ೨೪ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಮತ್ತು ಆಡಳಿತ ಮಂಡಳಿಯ ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

