ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ವಿ.ವಿ ಟ್ರಸ್ಟ್ನ ಅಡಿಯಲ್ಲಿ ನಡೆಯುತ್ತಿರುವ ಆಕ್ಸಪರ್ಡ ಪಿಯು ಸಾಯಿನ್ಸ್ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದಲ್ಲಿ ಸ್ಥಾನ ಗಿಟ್ಟಿಸುವ ಮೂಲಕ ಸಾಧನೆಗೈದಿದ್ದಾರೆ.
ಅಮೃತಗೌಡ ಬಿರಾದಾರ ಹಾಗೂ ಆನಂದ ಶಂಕರಲಿಂಗಪ್ಪ ತಲಾ ೫೯೦ (೯೮.೩%) ಅಂಕಗಳನ್ನು ಪಡೆದು ರಾಜ್ಯಕ್ಕೆ ೯ನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿದ್ರಾಮೇಶ ಢವಳಗಿ ಹಾಗೂ ಶ್ವೇತಾ ವಜ್ರಮಟ್ಟಿ ತಲಾ ೫೮೮ (೯೮%) ಅಂಕಗಳನ್ನು ಪಡೆದು ಕಾಲೇಜಿಗೆ ದ್ವೀತಿಯ ಸ್ಥಾನ ಮತ್ತು ಪೂಜಾ ಪಟ್ಟೇದ ಹಾಗೂ ರಾಧಿಕಾ ತಿಳ್ಳಿಹಾಳ ತಲಾ ೫೮೬(೯೭.೬೬%) ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ.
ಸಂಸ್ಥೆಯಲ್ಲಿ ಒಟ್ಟು ೯೦೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶೇಕಡಾ ೧೦೦ಕ್ಕೆ ೧೦೦ರಷ್ಟು ಫಲಿತಾಂಶ ಪಡೆದು ಗಮನಸೆಳೆದಿದೆ. ಮಕ್ಕಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ ಮತ್ತು ಕಾಲೇಜಿನ ಪ್ರಾಂಶುಪಾಲ ರೇವಣಸಿದ್ದ ಚಲವಾದಿ ಸೇರಿದಂತೆ ಎಲ್ಲ ಉಪನ್ಯಾಸಕರು ಮತ್ತು ಭೋಧಕೇತರ ಸಿಬ್ಬಂಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

